Hero Bike: ಚಿಲ್ಲರೆ ಬೆಲೆಗೆ ಸಿಗುತ್ತಿದೆ ಹೀರೋ ಬೈಕ್- ಬೆಲೆ, ವಿಶೇಷತೆ ನೋಡಿ ಇಂದೇ ಖರೀದಿ ಮಾಡ್ತೀರಾ.

Hero Bike: ದ್ವಿಚಕ್ರ ವಾಹನಗಳ ತಯಾರಿಕೆಗೆ ಹೆಸರುವಾಸಿ ಆಗಿರುವ ಹೀರೋ ಸಂಸ್ಥೆ (Hero company) ಹೊಸ ಬೈಕ್ ಗಳನ್ನು ಬಿಡುಗಡೆ ಮಾಡುತ್ತಿದೆ. ಈ ಹಿಂದೆ ಬೈಕ್ ಗಳನ್ನು ಹೊಸ ಕಾನ್ಸೆಪ್ಟ್, ಡಿಸೈನ್ ಗಳೊಂದಿಗೆ ಬಿಡುಗಡೆ ಮಾಡುತ್ತಿದೆ. ಅದೇ ರೀತಿಯಲ್ಲಿ ಈಗ ಹೀರೋ HF ಡಿಲಕ್ಸ್ ಬೈಕ್ (HF Deluxe Bike) ಅನ್ನು ಬಿಡುಗಡೆ ಮಾಡಲಿದೆ. ಈ ಬೈಕ್ (Bike) ಅನ್ನು ಹೊಸದಾಗಿ ಅಪ್ಗ್ರೇಡ್ ಮಾಡಲಾಗಿದೆ. ಇದನ್ನೂ ಓದಿ: Money Saving: ಹೊಸ ಮೊಬೈಲ್ ಖರೀದಿ ಮಾಡುವಾಗ ನೀವು ಸಾವಿರಾರು ರೂಪಾಯಿ ಉಳಿಸಿ- 10 ಸಾವಿರಕ್ಕೂ ಹೆಚ್ಚು ರೂಪಾಯಿ ಉಳಿಸಿ.

ಹಾಗೆಯೇ ಹೊಸ ಗ್ರಾಫಿಕ್ಸ್ ಮತ್ತು ಡಿಸೈನ್ (Desigan) ಇಂದ ಬಿಡುಗಡೆ ಮಾಡಲಾಗುತ್ತಿದೆ. ಈ ಬೈಕ್ ನಲ್ಲಿ ಹೊಸ ಕಲರ್ ಗಳ ಆಯ್ಕೆ ಕೂಡ ಸಿಗುತ್ತದೆ. HF ಡಿಲಕ್ಸ್ ಬೈಕ್ ನಲ್ಲಿ ಈಗ ಏರ್ ಕೋಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಇರಲಿದೆ. OHC ಇಂಜಿನ್ ಇಂದ ಕಂಟ್ರೋಲ್ ಮಾಡಲಾಗುತ್ತದೆ. ಈ ಬೈಕ್ 8.2PS ಅನ್ನು 8000 rpm ನಲ್ಲಿ ಮ್ಯಾಕ್ಸಿಮಮ್ ಪವರ್ ಪ್ರೊಡ್ಯುಸ್ ಮಾಡುತ್ತದೆ.

