RTO Rules: ಚಾಲಕರೆ ನೆನಪಿಡಿ, ಈ ಡಾಕ್ಯುಮೆಂಟ್ ಇನ್ನುಮುಂದೆ ನಿಮ್ಮ ಬಳಿ ಇಲ್ಲದೇ ಇದ್ದರೆ ನಿಮ್ಮ ಗಾಡಿ ಸೀಝ್ ಆಗೊದು ಪಕ್ಕಾ!

RTO Rules: ಮನೆಯಿಂದ ವಾಹನದಲ್ಲಿ ಹೊರಗೆ ಬರುವಾಗ ಇನ್ನು ಮುಂದೆ ಹೆಲ್ಮೆಟ್ (Helmet) ಮತ್ತು ಡಾಕ್ಯುಮೆಂಟ್ಸ್ (Documents), ಸರಿಯಾಗಿ ಇದೆಯೇ ಎಂದು ಡಬಲ್ ಚೆಕ್ ಮಾಡದೇ ಹೊರಡಬೇಡಿ. ಬಹಳಷ್ಟು ಮಂದಿ ತಮ್ಮ ಡಾಕ್ಯುಮೆಂಟ್ಸ್ ಅನ್ನು ಗಾಡಿಯಲ್ಲಿಯೋ ಅಥವಾ ಪರ್ಸ್ ನಲ್ಲಿಯೋ ಸರಿಯಾಗಿ ಇಟ್ಟಿರುತ್ತಾರೆ. ಹೀಗೆ ಇಡದವರು ಇನ್ನು ಮೇಲೆ ಡಬಲ್ ಚೆಕ್ ಮಾಡಿಕೊಳ್ಳಬೇಕು. ಯಾಕೆಂದರೆ ಚೆಕ್ಕಿಂಗ್ ಇನ್ನು ಮುಂದೆ ಬಹಳ ಕಟ್ಟಿನಿಟ್ಟಾಗಲಿದೆ. ಇದನ್ನೂ ಓದಿ:Monsoon Places: ಮಳೆಗಾಲದಲ್ಲಿ ನೋಡಲೇಬೇಕಾದ ಕರ್ನಾಟಕದ ಪ್ಲೇಸ್ ಗಳು ಯಾವುವು ಗೊತ್ತೇ? ಇವುಗಳಿಗೆ ತಪ್ಪದೆ ಹೋಗಿ.

ಕೊರೋನಾ ನಂತರ ವಾಹನ ಸವಾರರ ಮೇಲಿನ ಚೆಕ್ಕಿಂಗ್ ಸ್ವಲ್ಪ ಸಡಿಲವಾಗಿತ್ತು. ಕೊರೋನಾ ಬೇಗ ಹರಡುತ್ತದೆ ಎಂಬ ಕಾರಣಕ್ಕೆ ಸೋಷಿಯಲ್ ಡಿಸ್ಟೆನ್ಸ್ ಅಗತ್ಯವಾದಾಗ ಚೆಕ್ಕಿಂಗ್ ಮೊದಲಿನಂತೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಕೊರೋನಾ ಭಯ ಕಮ್ಮಿ ಆಗುತ್ತಿದ್ದಂತೆ ಚೆಕ್ಕಿಂಗ್ ಜಾಸ್ತಿಯಾಗುತ್ತಾ ಹೋಗಿತ್ತು. ಈಗ ಆರ್. ಟಿ. ಒ. ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ ಇದರೊಂದಿಗೆ ಚೆಕ್ಕಿಂಗ್ ಜಾಸ್ತಿ ಆಗುತ್ತಾ ಹೋಗುತ್ತದೆ.

ಮೊದಲು ಹೆಲ್ಮೆಟ್ ಇದೆ ಸರ್, ಎಲ್ಲಾ ಡಾಕ್ಯುಮೆಂಟ್ಸ್ ಇದೆ ಇದೊಂದೇ ಇಲ್ಲ ಅದೂ ಮನೆಯಲ್ಲಿದೆ ಎಂದು ಕಾರಣ ಹೇಳಿ ಜಾರಿಕೊಳ್ಳುತ್ತಿದ್ದವರಿಗೆ ಇನ್ನು ಮುಂದೆ ಆ ತರಹ ಮಾಡಲು ಆಗುವುದಿಲ್ಲ. ಯಾವುದೇ ಒಂದು ಡಾಕ್ಯುಮೆಂಟ್ ಇಲ್ಲಾ ಎಂದಾದರೂ ದಂಡ ಮತ್ತು ಶಿಕ್ಷೆ ಎರಡೂ ಕಟ್ಟಿಟ್ಟ ಬುತ್ತಿ. ಇದನ್ನೂ ಓದಿ: Car camera benefits: ಕಾರ್ ನಲ್ಲಿ ಕ್ಯಾಮೆರಾ ಇಟ್ಟುಕೊಳ್ಳುವುದರಿಂದ ಏನೆಲ್ಲಾ ಲಾಭ ಗೊತ್ತೇ?? ತಿಳಿದರೆ ಇಂದೇ ನಿಮ್ಮ ಕಾರಿನಲ್ಲಿ ಹಾಕಿಸಿಕೊಳ್ತೀರಿ.

ಟ್ರಾಫಿಕ್ ನಿಯಮ ಪಾಲಿಸದೇ ಇದ್ದರೆ ಸಾವಿರಾರು ರೂ. ದಂಡ

ಸರ್ಕಾರದ ಗ್ಯಾರಂಟಿ ಯೋಜನ್ಗಳನ್ನು ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಅದಕ್ಕೆ ಕೋಟ್ಯಾಂತರ ಹಣವನ್ನು ಹೊಂದಿಸಲು ಸರ್ಕಾರ ಸಾರ್ವಜನಿಕರ ಟ್ಯಾಕ್ಸ್, ವಿದ್ಯುತ್ ಬಿಲ್ ಮೊದಲಾದವುಗಳನ್ನು ಜಾಸ್ತಿ ಮಾಡಿದೆ. ಇದರ ಜೊತೆಗೆ ಟ್ರಾಪಿಕ್ ರೂಲ್ಸ್ ಹೆಚ್ಚಿಸುವ ಮೂಲಕ ರಾಜ್ಯ ಬೊಕ್ಕಸಕ್ಕೆ ಹಣ ಹೊಂದಿಸುತ್ತಿದೆಯಾ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರತಿವರ್ಷ 2.50 ಲಕ್ಷ ವಾಹನಗಳನ್ನು ಚೆಕ್ ಮಾಡಲಾಗುತ್ತಿತ್ತು. ಈ ವರ್ಷ 4.35 ಲಕ್ಷ ವಾಹನ ಚೆಕ್ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ ಚಾಲಕರ ಜೇಬು ಖಾಲಿ ಆಗುವುದಂತೂ ಸತ್ಯ. ಇದರಿಂದ ತಪ್ಪಿಸಿಕೊಳ್ಳಲು ಸರಿಯಾದ ಡಾಕ್ಯುಮೆಂಟ್ಸ್ ಇಟ್ಟೂಕೊಂಡೂ ಟ್ರಾಫಿಕ್ ರೂಲ್ಸ್ ಪಾಲಿಸುವುದು ಒಂದೇ ಮಾರ್ಗ!  

Comments are closed.