Kannada Astrology: ಸಾಲದ ಸುಳಿಯಲ್ಲಿ ಬಿದ್ದು ಒದ್ದಾಡುತ್ತಿದ್ದರೆ ಕೇವಲ ಒಂದೇ ವಾರದಲ್ಲಿ ಸಾಲಕ್ಕೆ ಮುಕ್ತಿ ಕೊಡಬಹುದು: ಕಷ್ಟ ಪಡಬೇಕಾಗಿಲ್ಲ, ಕೇವಲ ಈ ಎರಡು ವಸ್ತು ನಿಮ್ಮ ಬಳಿ ಇದ್ದರೆ ಸಾಕು, ಹೇಗೆ ಗೊತ್ತೆ?

Kannada Astrology: ಹಣದ ಅವಶ್ಯಕತೆ ಇದ್ದಾಗ ಸಾಲ ಮಾಡಬೇಕಾಗುತ್ತದೆ ಆದರೆ ಕೆಲವೊಮ್ಮೆ ತೆಗೆದುಕೊಂಡ ಸಾಲವನ್ನು ತೀರಿಸಲು ಆಗದೆ ಪರದಾಡಬೇಕಾಗುತ್ತದೆ. ಹಾಗೆ ನೀವೇನಾದರೂ ಅತಿಯಾದ ಸಾಲದ ಭಾದಿಯಲ್ಲಿ ಬಳಲುತ್ತಿದ್ದರೆ ಮನೆಯಲ್ಲಿ ಈ ಚಿಕ್ಕ ಪುಟ್ಟ ವಸ್ತುಗಳು ಇದ್ದರೆ ಸಾಕು ಅದರಿಂದಲೇ ಸಾಲದಿಂದ ಮುಕ್ತಿ ಸಿಗುತ್ತದೆ. ಪ್ರತಿಯೊಬ್ಬರಿಗೂ ದುಡ್ಡೇ ಬೇಕು ದುಡ್ಡು ಇಲ್ಲದಿದ್ದರೆ ಜೀವನ ನಡೆಯುವುದಿಲ್ಲ ಆದರೆ ಕೆಲವೊಮ್ಮೆ ಈ ದುಡ್ಡು ಸಮಸ್ಯೆಯನ್ನು ಕೂಡ ಉಂಟುಮಾಡುತ್ತದೆ. ದುಡ್ಡು ಸಾಲವನ್ನು ಕೂಡ ಮಾಡಿಸುತ್ತದೆ. ಆದರೆ ಸಾಲ ತೀರಿಸಲು ಆಗದೆ ಅದರ ಬಡ್ಡಿ ಕಟ್ಟಲು ಆಗದೆ ಕೆಲವರು ಜೀವನಪೂರ್ತಿ ಸಮಸ್ಯೆಯನ್ನು ಅನುಭವಿಸುತ್ತಾರೆ ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಎಷ್ಟೋ ಇದೆ. ಹಾಗಾದ್ರೆ ತೆಗೆದುಕೊಂಡು ಸಾಲವನ್ನು ಬೇಗ ತೀರಿಸುವಂತೆ ಆಗಲು ಏನು ಮಾಡಬೇಕು ನೋಡೋಣ.

