The kerana Story: ಕೇರಳ ಸ್ಟೋರಿ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಕಮಲ್ ಹಾಸನ್ ಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ಕೊಟ್ಟ ಅದಾ ಶರ್ಮಾ

The kerana Story: ಈ ವರ್ಷ ಮೇ ತಿಂಗಳಿನಲ್ಲಿ ತೆರೆಕಂಡ ದಿ ಕೇರಳ ಸ್ಟೋರಿ (The kerana Story) ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ನಮಗೆ ಗೊತ್ತಿದೆ. ಇನ್ನು ಈ ಸಿನಿಮಾ ದೊಡ್ಡ ಮಟ್ಟದಲ್ಲಿ ವಿವಾದ ಸಹ ಸೃಷ್ಟಿಸಿತ್ತು.. ಕೇರಳ ಸ್ಟೋರಿ ಸಿನಿಮಾವನ್ನು ಸಾಕಷ್ಟು ಜನ ವಿರೋಧಿಸಿದ್ದರು, ಈ ಸಿನಿಮಾದಲ್ಲಿ ಐಸಿಸ್ ನಡೆಸುವ ತಂತ್ರಗಳ ಬಗ್ಗೆ ತೋರಿಸಲಾಗಿದೆ. ಇದೆಲ್ಲವೂ ಬೇಕೆಂದೇ ಮಾಡಿರುವುದು ಇದರಲ್ಲಿ ಯಾವುದು ನಿಜವಿಲ್ಲ ಎಂದು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಆದರೆ ಆ ಎಲ್ಲಾ ವಿರೋಧಗಳ ನಡುವೆವೆ ಸಿನಿಮಾ ಬಿಡುಗಡೆ ಆಗಿ, ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾವನ್ನು ಬಾಲಿವುಡ್ ನಿರ್ದೇಶಕ ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿ, ಅದಾ ಶರ್ಮ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕೇರಳ ಸ್ಟೋರಿ ಸಿನಿಮಾದ ಸಕ್ಸಸ್ ನಿರ್ದೇಶಕ ಸುದೀಪ್ತೋ ಸೇನ್ ಅವರಿಗೆ ಮತ್ತು ನಟಿ ಅದಾ ಶರ್ಮ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಈ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನಗೊಂಡು, ದಾಖಲೆಯ ಕಲೆಕ್ಷನ್ ಮಾಡಿದೆ.

ದಿ ಕೇರಳ ಸ್ಟೋರಿ ಸಿನಿಮಾವನ್ನು ಸಾಕಷ್ಟು ಜನ ರಾಜಕಾರಣಿಗಳು ಮತ್ತು ಸಿನಿಮಾ ಕಲಾವಿದರು ಕೂಡ ವಿರೋಧಿಸಿದ್ದಾರೆ. ಹೀಗೆ ವಿರೋಧಿಸಿದವರಲ್ಲಿ ಹಿರಿಯ ಸ್ಟಾರ್ ನಟ ಕಮಲ್ ಹಾಸನ್ ಅವರು ಮತ್ತು ನಾಸಿರುದ್ದೀನ್ ಶಾ ಅವರು ಇದ್ದಾರೆ. ನಟ ಕಮಲ್ ಹಾಸನ್ ಅವರು ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದ್ದರು. ಇದೇ ರೀತಿ ಹಲವು ಜನರು ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ತೋರಿಸಿರುವುದು ನಿಜ ಎಂದು ಹೇಳಿದರೆ, ಇನ್ನು ಕೆಲವರು ಇದು ಸುಳ್ಳು ಎಂದು ಹೇಳುತ್ತಾರೆ.

ಈ ಎಲ್ಲಾ ವಿಚಾರಗಳು ಒಂದು ಕಡೆಯಾದರೆ, ಈಗ ನಟಿ ಅದಾ ಶರ್ಮ ಅವರು ಈ ರೀತಿ ತಮ್ಮ ಸಿನಿಮಾಗಳಿಗೆ ವಿರೋಧ ವ್ಯಕ್ತಪಡಿಸಿರುವ ಹಿರಿಯ ಕಲಾವಿದರಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ನೀಡಿದ್ದಾರೆ. ಅದಾ ಶರ್ಮ ಅವರು ಯಾರದ್ದೇ ಹೆಸರನ್ನು ಸಹ ತೆಗೆದುಕೊಂಡಿಲ್ಲ.. ಆದರೆ ಇತ್ತೀಚಿನ ಸಂದರ್ಶನದಲ್ಲಿ ತಕ್ಕ ಉತ್ತರ ಕೊಟ್ಟಿದ್ದಾರೆ. ಅದಾ ಶರ್ಮ ಅವರು ಹೇಳಿದ್ದು ಏನು ಎಂದರೆ, “ನಮ್ಮ ದೇಶದಲ್ಲಿ ಎಲ್ಲರಿಗು ವಾಕ್ ಸ್ವಾತಂತ್ರ್ಯ ಇದೆ, ಇಲ್ಲಿನ ಜನರು ಸಿನಿಮಾ ನೋಡದೆ ಇದ್ದರು ಸಹ ಸಿನಿಮಾ ಬಗ್ಗೆ ಕೆಟ್ಟದಾಗಿ ಮಾತಾನಾಡಿ, ಅಪಪ್ರಚಾರ ಮಾಡುತ್ತಾರೆ.

ಈ ರೀತಿ ಮಾಡಿ ಜನರು ಸಿನಿಮಾ ನೋಡದ ಹಾಗೆ ತಡೆಯುತ್ತಾರೆ. ಯಾವ ವ್ಯಕ್ತಿ ಯಾರ ಬಗ್ಗೆ ಆದರೂ ಏನು ಬೇಕಾದರೂ ಹೇಳಿಕೆ ಕೊಡಬಹುದು. ಆ ಥರ ಹೇಳಿದ ನಂತರ ಕೂಡ ಆರಾಮಾಗಿ ಇರುತ್ತಾರೆ. ನಮ್ಮ ದೇಶದ ಸೌಂದರ್ಯ ಇದು, ನನಗೆ ನನ್ನ ದೇಶದ ಮೇಲೆ ಪ್ರೀತಿ ಇದೆ, ಇಲ್ಲಿ ಬೇರೆ ಬೇರೆ ಮನಸ್ಥಿತಿ ಇರುವವರು ಜೊತೆಯಾಗಿ ಜೀವನ ನಡೆಸಬಹುದು. ದೊಡ್ಡ ದೊಡ್ಡ ನಟರು ಕೇರಳ ಸ್ಟೋರಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ ನಂತರ ಸಹ ಜನರು ಈ ಸಿನಿಮಾ ನೋಡಲು ಥಿಯೇಟರ್ ಬಂದರು. ಇದು ಒಂದು ಅದ್ಭುತ..” ಎಂದು ಹೇಳಿದ್ದಾರೆ ಅದಾ ಶರ್ಮ. ಇದೀಗ ಈ ಮಾತುಗಳು ವೈರಲ್ ಆಗುತ್ತಿದೆ.

Comments are closed.