New Phone: ಕೇವಲ 6,499 ರುಪಾಯಿಗೆ ಸಿಗುತ್ತಿರುವ ಈ ವಿಶೇಷ ಫೋನ್ ನಲ್ಲಿ ಏನೆಲ್ಲಾ ಸಿಗುತ್ತಿದೆ ಗೊತ್ತೆ? ಈ ಫೋನ್ ನಿಜಕ್ಕೂ ಹೇಗಿದೆ ಗೊತ್ತೇ?

New Phone: ಕಡಿಮೆ ಬೆಲೆಯಲ್ಲಿ ಸಿಗುವ ಸ್ಮಾರ್ಟ್ ಫೋನ್ ಬ್ರಾಂಡ್ ಗಳ ಪೈಕಿ POCO ಸಂಸ್ಥೆಯು ಉತ್ತಮ ಪ್ರಾಡಕ್ಟ್ ಗಳನ್ನು ಜನರಿಗೆ ನೀಡುತ್ತಿದೆ. ಇತ್ತೀಚೆಗೆ Poco C50 ಹೆಸರಿನ ಹೊಸ ಮಾಡೆಲ್ (New Model Phone) ಲಾಂಚ್ ಆಗಿದ್ದು, ಇದರ ಬೆಲೆ ₹6,499 ರೂಪಾಯಿ ಆಗಿದೆ. ಇಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಎಂದರೆ ಹೇಗಿರುತ್ತೋ ಎಂದು ನಿಮಗೆ ಅನ್ನಿಸಬಹುದು, ಆದರೆ ಪೊಕೋ ಸಂಸ್ಥೆಯ ಈ Poco C50 ಫೋನ್ ಚೆನ್ನಾಗಿದೆ ಎನ್ನುವ ಪ್ರತಿಕ್ರಿಯೆ ಕೇಳಿ ಬಂದಿದ್ದು, ಈ ಫೋನ್ ನ ವಿಶೇಷತೆಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Business course: PUC ಮಾಡಿದ ನಂತರ ಈ ಕೋರ್ಸ್ ಮಾಡಿ ಸಾಕು- ಕೆಲಸ,ಹಣ ಎರಡು ಹುಡುಕಿಕೊಂಡು ಬರುತ್ತದೆ.

Poco C50 6.52 ಇಂಚ್ HD ಫುಲ್ ಸ್ಕ್ರೀನ್ ಡಿಸ್ಪ್ಲೇ ಇರುವ ಫೋನ್ ಆಗಿದೆ, ಈ ಫೋನ್ ಮುಂಭಾಗದ ಕ್ಯಾಮೆರಾ ಲೆನ್ಸ್ ಹತ್ತಿರ ಡ್ರಾಪ್ ನಾಚ್ ಇದೆ. ಮೊಬೈಲ್ ಸ್ಕ್ರೀನ್ ಸುತ್ತಲೂ ಬೆಜೆಲ್ ಸ್ಕ್ರೀನ್ ಹಾಗೂ ಸ್ಪೀಕರ್ ಗ್ರಿಲ್ ಇದೆ. ಇದರಲ್ಲಿ ಪ್ಲಾಸ್ಟಿಕ್ ಬಾಡಿ ಇದ್ದು, ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಪೈಕಿ ಇದು ಆಕರ್ಷಕವಾಗಿದೆ. 3.5mm ಆಡಿಯೋ ಜ್ಯಾಕ್, USB ಪೋರ್ಟ್, ಲೆಫ್ಟ್ ಸೈಡ್ ನಲ್ಲಿ ಸಿಮ್ ಕಾರ್ಡ್ ಟ್ರೇ, ರೈಟ್ ಸೈಡ್ ನಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್ ಇರುತ್ತದೆ. 120 Hz ಸ್ಯಾಂಪ್ಲಿನ್ಗ್ ರೇಟ್ ಡಿಸ್ಪ್ಲೇ ಹೊಂದಿದೆ. ಆಟೊಮ್ಯಾಟಿಕ್ ಬ್ರೈಟ್ನೆಸ್ ವಿಶೇಷತೆ ಇದ್ದು, ಬಿಸಿಲಿನಲ್ಲಿ ಚೆನ್ನಾಗಿ ಕಾಣಿಸುತ್ತದೆ.

