Mobile Tips: ನಿಮ್ಮ ಮೊಬೈಲ್ ನಲ್ಲಿ ಸರಿಯಾಗಿ ಸಿಗ್ನಲ್ ಸಿಗುತ್ತಿಲ್ಲ ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು. ಹುಡುಕಿಕೊಂಡು ಬರುತ್ತದೆ.

Mobile Tips: ಈಗ ಒಬ್ಬ ವ್ಯಕ್ತಿಯನ್ನು ನಾವು ಕಾಂಟ್ಯಾಕ್ಟ್ ಮಾಡಬೇಕು ಎಂದರೆ ಅವರಿಗೆ ಕರೆಮಾಡಿ ಮಾತನಾಡುತ್ತೇವೆ, ಹೀಗೆ ಕಾಲ್ ಮಾಡಲು ನೆಟ್ವರ್ಕ್ ಎನ್ನುವುದು ಬಹಳ ಮುಖ್ಯ. ಈಗ ನಮ್ಮ ದೇಶದಲ್ಲಿ 5G ಸೇವೆ ಇದ್ದರು ಸಹ, ಕೆಲವು ಕಡೆ ನಮಗೆ ನೆಟ್ವರ್ಕ್ ಸಮಸ್ಯೆ ಇರುತ್ತದೆ. ಇದು ಹಳ್ಳಿಯಲ್ಲಿ ಅಲ್ಲ, ಸಿಟಿಗಳಲ್ಲಿ ಸಹ ನೆಟ್ವರ್ಕ್ (Network) ಸಮಸ್ಯೆ ಇಂದ ಕಾಲ್ ಕನೆಕ್ಟ್ (Connect) ಆಗದೆ ಇರುವುದು ನಡೆಯುತ್ತದೆ. ಮನೆಗಳಲ್ಲಿ ಕೂಡ ಕೆಲವು ಸಾರಿ ನೆಟ್ವರ್ಕ್ ಸಿಗುವುದಿಲ್ಲ. ಒಂದು ವೇಳೆ ನಿಮ್ಮ ಫೋನ್ ಗು ಆ ರೀತಿ ಆದರೆ ನೆಟ್ವರ್ಕ್ ಸಮಸ್ಯೆಯನ್ನು ಹೇಗೆ ಸರಿಪಡಿಸಬೇಕು ಎಂದು ಕೆಲವು ಟಿಪ್ಸ್ ನೀಡುತ್ತೇವೆ ನೋಡಿ.. ಇದನ್ನೂ ಓದಿ: Mg Comet ev: ಈ ಇವಿ ಕಾರನ್ನು ಮೂರು ವರ್ಷಗಳ ನಂತರ ಮಾರಾಟ ಮಾಡಿ; ಯಾವುದೇ ಕಂಡೀಶನ್ ನಲ್ಲಿದ್ದರೂ ಖರೀದಿಸಿದ 60% ಹಣ ಹಿಂಪಡೆಯಿರಿ; ಯಾವ ಕಾರು ಗೊತ್ತಾ?

ಸ್ಮಾರ್ಟ್ ಸಿಗ್ನಲ್ ಬೂಸ್ಟರ್ :- ನಿಮ್ಮ ಮನೆಯಲ್ಲಿ ಅಥವ ಅಕ್ಕಪಕ್ಕದಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದರೆ, ನೀವು ನಿಮ್ಮ ಫೋನ್ ನಲ್ಲಿ ಸ್ಮಾರ್ಟ್ ನೆಟ್ವರ್ಕ್ ಸಿಗ್ನಲ್ ಬಳಸಬಹುದು. ಇದರಿಂದ ನಿಮ್ಮ ಫೋನ್ ಸಿಗ್ನಲ್ ಚೆನ್ನಾಗಿರುತ್ತದೆ, ನೆಟ್ವರ್ಕ್ ಇಂದ ಕಾಲ್ ಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಸಾಫ್ಟ್ವೇರ್ ಡೌನ್ಲೋಡ್ ಮಾಡಿ, ಅದನ್ನು ನಿಮ್ಮ ಫೋನ್ ಗೆ ಪ್ಲಗ್ ಮಾಡಬೇಕು. ಅನಲಾಗ್ ಸಿಗ್ನಲ್ ಬೂಸ್ಟರ್ ಗಿಂತ ಇದು ಸ್ವಲ್ಪ ದುಬಾರಿ, ಆದರೆ ಒಳ್ಳೆಯ ನೆಟ್ವರ್ಕ್ ನೀಡುತ್ತದೆ.

ಸೆಲ್ಯೂಲರ್ ರಿಪೀಟರ್ :- ನಿಮ್ಮ ಮನೆಯ ಕೆಲವು ಕಡೆ ನೆಟ್ವರ್ಕ್ ಪ್ರಾಬ್ಲಮ್ ಇದ್ದು, ಬೇರೆ ಕಡೆ ನೆಟ್ವರ್ಕ್ ಚೆನ್ನಾಗಿದ್ದರೆ, ನೀವು ಸೆಲ್ಯೂಲರ್ ರಿಪೀಟರ್ ಬಳಸಬಹುದು. ಇದು ಸುಲಭವಾದ ಆಯ್ಕೆಯಾಗಿದೆ. ಸೆಲ್ಯೂಲರ್ ರಿಪೀಟರ್ ಗಳು 2500 ಇಂದ 6000 ಬೆಲೆಗೆ ಸಿಗುತ್ತದೆ. ನಿಮ್ಮ ಮನೆಯಲ್ಲಿ ನೆಟ್ವರ್ಕ್ ಸಮಸ್ಯೆ ಎಲ್ಲಿ ಇರುತ್ತದೆಯೋ ಅಲ್ಲಿ ಇದನ್ನು ಅಳವಡಿಸಿ. ಇದನ್ನು ಇನ್ಸ್ಟಾಲ್ ಮಾಡಲು ತಜ್ಞರು ಬೇಕಾಗುತ್ತದೆ, ಒಮ್ಮೆ ಇನ್ಸ್ಟಾಲ್ ಮಾಡಿದರೆ, ಹೆಚ್ಚು ಅನುಕೂಲ ನೀಡುತ್ತದೆ.

