Arvind Kejriwal: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಕೇಜ್ರಿವಾಲ್ ರವರಿಗೆ ಬಿಗ್ ಶಾಕ್- ಸಿಂಪಲ್ ಎಂದು ಹಣ ಖರ್ಚು ಮಾಡಿದಕ್ಕೆ ಏನಾಗಿದೆ ಗೊತ್ತೆ?

Arvind Kejriwal: ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಈಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಕೇಜ್ರಿವಾಲ್ ಅವರು ತಮ್ಮ ಮನೆಯನ್ನು ನವೀಕರಣ ಮಾಡುವುದಕ್ಕೆ ಖರ್ಚು ಮಾಡಿರುವ ಹಣದ ಬಗ್ಗೆ ಸಿಎಜಿ ಆಡಿಟ್ ನಡೆಯಬೇಕು ಎಂದು ಹೇಳಲಾಗಿದೆ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ಶಿಫಾರಸು ನೀಡಿರುವುದರಿಂದ ಮಂಗಳವಾರ ಆಡಿಟ್ (Audit) ನಡೆಯಲು ಗೃಹ ವ್ಯವಹಾರಗಳ ಸಚಿವಾಲಯ ಆದೇಶ ನೀಡಿದೆ. ಇದನ್ನೂ ಓದಿ: Technology: ಭಾರತದಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಕಾಲಿಡಲು ಸಿದ್ದವಾದ ಆಪಲ್ – ಈ ಬಾರಿ ಮೊಬೈಲ್, ಲ್ಯಾಪ್ಟಾಪ್ ಅಲ್ಲ ಮತ್ತೇನು?

ಗೃಹ ವ್ಯವಹಾರಗಳ ಸಚಿವಾಲಯಕ್ಕೆ 2023ರ ಮೇ 23ರಂದು ಲೆಫ್ಟಿನೆಂಟ್ ಗವರ್ನರ್ (Delhi Lieutenant Governor) ಸೆಕ್ರೆಟೇರಿಯಟ್ ಪತ್ರ ಬರೆದಿದ್ದಾರೆ. ದೆಹಲಿಯ ಮುಖ್ಯಮಂತ್ರಿಗಳು ಮನೆಯ ನವೀಕರಣಕ್ಕಾಗಿ ಖರ್ಚು ಮಾಡಿರುವ ಹಣದಲ್ಲಿ ಅಕ್ರಮವಿದೆ, ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಲ್.ಜಿ ಅವರು ಸಹ ಈ ವಿಚಾರದ ಬಗ್ಗೆ ತನಿಖೆ ನಡೆಸಿ ರಿಪೋರ್ಟ್ (Report) ಸಲ್ಲಿಸಬೇಕು ಎಂದು ಏಪ್ರಿಲ್ 27ರಂದು ಮುಖ್ಯ ಕಾರ್ಯದರ್ಶಿಗಳಿಗೆ ಆದೇಶ ನೀಡಿದ್ದರು.

ಎಎಪಿ ಪಕ್ಷದ ಮುಖ್ಯಸ್ಥ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ಸುಮಾರು 45 ಕೋಟಿ ರೂಪಾಯಿ ಮೊತ್ತದಷ್ಟು ಹಣವನ್ನು ನವೀಕರಣಕ್ಕೆ ಖರ್ಚು ಮಾಡಲಾಗಿದೆ ಎಂದು ಬಿಜೆಪಿ ಆರೋಪ ಮಾಡಿತ್ತು..ಹಾಗೆಯೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನರಿಗಾಗಿ ಇರುವ ಹಣವನ್ನು ತಮ್ಮ ಮನೆಯ ನವೀಕರಣಕ್ಕಾಗಿ ಬಳಸಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬಂದಿತ್ತು. ಕೇಜ್ರಿವಾಲ್ ಅವರ ಮನೆಗೆ ಡೋರ್ ಪಾಲಿಶ್, ವಿಯೆಟ್ನಾಮ್ ಮಾರ್ಬಲ್.. ಇದನ್ನು ಓದಿ: Political News: ಬೇರೆ ಕಾಂಗ್ರೆಸ್ ನಾಯಕರು, ಕೇಂದ್ರ ಅಕ್ಕಿ ಕೊಡುತ್ತಿಲ್ಲ ಎಂದರೆ – ರಾಮಲಿಂಗ ರೆಡ್ಡಿ ಆರೋಪ ಹೊರಿಸಿದ್ದು ಯಾರ ಮೇಲೆ ಗೊತ್ತೇ?

ಐಷಾರಾಮಿ ಪರದೆಗಳು, ಆಧುನಿಕವಾದ ಕಾರ್ಪೆಟ್ ಗಳು ಹಾಗೂ ಇನ್ನಿತರ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರು ಸರಳತೆ ಹಾಗೂ ಪ್ರಾಮಾಣಿಕತೆ ಈ ಎರಡನ್ನು ಉಳಿಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರ ಅವರು ಆರೋಪ ಮಾಡಿದ್ದರು. ಆದರೆ ವಿಪಕ್ಷ ನಾಯಕ ಆಗಿರುವ ಸಂಜಯ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಸಮರ್ಥಿಸಿಕೊಂಡಿದ್ದು, PWD ಶಿಫಾರಸು ಮಾಡಿದ ನಂತರ ಈ ನವೀಕರಣ ನಡೆದಿದೆ ಎಂದು ಹೇಳಿದ್ದಾರೆ.

ವಿಪಕ್ಷ ಬಿಜೆಪಿ ಪಕ್ಷದ ವಿರುದ್ಧ ಮಾತನಾಡಿದ್ದು, ನಮ್ಮ ಪಕ್ಷದ ನಾಯಕನ ಬಗ್ಗೆ ಆರೋಪ ಮಾಡಿ, ಅದಾನಿ ಸಮಸ್ಯೆ ಪುಲ್ವಾಮ ದಾಳಿ ಇವುಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೋವಿಡ್ ಇದ್ದ ವೇಳೆಯಲ್ಲಿ ಜನರು ಆಕ್ಸಿಜನ್ ಸಿಲಿಂಡರ್ ಸಿಗದೆ ತೊಂದರೆಯಲ್ಲಿದ್ದಾಗ ಕೇಜ್ರಿವಾಲ್ ಅವರು ತಮ್ಮ ಮನೆಗೆ ಖರ್ಚು ಮಾಡಿದ್ದಾರೆ ಅವರು ರಾಜೀನಾಮೆ ಕೊಡಬೇಕು ಎನ್ನುವ ಮಾತು ಕೂಡ ಕೇಳಿಬಂದಿತ್ತು. ಇದನ್ನೂ ಓದಿ; New Bike: KTM 390 ಅಥವಾ ಡಾಮಿನಾರ್ 400 – ಇವುಗಳಲ್ಲಿ ಬೆಸ್ಟ್ ಆಯ್ಕೆ ಯಾವುದು ಗೊತ್ತೇ? ಯಾರಿಗೆ ಯಾವುದು ಸೂಕ್ತ ಗೊತ್ತೇ?

Comments are closed.