Shravan Maas 2023: ರಾಹು ಕೇತು ದೋಷದಿಂದ ಉಂಟಾಗುವ ಕಾಳ ಸರ್ಪ ಸಮಸ್ಯೆಗೆ ಶ್ರಾವಣ ಮಾಸದಲ್ಲಿ ಹೀಗೆ ಮಾಡಿದರೆ ಸಿಗುತ್ತೆ ಪರಿಹಾರ

Shravan Maas 2023: ಶ್ರಾವಣ ಮಾಸ ಅಂದ್ರೆ ಹಿಂದುಗಳಿಗೆ ಪವಿತ್ರ ತಿಂಗಳು ಇಂದು ಹೇಳಲಾಗುತ್ತದೆ ಈ ಮಾಸದಲ್ಲಿ ಸಾಕಷ್ಟು ವ್ರತಾಚರಣೆ, ದೇವಾನುದೇವತೆಗಳ ಆರಾಧನೆ ಮಾಡಲಾಗುತ್ತದೆ ಈ ರೀತಿ ಮಾಡೋದ್ರಿಂದ ನಮ್ಮ ಜಾತಕದ ಮೇಲೆ ಇರುವ ರಾಹು ಕೇತುವಿನ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಬಹುದು. ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದನ್ನೂ ಓದಿ: RTO Rules: ಚಾಲಕರೆ ನೆನಪಿಡಿ, ಈ ಡಾಕ್ಯುಮೆಂಟ್ ಇನ್ನುಮುಂದೆ ನಿಮ್ಮ ಬಳಿ ಇಲ್ಲದೇ ಇದ್ದರೆ ನಿಮ್ಮ ಗಾಡಿ ಸೀಝ್ ಆಗೊದು ಪಕ್ಕಾ!

ಯಾವುದೇ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ರಾಹು ಕೇತು ದುಷ್ಪರಿಣಾಮ ಇದ್ದರೆ ಕಾಳ ಸರ್ಪದೋಷ ಕೂಡ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ರಾಹು ಕೇತುವಿನ ಪ್ರಭಾವದಿಂದ ಉಂಟಾಗುವ ಸಮಸ್ಯೆಯನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕೆಲಸಗಳನ್ನು ಮಾಡುವುದರ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಎಂದು ಹೇಳಲಾಗುತ್ತದೆ.

ರಾಹು ಕೇತು ದೋಷ

ರಾಹು ಹಾಗೂ ಕೇತುವನ್ನು ಋಣಾತ್ಮಕ ಗ್ರಹಗಳು ಎಂದೇ ಹೇಳಲಾಗುತ್ತದೆ ಸಾಮಾನ್ಯವಾಗಿ ದೈಹಿಕ, ಮಾನಸಿಕ, ಆರ್ಥಿಕ ಸಮಸ್ಯೆಯನ್ನು ಈ ಗ್ರಹಗಳು ಉಂಟು ಮಾಡಬಹುದು. ರಾಹು ಕೇತು ಕೆಲವೊಮ್ಮೆ ಧನಾತ್ಮಕ ಪರಿಣಾಮವನ್ನು ಕೂಡ ಉಂಟು ಮಾಡುತ್ತವೆ. ರಾಹು ಹೆಚ್ಚಾಗಿ ಮಿಶ್ರಫಲವನ್ನು ನೀಡುವ ಗ್ರಹ. ರಾಹುವಿನ ದೆಸೆಯಿಂದ ಜೀವನದಲ್ಲಿ ಆತಂಕ ಭಯ ಹೆಚ್ಚಾಗಬಹುದು. ಅದೇ ರೀತಿ ರಾಹುವಿನ ಸ್ಥಾನ ಕುಂಡಲಿಯಲ್ಲಿ ಇದ್ದರೆ ಕೆಲವೊಮ್ಮೆ ಶುಭಕರ ಫಲಿತಾಂಶ ಕೂಡ ಸಿಗಬಹುದು. ಇನ್ನು ರಾಹು ಹಾಗೂ ಕೇತು ಎರಡು ಗ್ರಹಗಳು ಕುಂಡಲಿಯಲ್ಲಿ ಇದ್ದರೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರಬಲ್ಲವು. ಹಾಗಾಗಿ ಇದೆಲ್ಲದಕ್ಕೂ ಪರಿಹಾರ ಸಿಗಬೇಕು ಅಂದ್ರೆ ಶ್ರಾವಣ ಮಾಸದಲ್ಲಿ ನೀವು ಇದೊಂದು ಕೆಲಸವನ್ನು ಮಾಡಿ. ಇದನ್ನೂ ಓದಿ: Property Registration: ಆಸ್ತಿ ನೋಂದಣಿ ಮಾಡುವಾಗ ಈ ವಿಷಯಗಳು ನಿಮಗೆ ಸಂಪೂರ್ಣ ತಿಳಿದಿರಲಿ, ಯಾವುದೇ ಕಾರಣಕ್ಕೂ ಮರೆಯಬೇಡಿ.