ಹಾಗೆಯೇ 8.05nm 6000rpm ನಲ್ಲಿ ಮ್ಯಾಕ್ಸಿಮಮ್ ಟಾರ್ಕ್ ಹೊರಹಾಕುತ್ತದೆ. ಈ ಬೈಕ್ ನಲ್ಲಿ 4 ಸ್ಪೀಡ್ ಗೇರ್ ಬಾಕ್ಸ್ ಹೊಂದಿರುತ್ತದೆ. ಈ ಬೈಕ್ ಗೆ ಕ್ಯಾನ್ವಾಸ್ ಬ್ಲ್ಯಾಕ್ ವೇರಿಯಂಟ್ ನ ಸ್ಪೋರ್ಟಿ ಆಲ್ ಬ್ಲ್ಯಾಕ್ ಥೀಮ್ ಅನ್ನು ಇಡಲಾಗಿದೆ. ಹೊಸ ವೇರಿಯಂಟ್ ನಲ್ಲಿ ಬ್ಲ್ಯಾಕ್ ಹೆಡ್‌ ಲ್ಯಾಂಪ್ ಕೌಲ್, ಫ್ಯುಲ್ ಟ್ಯಾಂಕ್, ಲೆಗ್ ಗಾರ್ಡ್, ಇಂಜಿನ್, ಮಿಶ್ರಲೋಹದ ಚಕ್ರಗಳು, ಗ್ರ್ಯಾಬ್ ರೈಲ್ಸ್ ಹಾಗೂ ಎಕ್ಸಾಸ್ಟ್ ಪೈಪ್ ಇದೆ. ಇದನ್ನೂ ಓದಿ: Kia New Car: ಕಡಿಮೆ ಬೆಲೆ ಹೊಸ ಕಾರು ಪರಿಚಯಿಸಲು ಮುಂದಾದ ಕಿಯಾ- ನೋಡಲು ಮಾತ್ರ ಖದರ್, ಬೆಲೆ ಕಡಿಮೆ. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಇನ್ನು ಹ್ಯಾಂಡಲ್ ಬಾರ್ ನಲ್ಲಿ ಕ್ರೋಮ್ ಫಿನಿಶಿಂಗ್, ಹಿಂಭಾಗದ ಸಸ್ಪೆನ್ಶನ್, ಹಾಗೂ ಟೆಲಿಸ್ಕೋಪಿಕ್ ಮುಂಭಾಗದ ಫೋರ್ಕ್ ಗಳು ಇದೆ. ಈ ಬೈಕ್ ನ ಬ್ರೇಕ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇದೆ. ಹೀರೋ HF ಬೈಕ್ 65kmpl ಮೈಲೇಜ್ ನೀಡುತ್ತದೆ. ಈ ಬೈಕ್ ನ ಮ್ಯಾಕ್ಸಿಮಮ್ ಸ್ಪೀಡ್ 85 ರಿಂದ 90km ಆಗಿದೆ. ಈ ಬೈಕ್ 110ಕೆಜಿ ತೂಕ ಹೊಂದಿದೆ.
ಫ್ಯುಲ್ ಟ್ಯಾಂಕ್ ಸಾಮರ್ಥ್ಯ 9.6ಲೀಟರ್ ಆಗಿರುತ್ತದೆ. ಇನ್ನಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ..

ಮುಂಭಾಗದಲ್ಲಿ USB ಚಾರ್ಜರ್, ಟ್ಯೂಬ್ ಲೆಸ್ ಟೈರ್, i3S ಟೆಕ್ನಾಲಜಿ, ಸೈಡ್ ಇಂಡಿಕೇಟರ್ ಮತ್ತು ಟೋ ಗಾರ್ಡ್ ಸಹ ಇರುತ್ತದೆ. ಈ ಬೈಕ್ ನಲ್ಲಿ ವಿವಿಧ ಕಲರ್ ಆಯ್ಕೆ ಸಹ ಇದೆ, ನೆಕ್ಸಸ್ ಬ್ಲೂ, ಕ್ಯಾಂಡಿ ಬ್ಲೇಜಿಂಗ್ ರೆಡ್, ಹೆವಿ ಗ್ರೇ ವಿತ್ ಬ್ಲ್ಯಾಕ್ ಹಾಗೂ ಬ್ಲ್ಯಾಕ್ ವಿತ್ ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲಿ ಬರುತ್ತದೆ. ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ ಬಗ್ಗೆ ಹೇಳುವುದಾದರೆ, ₹60,760 ರೂಪಾಯಿ ಆಗಿದೆ. CT 125X, ಹೀರೋ ಪ್ಯಾಶನ್ ಪ್ಲಸ್, ಸೈಬೋರ್ಗ್ ಬಾಬ್-ಇ, ಅಟ್ಯುಮೊಬೈಲ್ ಆಟಮ್ ಆವೃತ್ತಿ 1.0, ಹೀರೋ HF 100, ಬಜಾಜ್ ಪ್ಲಾಟಿನಾ 110 ಬೈಕ್ ಗಳಿಗೆ ಕಾಂಪಿಟೇಶನ್ ಆಗಿರಲಿದೆ.

Comments are closed.