Mg Comet ev: ಈ ಇವಿ ಕಾರನ್ನು ಮೂರು ವರ್ಷಗಳ ನಂತರ ಮಾರಾಟ ಮಾಡಿ; ಯಾವುದೇ ಕಂಡೀಶನ್ ನಲ್ಲಿದ್ದರೂ ಖರೀದಿಸಿದ 60% ಹಣ ಹಿಂಪಡೆಯಿರಿ; ಯಾವ ಕಾರು ಗೊತ್ತಾ?

Mg Comet ev: ಇತ್ತೀಚೆಗೆ ಇ.ವಿ. ಕಾರುಗಳಲ್ಲಿ ಅತ್ಯಂತ ಆಕರ್ಷಕ ವಿನ್ಯಾಸದ ಮೂಲಕ ಎಲ್ಲರ ಗಮನ ಸೆಳೆದ ಕಾರು ಎಂ. ಜಿ. ಕಾಮೆಟ್. ಚಿಕ್ಕ ಕಾರೇ ಆದರೂ ಚೊಕ್ಕವಾದ ಡಿಸೈನ್ ನಿಂದ ಎಲ್ಲರ ಗಮನ ಸೆಳೆದಿತ್ತು. ಈಗ ಒಂದು ಫುಲ್ ಚಾರ್ಜ್ ನಲ್ಲಿ ಸಿಗುತ್ತಿರುವ ಇ.ವಿ. ಕಾರುಗಳಲ್ಲಿ ಸಿಗುತ್ತಿರುವ ವ್ಯಾಪ್ತಿ ನಗರ ನಿವಾಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. ಕಾಮೆಟ್ ಚಿಕ್ಕ ಕಾರಾಗಿದ್ದು ಪಾರ್ಕಿಂಗ್ ಗೆ ಕೂಡ ಸಮಸ್ಯೆ ಇಲ್ಲ. ಇದನ್ನೂ ಓದಿ: Business Ideas: ದೇವಾಲಯಗಳಿಗೆ ಹೋಗಿ, ಚಿಪ್ಪು ಕೊಡಲು ಒಪ್ಪಂದ ಮಾಡಿಕೊಂಡು ಈ ಚಿಕ್ಕ ಕೆಲಸ ಮಾಡಿದರೆ, ಲಕ್ಷ ಲಕ್ಷ ಆದಾಯ. ಹೇಗೆ ಗೊತ್ತೇ?

ರೇಂಜ್, ಪವರ್ ಮತ್ತು ಪ್ರತೀ ಕಿ.ಮೀ ವೆಚ್ಚ

ಕಾಮೆಟ್ ಇ.ವಿ. 17.3 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ.  ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಎಂಜಿನ್ 42 ಬಿ.ಎಚ್.ಪಿ ಪವರ್ ಅನ್ನು ಉತ್ಪಾದಿಸಿದಎರೆ ಇದರ ಟಾರ್ಕ್   110 ನ್ಯೂಟನ್ ಮೀಟರ್ ಗಳಾಗಿದೆ. ಕಾರು ಎಂದ ಮೇಲೆ ರಸ್ತೆಯ ಮೇಲೆ ಓಡಾಡುತ್ತಾ ನೀರು, ಧೂಳನ್ನು ಎದುರಿಸಬೇಕಾಗುತ್ತದೆ. ಆದರೆ ಇದಕ್ಕೂ ಯಾವುದೇ ಚಿಂತೆ ಮಾಡಬೇಕಾಗಿಲ್ಲ. ಈ ಕಾರು IP67 ರೇಟಿಂಗ್ ಅನ್ನು ಹೊಂದಿದೆ. ಓಂದು ಫುಲ್ ಚಾರ್ಜ್ ನಲ್ಲಿ ಈ ಕಾರು 230 ಕಿಲೋಮೀಟರ್ ರೇಂಜ್ ಅನ್ನು ನೀಡುತ್ತದೆ. ಎಂ. ಜಿ. ಅವರ ಲೆಕ್ಕಾಚಾರದ ಪ್ರಕಾರ ಈ ಕಾರನ್ನು ಪ್ರತೀ 1000 ಕಿಲೋಮೀಟರ್ ಓಡಿಸಲು 519 ರೂಪಾಯಿಗಳು ಖರ್ಚಾಗುತ್ತದೆ.

