Gichhi gili gili Janvi: ಮೊದಲ ಬಾರಿಗೆ ವಿಚ್ಚೇದನಕ್ಕೆ ಕಾರಣ ತಿಳಿಸಿದ ಜಾಹ್ನವಿ- ರಾಜ್ಯದ ಜನರ ಮನಗೆದ್ದಿರುವ ಚೆಲುವೆ ಬಾಳಲ್ಲಿ ಏನಾಗಿತ್ತು ಗೊತ್ತೇ?

Gichhi gili gili Janvi: ಗಿಚ್ಚಿಗಿಲಿಗಿಲಿ ಕಾರ್ಯಾಕ್ರಮ ಕಲರ್ಸ್ ಕನ್ನಡ (Colours kannada) ವಾಹಿನಿಯಲ್ಲಿ ಪ್ರಸಾರವಾಗುವ ಖ್ಯಾತ ಕಾರ್ಯಕ್ರಮಗಳಲ್ಲಿ ಒಂದು. ಈ ಶೋಗೆ ನಟಿ ಶ್ರುತಿ (Shruti) ಅವರು ಹಾಗೂ ಸಾಧು ಕೋಕಿಲ ಅವರು ಜಡ್ಜ್ ಗಳಾಗಿದ್ದು, ಈಗಾಗಲೇ ಈ ಶೋ 3 ಸೀಸನ್ ಮುಗಿಸಿದೆ. ಗಿಚ್ಚಿಗಿಲಿಗಿಲಿ ಶೋ (Gichhi gili gili) ನಲ್ಲಿ ಈವರೆಗೂ ಸಾಕಷ್ಟು ಸ್ಪರ್ಧಿಗಳು ಬಂದಿದ್ದಾರೆ, ಅವರಲ್ಲಿ ಖ್ಯಾತಿ ಗಳಿಸದವರಲ್ಲಿ ಜಾನ್ವಿ ಕೂಡ ಒಬ್ಬರಾಗಿದ್ದಾರೆ.. ಇದನ್ನೂ ಓದಿ: Get good mileage: ಮಳೆಗಾಲದಲ್ಲಿ ಮೈಲೇಜ್ ಜಾಸ್ತಿ ಮಾಡುವುದು ಹೇಗೆ ಗೊತ್ತೇ? ಕಡಿಮೆ ಮೈಲೇಜ್ ನೀಡುತ್ತಿದ್ದರೇ ಈ ಕೆಲಸ ಮಾಡಿ.

ಜಾನ್ವಿ ಅವರು ತಮ್ಮ ಗಿಚ್ಚಿಗಿಲಿಗಿಲಿ ಶೋನಲ್ಲಿ ಉತ್ತಮವಾದ ಪರ್ಫಾರ್ಮೆನ್ಸ್ ನೀಡಿ, ಜನರಿಗೆ ಇಷ್ಟವಾಗಿದ್ದರು, ಈಗ ಇವರು ತಮ್ಮ ಪರ್ಸನಲ್ ಲೈಫ್ ವಿಚಾರದ ಬಗ್ಗೆ ಭಾರಿ ಸುದ್ದಿಯಾಗುತ್ತಿದ್ದಾರೆ. ಜಾನ್ವಿ ಅವರಿಗೆ ಮಗುವಿಗೆ, ಈಗ ಜಾನ್ವಿ ಅವರು ಸಿಂಗಲ್ ಪೇರೆಂಟ್ ಆಗಿದ್ದು, ಜಾನ್ವಿ ಅವರು ಗಂಡನಿಂದ ದೂರ ಆಗಿದ್ದು ಯಾಕೆ ಎನ್ನುವ ಪ್ರಶ್ನೆ ಶುರುವಾಗಿತ್ತು, ಅದಕ್ಕೀಗ ಖುದ್ದು ಜಾನ್ವಿ ಅವರೇ ಉತ್ತರ ಕೊಟ್ಟಿದ್ದಾರೆ..

