Kannada Astrology: ಈ ಐದು ರಾಶಿಯವರು ಮುಂದಿನ ವರ್ಷದೊಳಗೆ ಸ್ವಂತ ಮನೆ ಕಟ್ಟಿಸಿಯೇ ಕಟ್ಟಿಸುತ್ತಾರೆ ಅಥವಾ ಖರೀದಿ ಮಾಡುತ್ತಾರೆ; ಇಂತಹ ಲಕ್ಕಿ ರಾಶಿಗಳು ಯಾವವು ಗೊತ್ತಾ?
Kannada Astrology: ಮನೆ ಕಟ್ಟುವ ಅಥವಾ ತಮ್ಮದೇ ಆದ ಸ್ವಂತ ಮನೆ ಖರೀದಿಸುವ ಕನಸು ಹಲವರಿಗೆ ಇರುತ್ತದೆ. ಆದರೆ ಅದು ಅಷ್ಟು ಸುಲಭವಾಗಿ ನಡೆಯುವ ವಿಚಾರವಲ್ಲ ಒಂದು ಮದುವೆ ಮಾಡುವಾಗ ಎಷ್ಟು ಕಷ್ಟ ಬರುತ್ತದೆಯೋ ಒಂದು ಮನೆ ಕಟ್ಟುವಾಗಲೂ ಕೂಡ ಅಷ್ಟೇ ವಿಘ್ನಗಳು ಬರುತ್ತವೆ. ಹೀಗೆ ವಿಘ್ನವನ್ನು ನಿವಾರಿಸಿಕೊಂಡು ಈ ಕೆಲವು ರಾಶಿಯವರು ಮಾತ್ರ 2024 ಮುಗಿಯುವುದರ ಒಳಗೆ ಸ್ವಂತ ಮನೆಯನ್ನು ಕಟ್ಟೆ ಕಟ್ಟುತ್ತಾರೆ ಎನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಹಾಗಾದ್ರೆ ಬಹುದಿನದ ಕನಸನ್ನು ನನಸಾಗಿಸಿಕೊಳ್ಳುವ ರಾಶಿಗಳು ಯಾವವು ನೋಡೋಣ. ಇದನ್ನೂ ಓದಿ:Tirupati Tirumala: ಜನರು ಇದೇ ಕಾರಣಕ್ಕೆ ಮುಗಿಬಿದ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡುತ್ತಾರೆ ನೋಡಿ: ಈ ಕಾರಣ ಗೊತ್ತಾದ್ರೆ ನೀವು ಕೂಡ ಬಾಲಜಿಯ ದರ್ಶನ ಮಾಡುತ್ತೀರಿ!
ಮಕರ ರಾಶಿ
ಮಕರ ರಾಶಿಯವರಿಗೆ ತಮ್ಮದೇ ಆದ ಕನಸು ಗುರಿ ಇದ್ದೇ ಇರುತ್ತದೆ ಹಾಗಾಗಿ ಅದಕ್ಕಾಗಿ ಕಷ್ಟಪಟ್ಟು ದುಡಿಯುತ್ತಾರೆ ಇವರು ದೂರದೃಷ್ಟಿ ಉಳ್ಳ ವ್ಯಕ್ತಿತ್ವ ಹೊಂದಿರುವವರು. ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಯಾರಿಗೂ ಭಾರವಾಗಬಾರದು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. ಇದೀಗ ಇದರ ಗ್ರಹಗತಿಗಳು ಇವರಿಗೆ ಅನುಕೂಲಕರವಾಗಿದ್ದು 2024ರಲ್ಲಿ ಇವರ ಮನೆ ಕಟ್ಟುವ ಕನಸು ನನಸಾಗಲಿದೆ.
ವೃಶ್ಚಿಕ ರಾಶಿ
ಬಡ ಬುದ್ದಿವಂತಿಕೆಯಿಂದ ಹಣಕಾಸಿನ ವ್ಯವಹಾರ ಮಾಡುವ ಇವರು ಯಾವತ್ತೂ ಇನ್ನೊಬ್ಬರ ಮುಂದೆ ಕೈ ಚಾಚುವ ಪರಿಸ್ಥಿತಿ ತಂದುಕೊಳ್ಳುವುದಿಲ್ಲ. ಭವಿಷ್ಯಕ್ಕಾಗಿ ಹಣ ಕೂಡಿ ಇಡುವುದರಲ್ಲಿ ಇವರು ನಂಬರ್ ಒನ್. ಈ ವರ್ಷ ಆರ್ಥಿಕವಾಗಿ ಗ್ರಹಗತಿಗಳು ಇವರ ಕೈಹಿಡಿಯಲಿದೆ. ಹಾಗಾಗಿ ಉತ್ತಮ ಆರ್ಥಿಕ ಜವಾಬ್ದಾರಿ ಹೊಂದಿರುವ ವೃಷಭ ರಾಶಿಯವರು 2024ರ ವೇಳೆಗೆ ತಮ್ಮ ಕನಸಿನ ಮನೆ ನಿರ್ಮಾಣ ಮಾಡುವ ಅಡಿಪಾಯ ಹಾಕುತ್ತಾರೆ.