ಈ ಫೋನ್ ನಲ್ಲಿ ಮೀಡಿಯಾಟೆಕ್ A22 SoC ಪ್ರೊಸೆಸರ್ ಇದ್ದು, ಆಂಡ್ರಾಯ್ಡ್ 12 ನಲ್ಲಿ ಕೆಲಸ ಮಾಡುತ್ತದೆ. 32GB ಮೆಮೊರಿ ಇದ್ದು, ಇದರಲ್ಲಿ 23 GB ಸಿಗುತ್ತದೆ. ಕಾಲ್, ಮೆಸೇಜ್, ವಿಡಿಯೋ ಪ್ಲೇ ಬ್ಯಾಕ್, ಮ್ಯೂಸಿಕ್ ಕೇಳುವುದು ಇದೆಲ್ಲವೂ ಚೆನ್ನಾಗಿಯೇ ನಿರ್ವಹಣೆ ಆಗುತ್ತದೆ. ಬೇರೆ ಬಜೆಟ್ ಫ್ರೆಂಡ್ಲಿ ಫೋನ್ ಗಳಿಗಿಂತ, ಇದರಲ್ಲಿ ಇಂಟರ್ನೆಟ್ ಸ್ಪೀಡ್ ಚೆನ್ನಾಗಿರುತ್ತದೆ. ಆದರೆ ಫೋನ್ ಯೂಸ್ ಮಾಡುವಾಗ ಡಿಸ್ಪ್ಲೇ ಸ್ಕ್ರಾಲಿಂಗ್ ಸ್ವಲ್ಪ ಸ್ಲೋ ಅನ್ನಿಸಬಹುದು. ಇದರಲ್ಲಿ 5000 mAh ಬ್ಯಾಟರಿ ಇದ್ದು, 2 ದಿನಗಳ ಕಾಲ ಬಳಸಬಹುದು. ವಿಡಿಯೋ ಜಾಸ್ತಿ ನೋಡಿದರೆ, ಬ್ಯಾಟರಿ ಬೇಗ ಖಾಲಿ ಆಗುತ್ತದೆ. ಪೂರ್ತಿ ಚಾರ್ಜ್ ಆಗುವುದಕ್ಕೆ 2 ಗಂಟೆ ಟೈಮ್ ತೆಗೆದುಕೊಳ್ಳುತ್ತದೆ. ಇದನ್ನೂ ಓದಿ: Get good mileage: ಮಳೆಗಾಲದಲ್ಲಿ ಮೈಲೇಜ್ ಜಾಸ್ತಿ ಮಾಡುವುದು ಹೇಗೆ ಗೊತ್ತೇ? ಕಡಿಮೆ ಮೈಲೇಜ್ ನೀಡುತ್ತಿದ್ದರೇ ಈ ಕೆಲಸ ಮಾಡಿ.

ಈ ಫೋನ್ ನಲ್ಲಿ AI ಹಾಗೂ 8MP ಡ್ಯುಯೆಲ್ ರಿಯರ್ ಕ್ಯಾಮೆರಾ ಇದೆ. ಸೆಲ್ಫಿಗೆ 5MP ಕ್ಯಾಮೆರಾ ಇದೆ. ಈ ಫೋನ್ ನ ಕ್ಯಾಮೆರಾಗಳು 1080p ವಿಡಿಯಗಳನ್ನು 30fps ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತದೆ. ಪೋರ್ಟ್ರೇಟ್, ಟೈಮ್ ಲ್ಯಾಪ್ಸ್ ಮೋಡ್ ಗಳಿವೆ.. ಬೆಳಗಿನ ಸಮಯದಲ್ಲಿ ಉತ್ತಮ ವಿಡಿಯೋ ಫೋಟೋ ರೆಕಾರ್ಡ್ ಮಾಡಿದರು, ರಾತ್ರಿ ವೇಳೆ ಅಷ್ಟೇನು ಚೆನ್ನಾಗಿಲ್ಲ..ಇನ್ನು 4G, LTE, wifi, ಬ್ಲೂಟೂತ್, GPS, ಮೈಕ್ರೋ USB ಪೋರ್ಟ್, 3.5mm ಆಡಿಯೋ ಜ್ಯಾಕ್, ಫಿಂಗರ್ ಪ್ರಿಂಟ್ ಸೆನ್ಸಾರ್ ಇದೆಲ್ಲವೂ ಕೂಡ ಈ ಬಜೆಟ್ ನಲ್ಲಿ ಸಿಗಲಿದೆ..

ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬೇಕು, ಅದು ಚೆನ್ನಾಗಿ ಕೆಲಸ ಮಾಡಬೇಕು ಎಂದರೆ ಇದೊಂದು ಉತ್ತಮವಾದ ಆಯ್ಕೆ ಆಗಿದೆ. ಈ ಎಲ್ಲಾ ವಿಶೇಷತೆಗಳು ಇರುವ ಫೋನ್ 5G ಸಪೋರ್ಟ್ ಮಾಡುವುದಿಲ್ಲ ಎನ್ನುವುದು ಬೇಸರದ ವಿಷಯ ಆಗಿದೆ. 4G ಸ್ಪೀಡ್ ಇಂಟರ್ನೆಟ್ ಸಾಕು ಎಂದುಕೊಂಡರೆ. ಇದು ನಿಮಗೆ ಬೆಸ್ಟ್ ಆಯ್ಕೆ ಆಗಿದೆ.

Comments are closed.