Mobile tips: ಎಲ್ಲಾ ನಂಬರ್ ಗಳನ್ನೂ ಒಂದೇ ಬಾರಿಗೆ ಹಳೆ ಫೋನ್ ನಿಂದ ಹೊಸ ಫೋನ್ ಗೆ ಕಳುಹಿಸುವುದು ಹೇಗೆ ಗೊತ್ತೇ?

Mobile tips: ಈಗಿನ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಬಹುತೇಕ ಎಲ್ಲರೂ ಕೂಡ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. ನಮಗೆ ಸಂಬಂಧಿಸಿದ ಎಲ್ಲಾ ಡೇಟಾ ನಮ್ಮ ಮೊಬೈಲ್ ನಲ್ಲಿಯೇ ಇರುತ್ತದೆ ಎನ್ನುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಈಗ ಬಹಳ ಮುಖ್ಯವಾಗಿರುವುದೇ ಈ ಡೇಟಾ,. ಎಲ್ಲಾ ಡೇಟಾವನ್ನು ಹುಷಾರಾಗಿ ಇಟ್ಟುಕೊಳ್ಳಬೇಕು. ಅದರಲ್ಲೂ ಫೋನ್ ನಂಬರ್ ಗಳು ಬಹಳ ಮುಖ್ಯವಾದ ಡೇಟಾ ಆಗಿರುತ್ತದೆ. ಇದನ್ನೂ ಓದಿ: Arvind Kejriwal: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಕೇಜ್ರಿವಾಲ್ ರವರಿಗೆ ಬಿಗ್ ಶಾಕ್- ಸಿಂಪಲ್ ಎಂದು ಹಣ ಖರ್ಚು ಮಾಡಿದಕ್ಕೆ ಏನಾಗಿದೆ ಗೊತ್ತೆ?

ನಾವು ಹೊಸ ಸ್ಮಾರ್ಟ್ ಫೋನ್ ತಗೊಂಡಾಗ, ಹಳೆಯ ಫೋನ್ ಇಂದ ಎಲ್ಲಾ ಡೇಟಾವನ್ನು ಹೊಸ ಫೋನ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳುತ್ತೇವೆ, ಸಾಮಾನ್ಯವಾಗಿ ಎಲ್ಲರೂ ತಾವೇ ಮಾಡಿಕೊಳ್ಳುತ್ತಾರೆ. ಆದರೆ ಕೆಲವರಿಗೆ ಡೇಟಾ ಟ್ರಾನ್ಸ್ಫರ್ ಮಾಡಿಕೊಳ್ಳಲು ಸಹಾಯ ಬೇಕಾಗುತ್ತದೆ. ಹಾಗಾಗಿ ಇಂದು ನಾವು ನಿಮಗೆ ನಿಮ್ಮ ಹಳೆಯ ಫೋನ್ ಇಂದ ಹೊಸ ಫೋನ್ ಗೆ ಕಾಂಟ್ಯಾಕ್ಟ್ ಗಳನ್ನು ಟ್ರಾನ್ಸ್ಫರ್ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಎರಡು ರೀತಿಯಲ್ಲಿ ಕಾಂಟ್ಯಾಕ್ಟ್ ಗಳನ್ನು ಟ್ರಾನ್ಸ್ಫರ್ ಮಾಡಬಹುದು.

ಒಂದು ಗೂಗಲ್ ಅಕೌಂಟ್ ಮೂಲಕ.. ಕಾಂಟ್ಯಾಕ್ಟ್ ಗಳನ್ನು ಗೂಗಲ್ ಅಕೌಂಟ್ ಗೆ ಸಿಂಕ್ ಮಾಡುವ ಮೂಲಕ, ನೀವು ಹೊಸ ಫೋನ್ ಗೆ ಕಾಂಟ್ಯಾಕ್ಟ್ ಗಳನ್ನು ಟ್ರಾನ್ಸ್ಫರ್ ಮಾಡಬಹುದು. ಇದನ್ನು ಮಾಡಲು, ಮೊದಲು ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅಕೌಂಟ್ಸ್ ಸೆಲೆಕ್ಟ್ ಮಾಡಿ, ಅಲ್ಲಿ ನಿಮ್ಮ ಗೂಗಲ್ ಅಕೌಂಟ್ ಅನ್ನು ಆಯ್ಕೆ ಮಾಡಿ, ಈಗ ಕಾಂಟ್ಯಾಕ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಈಗ ಸಿಂಕ್ ನೌ ಆಪ್ಶನ್ ಆಯ್ಕೆ ಮಾಡಿ. ಇದರಿಂದ ನಿಮ್ಮ ಗೂಗಲ್ ಅಕೌಂಟ್ ಗೆ ಸಿಂಕ್ ಆಗುತ್ತದೆ. ನಿಮ್ಮ ಹೊಸ ಫೋನ್ ಇಂದ ಗೂಗಲ್ ಅಕೌಂಟ್ ಗೆ ಲಾಗಿನ್ ಆದಾಗ ಎಲ್ಲಾ ಕಾಂಟ್ಯಾಕ್ಟ್ ನಿಮ್ಮಹೊಸ ಫೋನ್ ಗೆ ಬರುತ್ತದೆ. ಇದನ್ನೂ ಓದಿ: Technology: ಭಾರತದಲ್ಲಿ ಮತ್ತೊಂದು ಕ್ಷೇತ್ರದಲ್ಲಿ ಕಾಲಿಡಲು ಸಿದ್ದವಾದ ಆಪಲ್ – ಈ ಬಾರಿ ಮೊಬೈಲ್, ಲ್ಯಾಪ್ಟಾಪ್ ಅಲ್ಲ ಮತ್ತೇನು?

