Subramanian swamy: ಈ ಬಾರಿ ಅಣ್ಣಾಮಲೈ ವಿರುದ್ಧ ತೊಡೆತಟ್ಟಿದೆ ಸುಬ್ರಮಣ್ಯನ್ ಸ್ವಾಮಿ- ನೇರವಾಗಿ ಖಡಕ್ ಪ್ರಶ್ನೆ.

Subramanian swamy: ದಕ್ಷ ಅಧಿಕಾರಿ ಅಣ್ಣಾಮಲೈ (Annamalai) ಅವರು ರಾಜಕೀಯ (Politics) ಕ್ಕೆ ಎಂಟ್ರಿ ಕೊಟ್ಟಿರುವ ವಿಷಯ ಗೊತ್ತೇ ಇದೆ. ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ಬಿಜೆಪಿ (BJP in tamilnadu) ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ಬಗ್ಗೆ ಈಗ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯನ್ ಅವರು ಬಿಜೆಪಿ ಪಕ್ಷವನ್ನು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತು ಅಣ್ಣಾಮಲೈ ಅವರನ್ನು ಟೀಕೆ ಮಾಡಿದ್ದಾರೆ. ಅಷ್ಟಕ್ಕೂ ಆಗಿರುವುದೇನು ಎಂದು ತಿಳಿಸುತ್ತೇವೆ ನೋಡಿ..

ಚೆನ್ನೈ ಏರ್ ಪೋರ್ಟ್ ನಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್ ಅವರು, “ತಮಿಳುನಾಡಿನಲ್ಲಿ ಬಿಜೆಪಿ ಪಕ್ಷ ಇದೆಯಾ? ಅಣ್ಣಾಮಲೈ ಅಂದ್ರೆ ಯಾರು?..” ಎಂದು ಪ್ರಶ್ನೆ ಮಾಡಿದ್ದಾರೆ. “ಅಣ್ಣಾಮಲೈ ಅಂದ್ರೆ ತಮಿಳುನಾಡಿನಲ್ಲಿ ಯಾರಿಗೆ ತಾನೇ ಗೊತ್ತು? ಬಿಜೆಪಿ ಪಕ್ಷ ತಮಿಳುನಾಡಿನಲ್ಲಿ ಜೀವಂತವಾಗಿದ್ಯಾ ಅನ್ನೋದೇ ನನಗೆ ಗೊತ್ತಿಲ್ಲ.. ತಮಿಳುನಾಡಿನಲ್ಲಿ ಆ ಪಕ್ಷ ಆಕ್ಟಿವ್ ಆಗಿದೆಯಾ ಅನ್ನೋದೇ ನನಗೆ ಗೊತ್ತಿಲ್ಲ.. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹಿಂಸೆ ಆಗಿರುವ ಮಣಿಪುರಕ್ಕೆ ಭೇಟಿ ನೀಡಲು ಆಗಿಲ್ಲ..

ಅಮೆರಿಕಾಗೆ ಹೋಗೋದಕ್ಕೆ ಪ್ರಮುಖ ಕಾರಣ ಅವರಿಗೆ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ನಂತರ ಮೋದಿ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿದೆ. ಈಗಿರುವ ವಿರೋಧ ಪಕ್ಷದವರು ಜೊತೆಯಾಗಿ ಸೇರಿ ಒಳ್ಳೆಯ ಕೆಲಸ ಮಾಡಿದರೆ, 2024ರ ಲೋಕಸಭಾ ಚುನಾವಣೆಯಲ್ಲೂ ವಿರೋಧ ಪಕ್ಷಗಳೇ ಗೆಲ್ಲುವ ಅವಕಾಶ ಇದೆ..” ಎಂದಿದ್ದಾರೆ ಸುಬ್ರಹ್ಮಣ್ಯನ್. ಮುಂದುವರೆದು ಮಾತನಾಡಿದ ಅವರು.

ಮಾನವ ಹಕ್ಕುಗಳನ್ನು ಪಾಲಿಸದೆ ತೊಂದರೆ ಆಗಿರುವ ಹಲವು ಘಟನೆಗಳು ಮಣಿಪುರದಲ್ಲಿ ನಡೆದಿದೆ. ಆ ಘಟನೆಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಅಲ್ಲಿಗೆ ಹೋಗುವುದಕ್ಕೆ ಆಗಿಲ್ಲ.. ಯುಎಸ್ ಗೆ ಹೋಗಲು ಮೋದಿ ಅವರಿಗೆ ಜಾಸ್ತಿ ಆಸಕ್ತಿ ಇದೆ. ಅವರಿಗೆ ನಮ್ಮ ದೇಶದ ಸಾಮಾನ್ಯ ಜನರ ಕಲ್ಯಾಣದ ಬಗ್ಗೆ ಆಸಕ್ತಿ ಇದ್ದ ಹಾಗೆ ಕಾಣುತ್ತಿಲ್ಲ. ಮೋದಿ ಅವರ ಯುಎಸ್ ಪ್ರವಾಸದಿಂದ ಯಾರಿಗೆ ಪ್ರಯೋಜನ ಆಗಿದೆ? 2024ರ ಲೋಕಸಭಾ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲ್ಲುತ್ತೆ, ಮೋದಿ ಪ್ರಧಾನಿ ಆಗ್ತಾರೆ ಅನ್ನುವ ವಿಶ್ವಾಸ ನನ್ನಲ್ಲಿ ಇಲ್ಲ..” ಎಂದು ಹೇಳಿದ್ದಾರೆ..

ನಮ್ಮ ಜನರಿಗೆ ಪ್ರಧಾನಿ ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಅನ್ನಿಸಬಹುದು, ಆದರೆ ಅದು ನಿಜವಲ್ಲ. ನಿಜ ಏನು ಎಂದರೆ ಪ್ರಧಾನಿಯವರು ಏನನ್ನು ಮಾಡಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ವಿರೋಧ ಪಕ್ಷ ಗೆಲ್ಲುವ ಸಾಧ್ಯತೆಗಳೇ ಹೆಚ್ಚಾಗಿದೆ..” ಎಂದು ಸುಬ್ರಮಣ್ಯನ್ ಹೇಳಿದ್ದಾರೆ. ಈ ರೀತಿಯಾಗಿ ಬಿಜೆಪಿಯನ್ನು ಹಾಗೂ ಪ್ರಧಾನ ಮಂತ್ರಿಗಳನ್ನು ಕೆಣಕಿದ್ದಾರೆ ಸುಬ್ರಹ್ಮಣ್ಯನ್.

Comments are closed.