Rashmika Mandanna: ರಶ್ಮಿಕಾ ರವರಿಗೆ ಮತ್ತೊಂದು ಶಾಕ್ ಕೊಟ್ಟ ಶ್ರೀ ಲೀಲಾ- ನಂದೇ ಎಲ್ಲಾ ಎನ್ನುತ್ತಿದ್ದ ರಶ್ಮಿಕಾಗೆ ಏನಾಗಿದೆ ಗೊತ್ತೇ?

Rashmika Mandanna: ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು ನ್ಯಾಷನಲ್ ಕ್ರಶ್ (National crush) ಆಗಿ ಹೆಸರು ಮಾಡಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾ ಇಂದ ಶುರುವಾದ ಇವರ ಸಿನಿಮಾ ಜರ್ನಿ ಇಂದು, ಬಾಲಿವುಡ್ (Bollywood) , ಟಾಲಿವುಡ್ ಕಾಲಿವುಡ್ ಎಲ್ಲಾ ಕಡೆ ಮೆರೆಯುತ್ತಿದೆ. ರಶ್ಮಿಕಾ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಆದರೆ ರಶ್ಮಿಕಾ ಅವರ ಕೈಯಿಂದ ಕೆಲವು ಅವಕಾಶಗಳನ್ನು ಸಹ ಕಳೆದುಕೊಳ್ಳುತ್ತಿದ್ದಾರೆ. ಇದೀಗ ರಶ್ಮಿಕಾ ಅವರಿಗೆ ಸಿಕ್ಕಿದ್ದ ಅವಕಾಶ, ಕೈತಪ್ಪಿ ಶ್ರೀಲೀಲಾ ಅವರ ಕೈಸೇರಿದೆ. ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ಜ್ಯೋತಿಷಿ- ಇವರು ನಿಜಕ್ಕೂ ಹಿಂಗಾ??

ಈಗ ಸೌತ್ ಇಂಡಿಯನ್ ಸಿನಿಮಾದಲ್ಲಿ ಪೂಜಾ ಹೆಗ್ಡೆ (Pooja hegde), ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ Sreeleela) ಅವರ ಹವಾ ಜೋರಾಗಿ ನಡೆಯುತ್ತಿದೆ. ಇತ್ತ ರಶ್ಮಿಕಾ ಅವರು ಬಾಲಿವುಡ್ ನಲ್ಲಿ ಅನಿಮಲ್ ಮತ್ತು ಟಾಲಿವುಡ್ (Tallywood) ನಲ್ಲಿ ಪುಷ್ಪ2 ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಜೊತೆಗೆ ಇವರು ನಿತಿನ್ ಅವರೊಡನೆ ಹೊಸ ಸಿನಿಮಾಗೆ ಒಪ್ಪಿಗೆ ನೀಡಿದ್ದರು, ಆ ಸಿನಿಮಾ ಮುಹೂರ್ತದಲ್ಲಿ ಪಾಲ್ಗೊಂಡಿದ್ದರು, ಈ ಸಿನಿಮಾ ಬಗ್ಗೆ ಒಂದು ಸ್ಪೆಷಲ್ ವಿಡಿಯೋ ಕೂಡ ಮಾಡಲಾಗಿತ್ತು..

ಆದರೆ ಈಗ ಈ ಸಿನಿಮಾದ ರಶ್ಮಿಕಾ ಹೊರಬಂದಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಹಾಗೂ ನಿತಿನ್ ಈ ಹಿಂದೆ ಭೀಷ್ಮಾ ಸಿನಿಮಾದಲ್ಲಿ ನಟಿಸಿದ್ದರು, ಈ ಸಿನಿಮಾ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು. ಭೀಷ್ಮ ನಿರ್ದೇಶನ್ ವೆಂಕಿ ಕುಡುಮುಲ ಅವರೇ ಇವರಿಬ್ಬರ ಕಾಂಬಿನೇಷನ್ ಜೊತೆಗೆ ಹೊಸ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಈಗ ಡೇಟ್ಸ್ ಸಮಸ್ಯೆ ಇಂದ ರಶ್ಮಿಕಾ ಅವರು ಈ ಸಿನಿಮಾ ಇಂದ ಹೊರಬಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ: SSLC Supplementary Exam: SSLC ಅಲ್ಲಿ ಫೇಲ್ ಆಗಿದ್ದ ಮಕ್ಕಳಿಗೆ ಪೊಲೀಸ್ ಜವಾಬ್ದಾರಿ ತೆಗೆದುಕೊಂಡು ಏನು ಮಾಡಿದ್ದಾರೆ ಗೊತ್ತೇ? ಭೇಷ್ ಎಂದ ಜನರು.

ಇನ್ನು ಈ ಸಿನಿಮಾದ ಹೀರೋಯಿನ್ ಪಾತ್ರಕ್ಕೆ ಹೊಸ ನಟಿಗಾಗಿ ಹುಡುಕಾಟ ನಡೆಸುತ್ತಿದ್ದು, ಈ ಪಾತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ತೆಲುಗಿನಲ್ಲಿ ಶ್ರೀಲೀಲಾ ಅವರಿಗೆ ಭಾರಿ ಬೇಡಿಕೆ ಶುರುವಾಗಿದೆ.. ಎಲ್ಲಾ ಸ್ಟಾರ್ ಹೀರೋಗಳ ಸಿನಿಮಾಗಳಲ್ಲೂ ಅವಕಾಶ ಪಡೆಯುತ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್, ಬಾಲಯ್ಯ ಇವರೆಲ್ಲರ ಸಿನಿಮಾದಲ್ಲಿ ಶ್ರೀಲೀಲಾ ನಟಿಸುತ್ತಿದ್ದು, ಇದೀಗ ರಶ್ಮಿಕಾ ಅವರನ್ನು ರೀಪ್ಲೇಸ್ ಮಾಡಿ, ನಿತಿನ್ ಅವರ ಸಿನಿಮಾಗು ಆಯ್ಕೆಯಾಗಿದ್ದಾರೆ.

ಇನ್ನು ರಶ್ಮಿಕಾ ಅವರು ಈಗ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವುದರಿಂದ, ಹೊಸ ಫೋಟೋಶೂಟ್ ಗಳ ಮೂಲಕ ಬಾಲಿವುಡ್ ನಲ್ಲಿ ಹೆಚ್ಚು ಅವಕಾಶ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಾಗಿ ರಶ್ಮಿಕಾ ಅವರು ತೆಲುಗು ಅವಕಾಶಗಳನ್ನು ಕೈಚೆಲ್ಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ರಶ್ಮಿಕಾ ಅವರು ಮತ್ತೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾದು ನೋಡಬೇಕಿದೆ.

Comments are closed.