ಯೂಟ್ಯೂಬ್ ಚಾನೆಲ್ (Youtube Channel) ಒಂದರ ಸಂದರ್ಶನದಲ್ಲಿ ಪಾಲ್ಗೊಂಡ ಜಾನ್ವಿ ಅವರು ತಾವು ವಿಚ್ಛೇದನ ಪಡೆದಿದ್ದು ಯಾಕೆ ಎಂದು ತಿಳಿಸಿದ್ದಾರೆ.. ಜಾನ್ವಿ ಅವರು ಹೇಳಿರುವ ಹಾಗೆ.. ಅವರು ಊರಿನಲ್ಲಿ ಇದ್ದಾಗ, ಕೆಲಸಕ್ಕೆ ಹೋಗೋದು, ಬರೋದು.. ಹೀಗೆ ಜೀವನ ಹೆಚ್ಚಾಗಿ ಕೆಲಸಗಳ ಮೇಲೆಯೇ ಫೋಕಸ್ ಆಗಿತ್ತು.. ಅವರ ಮನೆಯಲ್ಲಿ ಹಾಗೂ ಅಕ್ಕಪಕ್ಕದಲ್ಲಿಯೂ ಅದೇ ಥರದ ವಾತಾವರಣ ಇತ್ತಂತೆ.. ಆದರೆ ಮದುವೆಯಾದ ಮೇಲೆ ಬದಲಾಗಿದೆ..

ಮದುವೆಯಾಗಿ ಬೆಂಗಳೂರಿಗೆ ಬಂದ ನಂತರ, ಇಲ್ಲಿ ಗಂಡನ ವರ್ತನೆ ಹಾಗೂ ಜನರ ವರ್ತನೆ ನೋಡಿ, ಮದುವೆಯಾದ ನಂತರ ಜೀವನ ಹೀಗೂ ಇರುತ್ತಾ ಎಂದು ಅಂದುಕೊಂಡಿದ್ದರಂತೆ. ಆದರೆ 12 ವರ್ಷಗಳ ಕಾಲ ಇದೇ ರೀತಿ ಜೀವನ ನಡೆಸಿದಾಗ, ಜೀವನ ಒಂದೇ ಥರ ಇರೋದಿಲ್ಲ, ಒಳ್ಳೆಯದು ಕೆಟ್ಟದ್ದು ಎಲ್ಲವೂ ಇರುತ್ತದೆ ಎಂದು ಜಾನ್ವಿ ಅವರಿಗೆ ಅರ್ಥವಾಗಿ ಅದೇ ರೀತಿಯ ಜೀವನಕ್ಕೆ ಅಡ್ಜಸ್ಟ್ ಆಗಿದ್ದರಂತೆ. ಆದರೆ ಜೀವನ ಆ ರೀತಿಯೇ ನಡೆದಾಗ, ಕೊನೆಗೆ ಬಿಟ್ಟುಬಿಡುವ ಹಾಗೆ ಆದಾಗ.. ಇದನ್ನೂ ಓದಿ: Kannada Youtubers: ಕನ್ನಡದಲ್ಲಿಯೇ ವಿಡಿಯೋ ಲಕ್ಷಗಟ್ಟಲೆ ದುಡಿಯುವ ಟಾಪ್ 10 ಯೂಟ್ಯೂಬರ್ಸ್: ಇವರೇ ಕನ್ನಡದ ಬೆಸ್ಟ್ ವಿಡಿಯೋ ಮೇಕರ್ಸ್.

ಆ ವ್ಯಕ್ತಿಯೇ ನಿಮ್ಮನ್ನು ಸ್ಟ್ರಾಂಗ್ ಮಾಡಿರುತ್ತಾರೆ ಎನ್ನುತ್ತಾರೆ ಜಾನ್ವಿ. ಗಾಸಿಪ್ ಗಳು ಆಗಾಗ ಬರುತ್ತಲೇ ಇರುತ್ತದೆ, ಊರಿನಲ್ಲಿ ಇದ್ದಾಗಲು ಗಾಸಿಪ್ ಗಳು ಬರುತ್ತಿದ್ದವು, ಈಗಲೂ ಬರುತ್ತದೆ. ಅದಕ್ಕೆ ನಾನು ಜಾಸ್ತಿ ತಲೆಕೆಡಿಸಿಕೊಳ್ಳೋದಿಲ್ಲ. ನನ್ನ ಮನೆಯವರ ಸಪೋರ್ಟ್ ಚೆನ್ನಾಗಿದೆ. ಅಮ್ಮ ಮತ್ತು ಅಣ್ಣನ ಸಪೋರ್ಟ್ ಇದೆ, ಅವರನ್ನು ನನ್ನನ್ನ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳುತ್ತಾರೆ ಜಾನ್ವಿ. ಹಾಗೆಯೇ ತಾವು ಕೂಡ ಎಲ್ಲರ ಹಾಗೆ ಜೀವನ ಮಾಡುತ್ತಿರುವುದಾಗಿ ಹೇಳಿದ್ದಾರೆ.

Comments are closed.