ವೈಫೈ ಕಾಲಿಂಗ್ ಸ್ಟೇಟಸ್ :- ನಿಮ್ಮ ಫೋನ್ ನಲ್ಲಿ ಕಾಲ್ ಮಾಡುವುದಕ್ಕೆ ಪದೇ ಪದೇ ತೊಂದರೆ ಆಗುತ್ತಿದ್ದರೆ, ವೈಫೈ ಕಾಲಿಂಗ್ ಫೀಚರ್ ಬಳಸಬಹುದು.. ನಿಮ್ಮ ಮನೆಯಲ್ಲಿ ವಉಫಿ ಇದ್ದು, ಅದರಿಂದ ನೀವು ಕಾಲ್ ಮಾಡಬಹುದು. ಇದು ಫ್ರೀ ಸೌಲಭ್ಯ ಆಗಿದೆ. ಇದು ನಿಮ್ಮ ಕಾಲ್ ಸಮಸ್ಯೆಗೆ ಮತ್ತೊಂದು ಪರಿಹಾರ ಆಗಿದೆ. ಇದನ್ನು ಆಕ್ಟಿವೇಟ್ ಮಾಡಲು ಹೆಚ್ಚೇನೂ ಮಾಡಬೇಕಿಲ್ಲ, ನಿಮ್ಮ ಫೋನ್ ನಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ, ವೈಫೈ ಕಾಲ್ ವ್ಯವಸ್ಥೆ ಆಕ್ಟಿವೇಟ್ ಮಾಡಿ.

ಸಾಫ್ಟ್ವೇರ್ ಅಪ್ಡೇಟ್ :- ಎಲ್ಲಾ ಸಿಮ್ ಕಂಪೆನಿಗಳು ಕೂಡ ಆಗಾಗ ಸಾಫ್ಟ್ ವೇರ್ ಅಪ್ಡೇಟ್ ಮಾಡುತ್ತಿರುತ್ತದೆ. ಅದರ ಬಗ್ಗೆ ನಿಮ್ಮ ಫೋನ್ ಗೆ ಮೆಸೇಜ್ ಬರುತ್ತದೆ. ಆದರೆ ಹೆಚ್ಚಿನ ಜನರು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಾಫ್ಟ್ ವೇರ್ ಅಪ್ಡೇಟ್ ಮಾಡದೆ ಇದ್ದರು ಕೂಡ ಹೀಗೆ ನೆಟ್ವರ್ಕ್ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಿಮಗೆ ಮೆಸೇಜ್ ಬಂದಾಗಲೆಲ್ಲಾ ಸಾಫ್ಟ್ ವೇರ್ ಅಪ್ಡೇಟ್ ಮಾಡಿ..ಆದರೆ ಸುರಕ್ಷಿತವಾಗಿದೆಯೇ ಎನ್ನುವುದನ್ನು ಕೂಡ ನೀವು ಗಮನಿಸಬೇಕು. ಆಗ ನೆಟ್ವರ್ಕ್ ಪ್ರಾಬ್ಲಮ್ ಕೂಡ ಸರಿ ಹೋಗುತ್ತದೆ.

ಫೋನ್ ಸಮಸ್ಯೆ :- ಒಂದು ವೇಳೆ ನಿಮ್ಮ ಮನೆಯ ಬೇರೆ ಫೋನ್ ಗಳಲ್ಲಿ ನೆಟ್ವರ್ಕ್ ಸಮಸ್ಯೆ ಇಲ್ಲ, ನಿಮ್ಮ ಫೋನ್ ನಲ್ಲಿ ಮಾತ್ರ ಇದೆ ಎಂದರೆ, ಅದು ನಿಮ್ಮ ಫೋನ್ ನಲ್ಲಿ ಸಮಸ್ಯೆ ಇದೆ ಎಂದು ಅರ್ಥ ಬರುವುದಿಲ್ಲ, ಬದಲಾಗಿ ನಿಯ ಫೋನ್ ಹಳೆಯದಾಗಿರಬಹುದು. ಹೊಸ ಫೋನ್ ಖರೀದಿ ಮಾಡಿದರೆ ನಿಮ್ಮ ಸಮಸ್ಯೆ ಸರಿಯಾಗುತ್ತದೆ. ಇದನ್ನೂ ಓದಿ: Artificial Intelligence: ಕನ್ನಡ ಮಾಧ್ಯಮ ಲೋಕಕ್ಕೂ ಕಾಲಿಟ್ಟ ಎ ಐ ತಂತ್ರಜ್ಞಾನ:  ಕೆಲಸ ಕಳೆದುಕೊಳ್ಳಲಿದ್ದಾರೆ ಟಿವಿ ಆಂಕರ್ ಗಳು? ನೀವು ಕೂಡ ಉಚಿತವಾಗಿ ಎಐ ಆಂಕರ್ ಕ್ರಿಯೇಟ್ ಮಾಡಬಹುದು ಹೇಗೆ ಗೊತ್ತೆ?

Comments are closed.