Temple Rules: ಅತಿಯಾಯ್ತು ದೇವಾಲಯಗಳಲ್ಲಿ ಯೂಟ್ಯೂಬರ್ಸ್, ಮೀಡಿಯಾ ಇನ್ಸ್ಪುಯೆನ್ಸರ್ಸ್ ಹಾವಳಿ; ದೇವಾಲಯದ ಸಮುತಿ ತೆಗೆದುಕೊಂಡ ಕಟ್ಟುನಿಟ್ಟಿನ ನಿರ್ಧಾರ ಏನು ಗೊತ್ತೇ? ಭಕ್ತಾದಿಗಳಿಗೂ ತೊಂದರೆ!

Temple Rules: ದೇವಾಲಯಗಳಿಗೆ (Temple) ಜನ ಭೇಟಿ ನೀಡುವುದೇ ಭಕ್ತಿಯಿಂದ ಬಹಳ ದೂರ ದೂರದ ಪ್ರದೇಶದಿಂದ ಕೆಲವು ದೇವಾಲಯಗಳನ್ನು ನೋಡಲು ಭಕ್ತಾದಿಗಳು ಆಗಮಿಸುತ್ತಾರೆ. ಅದರಲ್ಲೂ ಕೇದಾರನಾಥ (Kedarnath) ಬದರಿನಾಥದಂತಹ ಸ್ಥಳಗಳು ಬಹಳ ಫೇಮಸ್ ಆಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಕೂಡ ಜಾಸ್ತಿ. ಆದರೆ ಈ ದೇವಾಲಯಗಳಲ್ಲಿ ಭಕ್ತಾದಿಗಳು ಕೂಡ ಮುಜುಗರ ಪಟ್ಟುಕೊಳ್ಳುವಂತಹ ಕೆಲವು ಘಟನೆಗಳು ನಡೆಯುತ್ತಿದ್ದು ಇದಕ್ಕಾಗಿ ಕೇದಾರನಾಥದ ದೇವಾಲಯ ಸಮಿತಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ. ಇದನ್ನೂ ಓದಿ: Artificial Intelligence: ಕನ್ನಡ ಮಾಧ್ಯಮ ಲೋಕಕ್ಕೂ ಕಾಲಿಟ್ಟ ಎ ಐ ತಂತ್ರಜ್ಞಾನ:  ಕೆಲಸ ಕಳೆದುಕೊಳ್ಳಲಿದ್ದಾರೆ ಟಿವಿ ಆಂಕರ್ ಗಳು? ನೀವು ಕೂಡ ಉಚಿತವಾಗಿ ಎಐ ಆಂಕರ್ ಕ್ರಿಯೇಟ್ ಮಾಡಬಹುದು ಹೇಗೆ ಗೊತ್ತೆ?

ಇತ್ತೀಚೆಗೆ ಕೇದಾರನಾಥ ದೇವಾಲಯಗಳಿಗೆ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿದೆ. ಆದರೆ ಇಲ್ಲಿ ದೇವರನ್ನು ನೋಡಲು ಭಕ್ತಿಯಿಂದ ಬರುವವರಿಗಿಂತ ತಮ್ಮ ತಮ್ಮ ಮೊಬೈಲ್ ಫೋನ್ಗಳಿಂದ ಕ್ಯಾಮೆರಾ ಗಳಿಂದ ಫೋಟೋ ತೆಗೆಯುವುದು, ವಿಡಿಯೋಗ್ರಫಿ ಮಾಡುವುದು, ರೀಲ್ಸ್ (Reels) ಮಾಡುವುದು ಇವೆ ಹೆಚ್ಚಾಗುತ್ತಿದ್ದು ಇದು ಭಕ್ತಾದಿಗಳ ಭಾವನೆಗೆ ತೊಂದರೆ ಉಂಟು ಮಾಡುತ್ತಿದೆ. ಧಾರ್ಮಿಕ ಸ್ಥಳ ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಅದನ್ನ ಭಕ್ತರು ಗೌರವಿಸಬೇಕು ಎಂದು ಬದರಿನಾಥ ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜಯ್ ಅಜೇಂದ್ರ ತಿಳಿಸಿದ್ದಾರೆ. ಇದನ್ನೂ ಓದಿ: Darling Krishna: ನಟ ಧನಂಜಯ್ ಗೆ ನೇರವಾಗಿ ವಾರ್ನಿಂಗ್ ಕೊಟ್ಟ ಕೃಷ್ಣ- ಟ್ವಿಟ್ಟರ್ ಅಲ್ಲಿ ದೋಸ್ತಿಗಳ ಮಾತುಕತೆ ವೈರಲ್.