ಕರ್ಕ ರಾಶಿ
ಸದಾ ತಮ್ಮ ಕುಟುಂಬದ ಬಗ್ಗೆ ಯೋಚಿಸುವ ಕುಟುಂಬದವರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಮನಸ್ಥಿತಿ ಉಳ್ಳವರು ಕರ್ಕಾಟಕ ರಾಶಿಯವರು. ಕುಟುಂಬಗೋಸ್ಕರ ಎಂತಹ ಕಠಿಣ ನಿರ್ಧಾರವನ್ನು ಕೂಡ ಇವರು ತೆಗೆದುಕೊಳ್ಳುತ್ತಾರೆ. ಇವರು ತಮ್ಮ ಕುಟುಂಬಕ್ಕಾಗಿ ಒಂದು ಸ್ವಂತ ಮನೆ ಹೊಂದಿರಬೇಕು ಎನ್ನುವ ಕನಸನ್ನು ನನಸಾಗಿಸಿಕೊಳ್ಳುವ ಸಮಯ ಬಂದೇಬಿಡ್ತು. ಮುಂದಿನ ವರ್ಷ ಈ ಕನಸು ನನಸಾಗಲಿದೆ.
ವೃಶ್ಚಿಕ ರಾಶಿ
ಇವರು ಆರ್ಥಿಕವಾಗಿ ಒಂದು ಮಟ್ಟಕ್ಕೆ ಉತ್ತಮವಾಗಿದೆ ಇರುತ್ತಾರೆ. ಇವರಿಗೆ ತಾವು ದುಡಿಯುವ ಹಣ ಮಾತ್ರವಲ್ಲದೆ ಇತರ ಹಣದ ಮೂಲಗಳು ಕೂಡ ಲಭ್ಯವಾಗಿದೆ. ಇವರು ಜೀವನದ ಬಗ್ಗೆ ಗಟ್ಟಿ ನಿರ್ಧಾರ ಹೊಂದಿರುವವರು ಯಾವುದೇ ಅಡೆತಡೆಗಳನ್ನು ಮೀರಿ ಕನಸನ್ನು ಸಹಕಾರವಾಗಿಸಿಕೊಳ್ಳುವುದಕ್ಕೆ ಪರಿಶ್ರಮ ಪಡುವ ಇವರಿಗೆ 2024ರಲ್ಲಿ ಸ್ವಂತ ಮನೆ ಹೊಂದುವ ಯೋಗವಿದೆ.
ಕುಂಭ ರಾಶಿ
ಇವರು ಹೆಚ್ಚು ಮಾತನಾಡುವುದಿಲ್ಲ ಆದರೆ ಭವಿಷ್ಯಕ್ಕೆ ಸಂಬಂಧಪಟ್ಟ ಎಲ್ಲಾ ಯೋಜನೆಗಳನ್ನು ರೂಪಿಸುತ್ತಾರೆ. ಇವರು ತೆಗೆದುಕೊಳ್ಳುವ ನಿರ್ಧಾರಗಳು ಖಡಕ್ ಆಗಿರುತ್ತವೆ. ಹಂಗಿನ ಅರಮನೆಯಲ್ಲಿ ಇರಬಾರದು ಎನ್ನುವ ರೂಲ್ಸ್ ಮಾಡಿಕೊಂಡಿರುವ ಕುಂಭ ರಾಶಿಯವರು ಸದ್ಯದಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಸ್ವಂತ ಮನೆ ಪಡೆದುಕೊಳ್ಳುವ ಕನಸನ್ನು ನನಸಾಗಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಸ್ವಂತ ಮನೆ ಪಡೆಯುವ ಆಸೆ ಈಡೇರಲಿದೆ.
Comments are closed.