Technology: ಭಾರತದಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಕಾಲಿಡಲು ಸಿದ್ದವಾದ ಆಪಲ್ – ಈ ಬಾರಿ ಮೊಬೈಲ್, ಲ್ಯಾಪ್ಟಾಪ್ ಅಲ್ಲ ಮತ್ತೇನು?

Technology: ಆಪಲ್ ಸಂಸ್ಥೆಯ ಪ್ರಾಡಕ್ಟ್ (Apple company) ಗಳು ಎಂದರೆ ಜನರಲ್ಲಿ ವಿಶೇಷವಾದ ಕ್ರೇಜ್, ಐಫೋನ್ (Iphone) ಗಳು, ಆಪಲ್ ಲ್ಯಾಪ್ ಟಾಪ್ (Laptop) ಈ ಎಲ್ಲಾ ವಸ್ಗುಗಳನ್ನು ಬಹಳ ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಆಪಲ್ ಸಂಸ್ಥೆಯು ಹಲವಾರು ಬೇರೆ ಪ್ರಯೋಜನಗಳನ್ನು ಯುಎಸ್ ನಲ್ಲಿ ಹೊಂದಿದೆ. ಇದೀಗ ಭಾರತದಲ್ಲಿ ಕೂಡ ಫೋನ್ ಲ್ಯಾಪ್ ಟಾಪ್ ಬಿಟ್ಟು ಬೇರೊಂದನ್ನು ಶುರು ಮಾಡುವುದಕ್ಕೆ ಸಜ್ಜಾಗಿದೆ. ಅದೇನು ಗೊತ್ತಾ?

ಆಪಲ್ ಈಗ ತಮ್ಮ ಸಂಸ್ಥೆಯಿಂದ UPI ಪೇಮೆಂಟ್ ಆಪ್, ಆಪಲ್ ಪೇ ಆಪ್ ಅನ್ನು ಲಾಂಚ್ ಮಾಡುವುದಕ್ಕೆ ಪ್ಲಾನ್ ಮಾಡಿದೆ. ಭಾರತದಲ್ಲಿ ಈಗ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಈ ಎಲ್ಲಾ ಆಪ್ ಗಳನ್ನು ಯುಪಿಐ ಪೇಮೆಂಟ್ಸ್ ಗಳಿಗೆ ಬಳಸಲಾಗುತ್ತಿದೆ. ಈಗ ಆಪಲ್ ಸಂಸ್ಥೆಯು ಆಪಲ್ ಪೇ ಅನ್ನು ಭಾರತದಲ್ಲಿ ಲಾಂಚ್ ಮಾಡಲು ಮಾತುಕತೆ ನಡೆಸುತ್ತಿದ್ದು, ಒಂದು ವೇಳೆ ಇದು ಲಾಂಚ್ ಆದರೆ, ಐಫೋನ್ ಬಳಕೆದಾರರು ನೇರವಾಗಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ..

ಥರ್ಡ್ ಪಾರ್ಟಿ ಆಪ್ ಗಳಿಲ್ಲದೆ, ನೇರವಾಗಿಯೇ ಯುಪಿಐ ಮೂಲಕ ಹಣ ಪಾವತಿ ಮಾಡಬಹುದು. ಈ ಬಗ್ಗೆ ಭಾರತದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಜೊತೆಯಲ್ಲಿ ಮಾತುಕತೆ ನಡೆಸುವುದಕ್ಕೆ ಪ್ಲಾನ್ ಮಾಡಿಕೊಂಡಿದೆ. ಎಲ್ಲವೂ ಅಂದುಕೊಂಡ ಹಾಗೆ ಆದರೆ, ಆಪಲ್ ಪೇ ಭಾರತದಲ್ಲಿ ಆದಷ್ಟು ಬೇಗ ಲಾಂಚ್ ಆಗಲಿದೆ, ಈ ವಿಚಾರ ಐಫೋನ್ ಯೂಸರ್ ಗಳಿಗೆ ಸಂತೋಷ ತಂದಿದೆ..

ಇದೊಂದೇ ಅಲ್ಲದೆ ಆಪಲ್ ಕಾರ್ಡ್ ಅನ್ನು ಭಾರತದಲ್ಲಿ ಲಾಂಚ್ ಮಾಡಬೇಕು ಎನ್ನುವ ಮಾತುಕತೆ ಕೂಡ ನಡೆಯುತ್ತಿದೆ. ಆಪಲ್ ಕಾರ್ಡ್ ಪ್ರಸ್ತುತ ಯುಎಸ್ ಗೆ ಮಾತ್ರ ಸೀಮಿತವಾಗಿದೆ. ಈ ಕಾರ್ಡ್ ಅನ್ನು ಭಾರತಾದಲ್ಲಿ ಕೂಡ ಲಾಂಚ್ ಮಾಡುವುದಕ್ಕಾಗಿ HDFC ಬ್ಯಾಂಕ್ ನ CEO ಹಾಗೂ MD ಶಶಿಧರ್ ಜಗದೀಶನ್ ಅವರ ಜೊತೆಯಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಆಪಲ್ ಸಂಸ್ಥೆ ಇವ UPI ಜೊತೆಗೆ Face ID integration ಮಾಡುವ ಪ್ಲಾನ್ ಸಹ ಹೊಂದಿದೆ.

ಇದರಿಂದ ಹಣಕಾಸಿನ ವಹಿವಾಟು ಇನ್ನಷ್ಟು ಭದ್ರತೆಯನ್ನು ಒಳಗೊಂಡಿರಲಿದೆ. HDFC ಜೊತೆಗೆ ಕೋಬ್ರಾಂಡೆಡ್ ಆಗಿ ಆಪಲ್ ಕಾರ್ಡ್ ಲಾಂಚ್ ಮಾಡುವ ಮಾತುಕತೆ ಹಾಗೆಯೇ RBI ಜೊತೆಗೂ ಮಾತುಕತೆ ನಡೆಸಲಾಗುತ್ತದೆ. ಒಟ್ಟಿನಲ್ಲಿ ಆಪಲ್ ಸಂಸ್ಥೆ ಭಾರತದಲ್ಲಿ ಬಹಳಷ್ಟು ಹೊಸತನ್ನು ಪರಿಚಯ ಮಾಡಲಿದೆ.

Comments are closed.