ಬಣ್ಣ ಮತ್ತು ವೈಶಿಷ್ಟ್ಯಗಳು

ಎಂ. ಜಿ. ಕಾಮೆಟ್ ಕಾರು 5  ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಡ್ಯುಯಲ್ ಟೋನ್ (ಆಪಲ್ ಗ್ರೀನ್ + ಸ್ಟಾರೀ ಬ್ಲಾಕ್, ಕ್ಯಾಂಡಿ ವೈಟ್ ಮತ್ತು ಸ್ಟಾರೀ ಬ್ಲಾಕ್), ಆಪಲ್ ಗ್ರೀನ್, ಕ್ಯಾಂಡಿ ವೈಟ್, ಅರೋರಾ ಸಿಲ್ವರ್, ಮತ್ತು ಸ್ಟಾರೀ ಬ್ಲಾಕ್ ಲಭ್ಯ ಇರುವ ಬಣ್ಣದ ಆಯ್ಕೆಗಳಾಗಿರುತ್ತವೆ. ಇದರಲ್ಲಿ 10.25 ಇಂಚಿನ ಎರಡು ಸ್ಕ್ರೀನ್ ಗಳಿವೆ. ಇದಕ್ಕೆ ಫೋನಿನ ಮೂಲಕ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಎರಡನ್ನೂ ಕನೆಕ್ಟ್ ಮಾಡಬಹುದು. ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಇದರಲ್ಲಿ ಇವೆ. ಮೂರು ಯು. ಎಸ್. ಬಿ. ಪೋರ್ಟುಗಳು, ಮತ್ತು 55 ಕ್ಕೂ ಹೆಚ್ಚಿನ ಕನೆಕ್ಟೆಡ್ ಫ್ಯೂಚರ್ಸ್ ಅನ್ನು ಹೊಂದಿದೆ. ಇದರಲ್ಲಿ ಐ. ಸ್ಮಾರ್ಟ್ ಆಯ್ಕೆಯೂ ಇದ್ದು ಇದರಲ್ಲಿ ನೂರಕ್ಕೂ ಹೆಚ್ಚು ಕಮಾಂಡ್ ಗಳನ್ನು ಕೊಡಬಹುದಾಗಿದೆ. ಇದನ್ನು ಓದಿ: Business ideas: ನಿಮ್ಮ ಮನೆಯಲ್ಲಿ ಹೆಂಡತಿ ಖಾಲಿ ಕುಳಿತಿದ್ದರೇ ಈ ಕೆಲಸ ಮಾಡಿ. ಲಕ್ಷ ಲಕ್ಷ ಆದಾಯ ಬರುವಂತೆ ಮಾಡಬಹುದು. ಹೇಗೆ ಗೊತ್ತೇ??

ಕಾಮೆಟ್ ಸೇಫ್ಟಿ ಫೀಚರ್ಸ್

ಕೀ ಲೆಸ್ ಎಂಟ್ರಿ, ಸುರಕ್ಷತೆಗಾಗಿ ಎರಡು ಏರ್ ಬ್ಯಾಗ್ ಗಳು, ಒಳಗೆ ಕೂತು ತಮ್ಮ ಕಾರಿನ ಟೈರ್ ಪ್ರೆಷರ್ ಅನ್ನು ಗಮನದಲ್ಲಿಡುವ ಟಯರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ (ಟಿ.ಪಿ.ಎಮ್.ಎಸ್) ಇದೆ. ಉತ್ತಮ ಬ್ರೇಕಿಂಗ್ ಗಾಗಿ ಎ.ಬಿ.ಎಸ್ ಮತ್ತು ಹೆಚ್ಚಿನ ವೇಗದಲ್ಲಿ ಕಾರು ಸ್ಟೇಬಲ್ ಆಗಿರಲು ಇ.ಬಿ.ಡಿ. ಯನ್ನೂ ನೀಡಲಾಗಿದೆ. ಇದರ ಜೊತೆಗೆ ಪಾರ್ಕಿಂಗ್ ಗೆ ಸಹಕಾರಿಯಾಗುವಂತೆ ರಿವರ್ಸ್ ಕ್ಯಾಮೆರಾ ಮತ್ತು ಸೆನ್ಸರ್ ಗಳನ್ನೂ ನೀಡಲಾಗಿದೆ.

ಬೈ ಬ್ಯಾಕ್

ಎಂ.ಜಿ ಕಾಮೆಟ್ ಎಲ್ಲರ ಗಮನ ಸೆಳೆಯುತ್ತಿರಲು ಇನ್ನೊಂದು ಕಾರಣವಿದೆ. ಇದು ಬೈ ಬ್ಯಾಕ್ ಆಯ್ಕೆಯೊಂದಿಗೆ ಬರುತ್ತಿದೆ. ಇದರ ಪ್ರಕಾರ ಈ ಕಾರನ್ನು ಮೂರು ವರ್ಷಗಳ ನಂತರ ಎಂ. ಜಿ. ಗೆ ಮರಳಿ ಮಾರಾಟ ಮಾಡುವುದಾದರೆ ಕಾರಿನ ಮೌಲ್ಯದ 60 ಶೇಕಡಾ ಹಣವನ್ನು ಬೈ ಬ್ಯಾಕ್ ಸ್ಕೀಮ್ ನ ಪ್ರಕಾರ ಮರಳಿ ಪಡೆಯಬಹುದಾಗಿದೆ.

ಬೆಲೆ ಮತು ಮಾರಾಟ

ಕಾಮೆಟ್ ನ ಬೇಸ್ ವೇರಿಯೆಂಟ್ 7.98 ಲಕ್ಷದಿಂದ ಆರಂಭವಾಗಿ, ಪ್ಲೇ ವೇರಿಯೆಂಟ್ ಗೆ 9.28 ಲಕ್ಷ ಮತ್ತು ಟಾಪ್ ವೇರಿಯೆಂಟ್ ಲೈನ್ ಪ್ಲಸ್ ಗೆ 9.98 ಲಕ್ಷ ರೂಪಾಯಿಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಷೋ ರೂಮ್ ಬೆಲೆಗಳಾಗಿದ್ದು, ಮೊದಲ 5000 ಬುಕ್ಕಿಂಗ್ ಗಳಿಗೆ ಖಾತರಿಯ ಬೆಲೆಯಾಗಿದೆ. ಕಾಮೆಟ್ ಮೊದಲ ತಿಂಗಳಲ್ಲಿ 1184 ಮಾರಾಟವಾಗಿದೆ. ಕಳೆದ ತಿಂಗಳು ಇದು ಎಂ. ಜಿ. ಯ ಅತೀ ಹೆಚ್ಚು ಮಾರಾಟವಾದ ಎರಡನೇ ಕಾರಾಗಿತ್ತು.

Comments are closed.