Marriage: ಒಂದೇ ರಾಶಿಯಲ್ಲಿ ಹುಟ್ಟಿದ ಗಂಡು ಹೆಣ್ಣು ಮದುವೆ ಆದರೆ ಜೀವನ ನರಕವಾಗುತ್ತಾ? ಎನನ್ನುತ್ತೇ ಜ್ಯೋತಿಷ್ಯ ಶಾಸ್ತ್ರ?

Marriage: ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರು ತಮ್ಮ ಜಾತಕ ಅದರಲ್ಲಿ ಇರುವ ಗ್ರಹ ನಕ್ಷತ್ರ ದೋಷಗಳನ್ನು ಕೂಡ ಬಹುವಾಗಿ ನಂಬುತ್ತಾರೆ. ಕೆಲವೊಮ್ಮೆ ನಮ್ಮ ಗ್ರಹಗತಿಗಳು ಬದಲಾವಣೆ ಆದಾಗ ಜೀವನದ ಮೇಲೆ ಸಾಕಷ್ಟು ಪರಿಣಾಮಗಳು ಕೂಡ ಬೀರುತ್ತವೆ. ಮದುವೆ ವಿಚಾರಕ್ಕೆ ಬಂದರೆ ಎರಡು ಜಾತಕದಲ್ಲಿ ಗುಣಗಳ ಹೊಂದಾಣಿಕೆ ಬಹಳ ಮುಖ್ಯ. ಸತಿ ಪತಿ ಇಬ್ಬರ ಜನ್ಮ ರಾಶಿ ಒಂದೇ ಆಗಿದ್ದರೆ ಅಂತವರು ಮದುವೆ ಆಗಬಾರದು ಎನ್ನುವ ನಂಬಿಕೆ ಇದೆ. ಹಾಗಾದ್ರೆ ಜನ್ಮ ರಾಶಿ ಒಂದೇ ಆಗಿರುವ ಗಂಡು ಹೆಣ್ಣು ಮದುವೆ ಆದರೆ ಜೀವನ ನರಕವಾಗುತ್ತೆ ಎನ್ನುವ ಮಾತು ನಿಜವೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸತಿಪತಿಯ ನಡುವೆ ಹೊಂದಾಣಿಕೆ ಆಗಲು ಅವರ ಜಾತಕದಲ್ಲಿರುವ ಗ್ರಹಗಳು ಕೂಡ ಬಹಳ ಮುಖ್ಯ. ರಾಶಿಗಳನ್ನು ಬೆಂಕಿ, ಭೂಮಿ, ಗಾಳಿ ಹಾಗೂ ನೀರು ಎಂದು ವರ್ಗೀಕರಿಸಲಾಗುತ್ತದೆ. ಗ್ರಹಗಳ ವಿವಿಧ ಸ್ವರೂಪವನ್ನು ಪ್ರತಿನಿಧಿಸುತ್ತವೆ.

ಒಂದೇ ರಾಶಿಯವರು ಮದುವೆ ಆಗಬಹುದೇ?

ಇದು ಹಲವರಲ್ಲಿ ಇರುವ ಪ್ರಶ್ನೆ, ಜನ್ಮ ರಾಶಿ ಒಂದೇ ಆಗಿದ್ದರೆ ಆ ಗಂಡು ಹೆಣ್ಣು ಮದುವೆಯಾಗಬಹುದೇ ಎನ್ನುವುದು. ಆದರೆ ಒಂದೇ ರಾಶಿ ಚಕ್ರ ಇರುವ ಗಂಡು ಹೆಣ್ಣು ಮದುವೆಯಾದರೆ ಅವರ ಸಂಬಂಧಗಳು ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತೆ. ಆಳವಾದ ಸಂಪರ್ಕಕ್ಕೆ ಇದು ಸಹಾಯ ಮಾಡುತ್ತದೆ. ಆದರೆ ಆದರೆ ಇವರಿಬ್ಬರೂ ಒಂದೇ ರೀತಿಯ ನಕಾರಾತ್ಮಕ ಗುಣಗಳನ್ನು ಹೊಂದಿರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಸಂಬಂಧದಲ್ಲಿ ಸಂಘರ್ಷಣೆ ಉಂಟಾಗುತ್ತದೆ. ಒಂದೇ ರಾಶಿಯವರು ಒಂದೇ ರೀತಿಯ ಗುಣವನ್ನು ಹೊಂದಿದ್ದು ಅವರ ಗುಣವನ್ನು ಇನ್ನೊಂದು ರಾಶಿಯವರು ಅರ್ಥ ಮಾಡಿಕೊಂಡರೆ ಆಗ ಸಮಸ್ಯೆ ಇಲ್ಲ. ಆದರೆ ಕೋಪ ಮಾಡಿಕೊಂಡು ಶಾಂತವಾಗಿ ಇಲ್ಲದೆ ಇದ್ದರೆ ಜೀವನ ಕಷ್ಟವಾಗಿರುತ್ತದೆ.

ಕೆಲವೊಮ್ಮೆ ಒಂದೇ ರಾಶಿಯವರ ಜಾತಕಗಳು ಕೂಡ ಹೊಂದಾಣಿಕೆ ಆಗುತ್ತದೆ. ಒಂದು ವೇಳೆ ಹೇಗೆ ಮದುವೆಯಾದರೆ ಜೀವನದಲ್ಲಿ ಕೆಲವೊಂದು ಹೊಂದಾಣಿಕೆಯನ್ನು ಗಂಡು ಹೆಣ್ಣು ಮಾಡಿಕೊಳ್ಳಬೇಕು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೇ ರಾಶಿ ಅವರು ಮದುವೆ ಆದರೆ ಸಂಬಂಧದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ಇಬ್ಬರೂ ಒಬ್ಬರನ್ನ ಒಬ್ಬರು ಗೌರವಿಸಬೇಕು. ಮುಕ್ತವಾಗಿ ಮಾತನಾಡುವುದರ ಮೂಲಕ ಯಾವುದಾದರೂ ಘರ್ಷಣೆ ನಡೆಯುವಂತಿದ್ದರೆ ಅದನ್ನು ತಪ್ಪಿಸಬೇಕು. ಒಬ್ಬರ ದೌರ್ಬಲ್ಯವನ್ನು ಗುರುತಿಸಿ ಅದನ್ನು ಎತ್ತಿ ಆಡುವ ಬದಲು ನೀವು ಬಲವಾಗಿ ನಿಲ್ಲಬೇಕು. ಈ ರೀತಿ ಹೊಂದಾಣಿಕೆ ಮಾಡಿಕೊಂಡರೆ ಒಂದೇ ರಾಶಿಯವರು ಮದುವೆಯಾದರೂ ಕೂಡ ಜೀವನ ಸುಖಮಯವಾಗಿರಲು ಸಾಧ್ಯ.

Comments are closed.