Ration Card correction: ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿಲ್ಲವೇ? ಹಾಗಾದರೆ 2000, ಹಣ ಬರಲ್ಲ, ಚಿಂತೆ ಬೇಡ ಜಸ್ಟ್ ಹೀಗೆ ಮಾಡಿ  ನಿಮ್ಮ ಖಾತೆಗೆ ಹಣ ಪ್ರತಿ ತಿಂಗಳು ಬರುತ್ತದೆ

Ration Card correction: ಗೃಹಲಕ್ಷ್ಮಿ ಯೋಜನೆ (Gruhalakshmi Yojane) ಗೆ ಸರ್ಕಾರ ಚಾಲನೆ ನೀಡಿದೆ ಕಳೆದು ತಿಂಗಳೇ ಬರಬೇಕಿತ್ತು ಆದರೆ ಒಂದು ತಿಂಗಳು ವಿಳಂಬವಾಗಿ ನಿನ್ನೆಯಷ್ಟೇ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದೆ.  ಗೃಹಲಕ್ಷ್ಮಿ ಯೋಜನೆಗೆ ಹೆಚ್ಚಿನ ದಾಖಲೆಗಳು ಬೇಕಾಗಿಲ್ಲ ಕೆಲವೇ ಕೆಲವು ದಾಖಲೆಗಳು ಇದ್ದರೂ ಸಾಕು ಉಚಿತವಾಗಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2000 ಬರುವಂತೆ ಮಾಡಬಹುದು.  ಆದರೆ ಇಲ್ಲೊಂದು ಸಮಸ್ಯೆ ಇದೆ. ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಯಜಮಾನ ಹೆಸರು ಇರಬೇಕು ಅಂದರೆ ಯಜಮಾನನ ಹೆಸರಿಗೆ ಬದಲು ಆ ಸ್ಥಳದಲ್ಲಿ ಯಜಮಾನ್ನ ಹೆಸರು ಇರಬೇಕು. ಮಹಾಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಿಲ್ಲ ಹಾಗಂತ ಮಾತ್ರಕ್ಕೆ ಚಿಂತೆ ಪಡುವ ಅಗತ್ಯವಿಲ್ಲ ಯಜಮಾನೀ ಹೆಸರನ್ನು ಹೀಗೆ ಸೇರಿಸಬಹುದು. ಇದನ್ನೂ ಓದಿ: Redmi Note 13 max pro 5G: ಈ ಹೊಸ ರೆಡ್ಮಿ 5 ಜಿ ಫೋನ್ ಗೆ ಹೆಣ್ಣುಮಕ್ಕಳೇ ಟಾರ್ಗೆಟ್ ಯಾಕೆ ಗೊತ್ತಾ?

ಗೃಹಲಕ್ಷ್ಮಿ ಯೋಜನೆಗೆ ಬೇಕಾಗಿರುವ ದಾಖಲೆಗಳು

ರೇಷನ್ ಕಾರ್ಡ್ (Ration card)

ಆಧಾರ್ ಕಾರ್ಡ್ (Adhar Card)

ಅಕೌಂಟ್ ಪಾಸ್ ಬುಕ್ ಪ್ರತಿ (Bank passbook)

ಆಧಾರ್ ಹಾಗೂ ಬ್ಯಾಂಕ್ ಅಕೌಂಟ್ ಗೆ ಕನೆಕ್ಟ್ ಆಗಿರುವ ಮೊಬೈಲ್ ಫೋನ್

ಬೇರೆ ಖಾತೆಗೆ ಹಣ ಬರಬೇಕು ಅಂದ್ರೆ ಆ ಖಾತೆಯ ಪಾಸ್ ಬುಕ್ ಪ್ರತಿ

ಗಂಡನ ಆಧಾರ ಕಾರ್ಡ್

ಇದಿಷ್ಟು ಮುಖ್ಯವಾಗಿ ಬೇಕಾಗಿರುವ ದಾಖಲೆಗಳು ಇದ್ದರೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮಿ ಯೋಜನೆ ಪಡೆದುಕೊಳ್ಳಲು ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿ ಇರುವುದು ಬಹಳ ಮುಖ್ಯ ಅಂದರೆ ಪುರುಷ ಯಜಮಾನ ಎಂದು ರೇಷನ್ ಕಾರ್ಡ್ ನಲ್ಲಿ ಹೆಸರಿದ್ದರೆ ಅವರಿಗೆ ಹಣ ಸಿಗುವುದಿಲ್ಲ ಆದರೆ ಸುಲಭವಾಗಿ ನೀವು ಹೆಸರನ್ನು ಬದಲಾಯಿಸಿಕೊಳ್ಳಬಹುದು. ಇದನ್ನೂ ಓದಿ: RTO Rules: ಚಾಲಕರೆ ನೆನಪಿಡಿ, ಈ ಡಾಕ್ಯುಮೆಂಟ್ ಇನ್ನುಮುಂದೆ ನಿಮ್ಮ ಬಳಿ ಇಲ್ಲದೇ ಇದ್ದರೆ ನಿಮ್ಮ ಗಾಡಿ ಸೀಝ್ ಆಗೊದು ಪಕ್ಕಾ!