ಸಂಖ್ಯಾಶಾಸ್ತ್ರದ ಪ್ರಕಾರ 8, 17, 26 ಈ ದಿನಾಂಕದಂದು ಸಾಲು ತೆಗೆದುಕೊಳ್ಳಬಾರದು. ಏಲಕ್ಕಿ (cardamom), ಲವಂಗ (cloves) ಹಾಗೂ ವೀಳ್ಯದೆಲೆ (betel leaves) ಈ ಮೂರು ವಿಷಯಗಳು ನಿಮ್ಮ ಸಮಸ್ಯೆಗೆ ಪರಿಹಾರ ಕೊಡಬಲ್ಲದು. ವೀಳ್ಯದೆಲೆಯನ್ನು ಸಮುದ್ರ ಮಂಥನದ ಮುನ್ನವೂ ಬಳಸುತ್ತಿದ್ದರು ಎಂದು ಸ್ಕಂದಪ್ರಾಣ ಹೇಳುತ್ತದೆ. ಹಾಗಾಗಿ ವೀಳ್ಯದೆಲೆಯನ್ನು ಎಲ್ಲಾ ಶುಭಕಾರ್ಯಗಳಲ್ಲಿಯೂ ಕೂಡ ಬಳಸಲಾಗುತ್ತದೆ. ಬುಧ ಗ್ರಹದ ನಂಟು ಹೊಂದಿರುವ ವೀಳ್ಯದೆಲೆ ಬಳಸುವುದರಿಂದ ಹಣಕಾಸಿನ ತೊಂದರೆ ನಿವಾರಣೆಯಾಗುತ್ತದೆ.

ಚೆನ್ನಾಗಿ ಹಸಿರಾಗಿರುವ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದರ ತೊಟ್ಟನ್ನು ಮುರಿದು ಅದರೊಳಗೆ ಎರಡು ಲವಂಗ ಹಾಗೂ ಒಂದು ಏಲಕ್ಕಿಯನ್ನು ಇಡಿ. ಪಾನ್ ಕಟ್ಟುವಂತೆ ಈ ಎಲೆಯನ್ನು ಮಡಚಿ. ಇದನ್ನು ಪ್ರತಿ ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ದೇವರ ಪಾದಕ್ಕೆ ಇಡಬೇಕು ಮೂರು ತಿಂಗಳು ಪ್ರತಿ ಮಂಗಳವಾರ ಈ ರೀತಿ ಮಾಡಿದರೆ ಮನೆ ಬೇಗ ಸಾಲದಿಂದ ಮುಕ್ತಿ ಪಡೆಯುತ್ತದೆ.

ಮೂರು ತಿಂಗಳು ಪ್ರತಿ ಮಂಗಳವಾರ ತಪ್ಪದೇ ಈ ಕೆಲಸವನ್ನು ಮಾಡಬೇಕು ಒಂದು ವೇಳೆ ಒಂದು ಮಂಗಳವಾರ ನಿಮಗೆ ಹೋಗಲು ಸಾಧ್ಯವಾಗದಿದ್ದರೆ ಮನೆಯ ಬೇರೆ ಯಾವುದಾದರೂ ಸದಸ್ಯರು ಹೋಗಿ ಈ ಕೆಲಸವನ್ನು ಪೂರ್ಣಗೊಳಿಸಿ ಬರಬೇಕು. ಎರಡನೇ ಪರಿಹಾರವೆಂದರೆ ಒಂದು ಚೆನ್ನಾಗಿ ಹಸಿರಾಗಿರುವ ಹರಿದಿರದ ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಅದರ ತೊಟ್ಟನ್ನು ಮುರಿದು ಎಲೆಯ ಮೇಲ್ಭಾಗದಲ್ಲಿ ಎರಡು ಲವಂಗವನ್ನು ಇಡಿ ಇದನ್ನು ಒಂದು ಪೇಪರ್ ನಲ್ಲಿ ಸುತ್ತಿಕೊಂಡು ಯಾವುದಾದರೂ ಹರಿಯುವ ನೀರಿಗೆ ಅಥವಾ ನದಿಗೆ ಬಿಡಬೇಕು. ಮಂಗಳವಾರ ರಾತ್ರಿ ಉಪವಾಸ ಮಾಡಿ, ಸ್ನಾನಾದಿಗಳನ್ನು ಮುಗಿಸಿ ಆಂಜನೇಯನ ಪೂಜೆ ಮಾಡಿ 11 ಬಾರಿ ಹನುಮಾನ್ ಚಾಲೀಸನ್ನು ಓದಬೇಕು ಇದನ್ನು ಮಾಡುವುದರಿಂದ ಕೂಡ ಬೇಗ ಸಾಲದಿಂದ ಮುಕ್ತಿ ಪಡೆಯಬಹುದು.

Comments are closed.