ಇನ್ನು ಮುಂದೆ ಯಾತ್ರೆಗಳು ದೇವಸ್ಥಾನದ ಆವರಣದಲ್ಲಿ ಫೋಟೋ ಕ್ಲಿಕ್ ಮಾಡುವಂತಿಲ್ಲ:

ಇತ್ತೀಚೆಗೆ ಕೇದಾರನಾಥದ ದೇವಾಲಯದ ಆವರಣದಲ್ಲಿ, ಯುವತಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಈ ಕಾರಣಕ್ಕಾಗಿ ಇದು ಭಕ್ತರ ಭಾವನೆಗಳಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಅರಿತ ದೇವಸ್ಥಾನದ ಸಮಿತಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇನ್ನು ಮುಂದೆ ಬದರಿನಾಥ, ಕೇದಾರನಾಥ ದೇವಾಲಯದ ಆವರಣದಲ್ಲಿ ಯಾರು ಮೊಬೈಲ್ ಫೋನ್ (Mobile Phone) ಬಳಸುವಂತಿಲ್ಲ ಫೋಟೋ ಕ್ಲಿಕ್ ಮಾಡುವಂತಿಲ್ಲ instagram ಅಥವಾ ಸೋಶಿಯಲ್ ಮೀಡಿಯಾದ ರೀಲ್ಸ್ ಮಾಡುವಂತಿಲ್ಲ. ಫೋಟೋಗ್ರಫಿ, ವಿಡಿಯೋ ನಿಷೇಧಿಸಲಾಗಿದೆ ಎಂದು ಬೋರ್ಡ್ ಕೂಡ ಹಾಕಲಾಗಿದೆ. ದೇವಾಲಯದ ಆವರಣ ಪ್ರವೇಶಿಸುತ್ತಿರುವಂತೆ ಭಕ್ತಾದಿಗಳು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳಬೇಕು ಎಂದು ಸಮಿತಿ ತಿಳಿಸಿದೆ.

ಕೆಲವು ಯೂಟ್ಯೂಬರ್ ಗಳು ಇನ್ಸ್ಟಾಗ್ರಾಂ ಇನ್ಫ್ಲೂಯೆನ್ಸರ್ ಗಳು ಜನರ ಧಾರ್ಮಿಕ ಭಾವನೆಗೆ ವಿರುದ್ಧವಾಗಿ ವಿಡಿಯೋಗಳನ್ನು ಮಾಡುತ್ತಾರೆ. ಇದು ನಿಜವಾಗಿ ಭಕ್ತಿಯಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಹಾಗಾಗಿ ಇಂತಹ ಯಾವುದೇ ಘಟನೆ ಮತ್ತೆ ಕಂಡು ಬಂದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ತಿಳಿಸಿದೆ. ಇದನ್ನೂ ಓದಿ: Monsoon Places: ಮಳೆಗಾಲದಲ್ಲಿ ನೋಡಲೇಬೇಕಾದ ಕರ್ನಾಟಕದ ಪ್ಲೇಸ್ ಗಳು ಯಾವುವು ಗೊತ್ತೇ? ಇವುಗಳಿಗೆ ತಪ್ಪದೆ ಹೋಗಿ.

Comments are closed.