ಮುಖ್ಯಸ್ಥರ ಹೆಸರು ಬದಲಾಯಿಸಲು ಬೇಕಾಗಿರುವ ದಾಖಲೆಗಳು

ಯಾರು ಹೆಸರಿನಲ್ಲಿ ರೇಷನ್ ಕಾರ್ಡ್ ಇದೆಯೋ ಆ ರೇಷನ್ ಕಾರ್ಡ್/ ಒಂದು ವೇಳೆ ಪತಿ ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರ

ಆಧಾರ ಕಾರ್ಡ್ ಹಾಗೂ ಇತರ ಪುರಾವೆ ದಾಖಲೆಗಳು

ಯಾರ ಹೆಸರಿಗೆ ಆಗಬೇಕು ಆ ಅರ್ಜಿದಾರರ ದಾಖಲೆ ಪುರಾವೆ (ಆಧಾರ್ ಕಾರ್ಡ್)

ಸ್ವಯಂ ಘೋಷಣಾ ಅರ್ಜಿ ಪತ್ರ

ಕುಟುಂಬದ ಹೊಸ ಮುಖ್ಯಸ್ಥರ ಪಾಸ್ಪೋರ್ಟ್ ಗಾತ್ರದ ಫೋಟೋ.

ಹೆಸರು ಬದಲಾಯಿಸುವುದು ಹೇಗೆ?

ಹತ್ತಿರದ ಪಡಿತರ ಚೀಟಿ ಸೇವಾ ಕೇಂದ್ರಗಳಿಗೆ ಹೋಗಿ ಅಲ್ಲಿ ಮುಖ್ಯಸ್ಥರ ಹೆಸರು ಬದಲಾಯಿಸುವುದಕ್ಕೆ ಒಂದು ಅರ್ಜಿ ನಮೂನೆಯನ್ನು ಕೊಡುತ್ತಾರೆ ಅದನ್ನು ಭರ್ತಿ ಮಾಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೊಡಿ. ನಂತರ ಬಯೋಮೆಟ್ರಿಕ್ ದೃಢೀಕರಣದ ಮೂಲಕ ನಿಮ್ಮ ಹೆಸರಿಗೆ ರೇಷನ್ ಕಾರ್ಡ್ ಬದಲಾಯಿಸಿ ಕೊಡಲಾಗುತ್ತದೆ. ಇದನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ ನಿಮ್ಮ ಕೈಗೆ ರೇಷನ್ ಕಾರ್ಡ್ ತಲುಪಲು ಸ್ವಲ್ಪ ಸಮಯ ಆಗಬಹುದು. ಪ್ರಕ್ರಿಯೆ ಮುಗಿದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಎಸ್ಎಂಎಸ್ ಬರುತ್ತದೆ ಎಸ್ಎಂಎಸ್ ಸ್ವೀಕರಿಸಿ ಪಡೆದು ಪಡಿತರ ಚೀಟಿ ಬರುತ್ತದೆ ಎಂಬುದನ್ನು ಕಂಫರ್ಮ್ ಮಾಡಿಕೊಳ್ಳಿ.

ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಿ

https://ahara.kar.nic.in/ ವೆಬ್ಸೈಟ್ ಗೆ ಲಾಗ್ ಇನ್ ಆಗಿ. ಅಲ್ಲಿ ಮೇನ್ ಪೇಜ್ ನಲ್ಲಿ ಕಾಣುವ ಈ ಸೇವೆಗಳ ಮೇಲೆ ಕ್ಲಿಕ್ ಮಾಡಿ.  ತಿದ್ದುಪಡಿ ಅಥವಾ ಹೊಸ ಸೇರ್ಪಡೆ ಎನ್ನುವ ಆಯ್ಕೆ ಕಾಣಿಸುತ್ತದೆ. ಅಲ್ಲಿ ತಿದ್ದುಪಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಗಳಿಗೆ ಅನುಗುಣವಾಗಿ ಕಾಣಿಸುವ ಲಿಂಕ್ ಕ್ಲಿಕ್ ಮಾಡಿ. ಅದನ್ನು ಭರ್ತಿ ಮಾಡಿ ನಂತರ ಅಗತ್ಯವಿರುವ ದಾಖಲೆಗಳ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಬೇಕು. ಬಳಿಕ ಸಬ್ಮಿಟ್ ಎಂದು ಕಳುಹಿಸಿ. ಸಲ್ಲಿಕೆ ಮಾಡಿದ ನಂತರ ರಿಜಿಸ್ಟರ್ ನಂಬರ್ ಬರುತ್ತದೆ ಆ ಮೂಲಕ ನೀವು ನಿಮ್ಮ ಪಡಿತರ ಚೀಟಿಯ ಸ್ಟೇಟಸ್ ಚೆಕ್ ಮಾಡಬಹುದು.

ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ಕಡ್ಡಾಯ ನೀವು 2,000ರೂ.ಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಇರಲೇಬೇಕು ಜೊತೆಗೆ ರೇಷನ್ ಕಾರ್ಡ್ ಮನೆಯ ಯಜಮಾನಿ ಹೆಸರಿನಲ್ಲಿ ಇರಬೇಕು. ಸುಲಭವಾಗಿ ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನಿಯ ಹೆಸರನ್ನು ಬದಲಾಯಿಸಬಹುದು.

Comments are closed.