ಎರಡನೆಯದು VCF ಮೂಲಕ ಇದನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ಮಾಡಲು, ಫೋನ್ ನಲ್ಲಿ ಕಾಂಟ್ಯಾಕ್ಟ್ ಅಪ್ಲಿಕೇಶನ್ ಗೆ ಹೋಗಿ, ಅಲ್ಲಿ 3 ಡಾಟ್ಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ ಕೆಳಗಡೆ ಫಿಕ್ಸ್ ಅಂಡ್ ಮ್ಯಾನೇಜ್ ಎನ್ನುವ ಆಯ್ಕೆ ಸಿಗುತ್ತದೆ. ಈ ಆಪ್ಶನ್ ನಲ್ಲಿ ಟ್ರಾನ್ಸ್ಫರ್ ಕಾಂಟ್ಯಾಕ್ಟ್ ಎನ್ನುವ ಆಯ್ಕೆ ಸಿಗುತ್ತದೆ. ಇದನ್ನು ನೀವು ಮೇಲ್ ಮಾಡಿಕೊಳ್ಳಬಹುದು ಅಥವಾ ಮೆಮೊರಿ ಕಾರ್ಡ್ ಗೆ ಕಾಪಿ ಮಾಡಿಕೊಳ್ಳಬಹುದು ಅಥವಾ ಮೇಲ್ ಮಾಡಿಕೊಳ್ಳಬಹುದು.

ನಂತರ ಹೊಸ ಫೋನ್ ನ ಕಾಂಟ್ಯಾಕ್ಟ್ಸ್ ಗೆ ಹೋಗಿ ಅಲ್ಲಿ ಫಿಕ್ಸ್ ಅಂಡ್ ಮ್ಯಾನೇಜರ್ ಗೆ ಹೋಗಿ, ಅಲ್ಲಿ ಟ್ರಾನ್ಸ್ಫರ್ ಕಾಂಟ್ಯಾಕ್ಟ್ ಆಪ್ಶನ್ ಇರುತ್ತದೆ, ಇದರಲ್ಲಿ ಫೈಲ್ ಸೆಲೆಕ್ಟ್ ಮಾಡಿ, ಒಂದು ವೇಳೆ ನಿಮ್ಮ gmail ನಲ್ಲಿ ಫೈಲ್ ಇದ್ದರೆ ಅದನ್ನು ಡೌನ್ಲೋಡ್ ಮಾಡಿ, ಟ್ರಾನ್ಸ್ಫರ್ ಕಾಂಟ್ಯಾಕ್ಟ್ ಮಾಡಿ ಮುಗಿದ ನಂತರ ನಿಮ್ಮ ಹೊಸ ಫೋನ್ ಗೆ ಎಲ್ಲಾ ಕಾಂಟ್ಯಾಕ್ಟ್ ಗಳು ಬರುತ್ತದೆ..ಈ ಎರಡು ರೀತಿಯಲ್ಲಿ ಕಾಂಟ್ಯಾಕ್ಟ್ ಟ್ರಾನ್ಸ್ಫರ್ ಆಗಿರುತ್ತದೆ. ಇದನ್ನೂ ಓದಿ: New Bike: KTM 390 ಅಥವಾ ಡಾಮಿನಾರ್ 400 – ಇವುಗಳಲ್ಲಿ ಬೆಸ್ಟ್ ಆಯ್ಕೆ ಯಾವುದು ಗೊತ್ತೇ? ಯಾರಿಗೆ ಯಾವುದು ಸೂಕ್ತ ಗೊತ್ತೇ?

Comments are closed.