Maruti Invicto: ಮಾರುತಿ ಕಂಪನಿಯ ಅತ್ಯಂತ ದುಬಾರಿ ಕಾರು ಬಿಡುಗಡೆ- ಇದರ ವಿಶೇಷತೆ ನೋಡಿದರೆ ಮಾತ್ರ ಬೆಲೆ ಕಡಿಮೆ ಎನಿಸುತ್ತದೆ.

Maruti Invicto: ನಮ್ಮ ದೇಶದ ಪ್ರಮುಖ ಆಟೋಮೊಬೈಲ್ಸ್ ಕಂಪೆನಿಗಳಲ್ಲಿ ಒಂದು ಮಾರುತಿ ಸಂಸ್ಥೆ. ಇದೀಗ ಮಾರುತಿ ಸಂಸ್ಥೆ ಹೊಸ MPV ಕಾರ್ ಲಾಂಚ್ ಮಾಡಿದೆ.. ಈ ಕಾರ್ ನ ಮೇಲೆ ಎಲ್ಲರಿಗೂ ಆಸಕ್ತಿ ಇದ್ದು, ಕಾರ್ ನ ವಿಶೇಷತೆಗಳು ಏನೇನು? ಇದರ ಬೆಲೆ ಎಷ್ಟು? ಇದೆಲ್ಲದರ ಬಗ್ಗೆ ಇಂದು ನಿಮಗೆ ಮಾಹಿತಿ ತಿಳಿಸುತ್ತೇವೆ. ಮಾರುತಿ ಸಂಸ್ಥೆಯ ಅತ್ಯಂತ ದುಬಾರಿ ಮತ್ತು ಐಷಾರಾಮಿ ಕಾರ್ ಇನ್ವಿಕ್ಟೋ MPV ಅನ್ನು ಜುಲೈ 5ರಂದು ಭಾರತದ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹೊಸ MPV ನಲ್ಲಿ ಸಾಕಷ್ಟು ಒಳ್ಳೆಯ ವಿಶೇಷತೆಗಳಿವೆ. ಇದನ್ನೂ ಓದಿ: EV Bike: ಜುಜುಬಿ ಮೂವತ್ತು ಸಾವಿರಕ್ಕೆ ಮನೆಗೆ ತನ್ನಿ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್- ಏನೆಲ್ಲಾ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಈ ಕಾರ್ ನ ಬುಕಿಂಗ್ ಜೂನ್ 19ರಿಂದ ಶುರುವಾಗಿದೆ. ಈ ಕಾರ್ 7 ಅಥವಾ 8 ಸೀಟರ್ ಆಗಿದೆ. USB ಹಾಗೂ ಬ್ಲೂಟೂತ್ ಕನೆಕ್ಷನ್ ಜೊತೆಗೆ 20.32cm ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 6 ಸ್ಪೀಕರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, 17.78cm MID, ಗೇರ್ ಪೋಷಿಸನ್ ಇಂಡಿಕೇಟರ್, ಫ್ರಂಟ್ ವೆಂಟಿಲೇಟೆಡ್ ಸೀಟ್‌ಗಳು, ಚಾಲಿತ ಟೈಲ್‌ಗೇಟ್, ಪುಶ್ ಬಟನ್ ಸ್ಟಾರ್ಟ್. / ಸ್ಟಾಪ್, ಕೀಲೆಸ್ ಎಂಟ್ರಿ, ಕ್ರೂಸ್ ಕಂಟ್ರೋಲ್, ಕ್ಯಾಬಿನ್ ಏರ್ ಫಿಲ್ಟರ್, ಇವಿ ಮೋಡ್ ಸ್ವಿಚ್..

ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಏರ್‌ ಬ್ಯಾಗ್‌ಗಳು, 360 ವ್ಯೂ ಕ್ಯಾಮೆರಾ, ಇಪಿಬಿ, ಆಟೋ ಹೋಲ್ಡ್, ಎಬಿಎಸ್, ಇಬಿಡಿ, ವಿ.ಎಸ್‌.ಸಿ, ಟಿಪಿಎಂಎಸ್, ಸುಜುಕಿ ಕನೆಕ್ಟ್ ಹಾಗು ಟ್ರ್ಯಾಕಿಂಗ್ ವ್ಯವಸ್ಥೆ, 17 ಇಂಚ್ ಮಿಕ್ಸ್ಡ್ ಲೋಹಗಳ ಟೈರ್, ಹಾಗೂ ಪನೋರಮಿಕ್ ಸನ್ ರೂಫ್ ಹೊಂದಿದೆ. ಮಾರುತಿ ಸಂಸ್ಥೆಯ ಈ MPV ಟೊಯೊಟಾ ಇನ್ನೋವಾ ಹೈಕ್ರಾಸ್ ಇಂದ ಪಡೆದುಕೊಂಡಿದೆ. ಈ ಹೊಸ MPV ಪೆಟ್ರೋಲ್ ಹಾಗೂ ಹೈಬ್ರಿಡ್ ಎರಡು ಆಯ್ಕೆಯಲ್ಲಿ ಬರಲಿದೆ. ಇದನ್ನೂ ಓದಿ: Mahindra Thar: ಹೊಸದಾಗಿ ಬರುತ್ತಿರುವ ಥಾರ್ 5 ನಲ್ಲಿ ವಿಶೇಷತೆ ನೋಡಿದರೆ ನಿಜಕ್ಕೂ ಇಷ್ಟವಾಗುತ್ತದೆ. ಸಂಪೂರ್ಣ ಡೀಟೇಲ್ಸ್.

2ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ. ಪೆಟ್ರೋಲ್ ಹೈಬ್ರಿಡ್ ಇಂಜಿನ್ ಇಂದ 112kW ಪವರ್, 188nm ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ ಹೈಬ್ರಿಡ್ ಇಂದ 137kW ಹೆಚ್ಚು ಪವರ್ ನೀಡುತ್ತದೆ. ಈ MPV ಇಕೋ, ನಾರ್ಮಲ್ ಹಾಗೂ ಪವರ್ ಮೋಡ್ ಗಳಲ್ಲಿ ಬರುತ್ತದೆ. ಜೊತೆಗೆ ಈ MPV ನಲ್ಲಿ ಇ ಸಿವಿಟಿ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ.

ಮಾರುತಿ ಸಂಸ್ಥೆಯು ಇನ್ವಿಕ್ಟೊ MPV ಅನ್ನು ಆಕರ್ಷಕ ಬೆಲೆಗೆ ಬಿಡುಗಡೆ ಮಾಡಿದ್ದು, ಈ ಕಾರ್ ನ ಆರಂಭಿಕ ಶೋರೂಮ್ ಬೆಲೆ 24.79 ಲಕ್ಷ ರೂಪಾಯಿ ಆಗಿದೆ. ಇದರ ಟಾಪ್ ವೇರಿಯಂಟ್ ಎಕ್ಸ್ ಶೋರೂಮ್ ಬೆಲೆ 28.42 ಲಕ್ಷ ರೂಪಾಯಿ ಆಗಿದೆ..

Comments are closed.