ಶ್ರಾವಣ ಮಾಸದ ಶಿವನ ಆರಾಧನೆ

ಶ್ರಾವಣ ಮಾಸ ಅಂದರೆ ಶಿವನಿಗೆ ಮೀಸಲಾದ ತಿಂಗಳು ಎನ್ನಲಾಗುತ್ತದೆ. ಈ ಸಂದರ್ಭದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಬಹಳ ಒಳ್ಳೆಯದು ಜೊತೆಗೆ ಸಾಕಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾನೆ ಶಿವ. ವಿಶೇಷವಾಗಿ ಕುಂಡಲಿಯಲ್ಲಿ ರಾಹು ಮತ್ತು ಕೇತುವಿನ ಸಮಸ್ಯೆ ಇದ್ದರೆ ಅದಕ್ಕೆ ಸುಲಭ ಪರಿಹಾರ ದೊರೆಯುತ್ತದೆ.

ಶ್ರಾವಣ ಮಾಸದಲ್ಲಿ ರುದ್ರಾಭಿಷೇಕ ಮಾಡಿಸುವುದು ಬಹಳ ಒಳ್ಳೆಯದು ಇದರಿಂದ ರಾಹು ಕೇತುವಿನ ದುಷ್ಪರಿಣಾಮವನ್ನು ನಿಯಂತ್ರಿಸಬಹುದು ಜೊತೆಗೆ ಶುಭ ಫಲಗಳು ಕೂಡ ಸಿಗುತ್ತವೆ. ಎಣ್ಣೆಯ ಅಭಿಷೇಕ ಮಾಡಿದರೆ ರಾಹುವಿನಿಂದ ಉಂಟಾಗುವ ಕಷ್ಟಗಳು ಮಂಜುಗಡ್ಡೆಯಂತೆಯೇ ಕರಗಿ ಹೋಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಹೇಳಲಾಗಿದೆ. ಅದೇ ರೀತಿ ರಾಹುವಿನ ಸ್ಥಾನ ಕುಂಡಲಿಯಲ್ಲಿ ಅನುಚಿತವಾಗಿದ್ದರೆ ತಪ್ಪದೇ ಶ್ರಾವಣ ಮಾಸದಲ್ಲಿ ಶಿವನಿಗೆ ವಿಶೇಷವಾದ ಪೂಜೆ, ಜಿಲ್ವ ಪತ್ರೆ ಅರ್ಪಿಸುವುದು, ಅಭಿಷೇಕ ಮಾಡುವುದು ಶಿವನ ಮಂತ್ರ ಪಠಣೆ ಉಪವಾಸ ಮೊದಲಾದ ವ್ರತಾಚರಣೆ ಮಾಡಿದರೆ ಕುಂಡಲಿಯಲ್ಲಿ ಇರುವ ರಾಹು ಕೇತು ದೋಷಗಳು ಕಾಳಸರ್ಪದೋಷಗಳು ಕೂಡ ನಿವಾರಣೆಯಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

Comments are closed.