Property Registration: ಆಸ್ತಿ ನೋಂದಣಿ ಮಾಡುವಾಗ ಈ ವಿಷಯಗಳು ನಿಮಗೆ ಸಂಪೂರ್ಣ ತಿಳಿದಿರಲಿ, ಯಾವುದೇ ಕಾರಣಕ್ಕೂ ಮರೆಯಬೇಡಿ.

Property Registration: ಯಾರೇ ಆದರೂ ಹೊಸದಾಗಿ ಆಸ್ತಿ ಖರೀದಿ ಮಾಡಿದರೆ, ಆ ಆಸ್ತಿಯನ್ನು ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಳ್ಳುತ್ತಾರೆ. ಆಸ್ತಿ ರಿಜಿಸ್ಟರ್ ಮಾಡಿಸಿಕೊಳ್ಳಲು ಆಸ್ತಿ ಮಾರುತ್ತಿರುವವರ ಹಾಗೂ ಆಸ್ತಿ ಕೊಂಡುಕೊಳ್ಳುತ್ತಿರುವವರ ಅನೇಕ ದಾಖಲೆಗಳನ್ನು ಸರ್ಕಾರ ಕೇಳುತ್ತದೆ. ಅದನ್ನು ಇಬ್ಬರು ನೀಡಬೇಕು. ರಿಜಿಸ್ಟ್ರೇಶನ್ ಫೀಸ್ ಆಸ್ತಿಯ ಆಧಾರದ ಮೇಲೆ ನಿರ್ಧಾರವಾಗುತ್ತದೆ.

ಅದರಲ್ಲೂ ಭೂಮಿ ವಿಷಯಕ್ಕೆ ಬಂದರೆ, ಒಬ್ಬ ವ್ಯಕ್ತಿಯ ಹೆಸರಿನಿಂದ ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ಬದಲಾಯಿಸುವುದು ಒಂದು ರೀತಿ ಕಾನೂನು ಪ್ರಕ್ರಿಯೆ, ಭಾರತ ಸರ್ಕಾರವು ಭೂಮಿಯ್ ರಿಜಿಸ್ಟರ್ ಪ್ರಕ್ರಿಯೆಯನ್ನು ನಡೆಸುತ್ತದೆ. ಇದಕ್ಕಾಗಿ ಸರ್ಕಾರ ಇಂತಿಷ್ಟು ಎಂದು ಶುಲ್ಕ ವಿಧಿಸುತ್ತದೆ. ಭೂಮಿಯ ಬೆಲೆ ಎಷ್ಟು ಎನ್ನುವುದರ ಮೇಲು ಅವಲಂಬಿಸಿರುತ್ತದೆ. ಮೊದಲಿಗೆ ನೀವು ರಿಜಿಸ್ಟ್ರೇಶನ್ ಚಾರ್ಜ್ ಬಗ್ಗೆ ತಿಳುದುಕೊಳ್ಳುವುದು ಒಳ್ಳೆಯದು. ಬಹಳಷ್ಟು ಜನರಿಗೆ ಇದರ ಬಗ್ಗೆ ಏನು ಗೊತ್ತಿರುವುದಿಲ್ಲ..

ಇಲ್ಲಿ ಸ್ಟ್ಯಾಂಪ್ ಡ್ಯೂಟಿ ಶುಲ್ಕವು ಭೂಮಿ ನೋಂದಣಿಗೆ ಖರ್ಚು ಮಾಡುವ ಹಣದ ಮುಖ್ಯ ಅಂಶ ಆಗುತ್ತದೆ. ಇದರ ಅರ್ಥ ಸರ್ಕಾರ ಮುದ್ರೆ ಬಳಕೆ ವೇಳೆ ರಿಜಿಸ್ಟ್ರೇಶನ್ ಖರ್ಚನ್ನು ಕಡಿಮೆ ಮಾಡುತ್ತದೆ. ಭೂಮಿ ಯಾವ ರೀತಿ ಇದೆ ಎನ್ನುವುದರ ಮೇಲೆ ಬೇರೆ ಬೇರೆ ಸ್ಟ್ಯಾಂಪ್ ಶುಲ್ಕವನ್ನು ನೀವು ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ನೀವು ಹಳ್ಳಿಯಲ್ಲಿ ಭೂಮಿ ಖರೀದಿ ಮಾಡಿದರೆ ಶುಲ್ಕ ಕಡಿಮೆ ಇರುತ್ತದೆ, ಸಿಟಿಯಲ್ಲಿ ಖರೀದಿ ಮಾಡಿದರೆ ಜಾಸ್ತಿ ಇರುತ್ತದೆ.

ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ಭೂಮಿಗೆ ಸ್ಥಳೀಯ ರೇಟ್ ಎಷ್ಟಿದೆ, ಅದಕ್ಕೆ ಅಥವಾ ಸರ್ಕಾರದ ದರಕ್ಕೆ ಪಾವತಿ ಮಾಡಬೇಕು. ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ರಾಜ್ಯ ಸರ್ಕಾರಗಳು ನಿಗದಿ ಮಾಡಿರುವುದರಿಂದ, ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆ ದರ ಇರುತ್ತದೆ. ಸಾಮಾನ್ಯವಾಗಿ ನಿಮ್ಮ ಆಸ್ತಿಯ ಮೌಲ್ಯದ 3% ಇಂದ 10% ಒಳಗೆ ಈ ದರ ಇರುತ್ತದೆ. ನೀವು ಆಸ್ತಿ ಮೇಲೆ ಮುದ್ರಂಕ ಶುಲ್ಕ ಮತ್ತು ರಿಜಿಸ್ಟ್ರೇಶನ್ ಶುಲ್ಕ ಎರಡನ್ನು ಪಾವತಿ ಮಾಡಿಬೇಕು.

ರಿಜಿಸ್ಟ್ರೇಶನ್ ಶುಲ್ಕವು ನಿಮ್ಮ ಆಸ್ತಿಯ ಮಾರ್ಕೆಟ್ ವ್ಯಾಲ್ಯೂ ಎಷ್ಟಿದೆಯೋ ಅದರ 1% ಆಗಿರುತ್ತದೆ. ಉದಾಹರಣೆಗೆ ಕೊಡುವುದಾದರೆ, ಒಂದು ವೇಳೆ ಒಬ್ಬ ವ್ಯಕ್ತಿ 60 ಲಕ್ಷ ರೂಪಾಯಿಗೆ ಆಸ್ತಿ ಖರೀದಿ ಮಾಡಿದರೆ, ಸ್ಟ್ಯಾಂಪ್ ಡ್ಯೂಟಿ ಶುಲ್ಕ 6% ಆದರೆ, ಸ್ಟ್ಯಾಂಪ್ ಡ್ಯೂಟಿ 3.6ಲಕ್ಷ ಮತ್ತು ರಿಜಿಸ್ಟ್ರೇಶನ್ ಗೆ 60,000 ಪಾವತಿ ಮಾಡಬೇಕಾಗುತ್ತದೆ.

Comments are closed.