Film News: ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮೇಕಪ್ ಮ್ಯಾನ್ ಒಂದು ದಿನ ಸಿಗರೇಟ್ ಸೇದಿಕೊಂಡು ಬಂದಾಗ ಮಾಡಿದ್ದೇನು ಗೊತ್ತೇ ಅವರಿಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ

Film News: ಡಾಕ್ಟರ್ ರಾಜಕುಮಾರ್ (Dr.Rajkumar) ಅಂದ್ರೆ ಕನ್ನಡಿಗರಿಗೆ ಬಹಳ ಇಷ್ಟ ಅವರನ್ನು ಪೂಜಿಸದೇ ಇರುವ ಆರಾಧಿಸದೆ ಇರುವ ಅಭಿಮಾನಿಗಳೇ ಇಲ್ಲ. ಡಾಕ್ಟರ್ ರಾಜಕುಮಾರ್ ಅವರು ಕೇವಲ ಸಿನಿಮಾದಲ್ಲಿ ಅಭಿನಯಿಸುವುದು ಮಾತ್ರವಲ್ಲ ಒಬ್ಬ ಹೀರೋ (Hero) ಆಗಿ ಮಾತ್ರವಲ್ಲ. ಅವರ ವ್ಯಕ್ತಿತ್ವದಿಂದಲೂ ಕೂಡ ಬಹಳ ಇಷ್ಟವಾಗುತ್ತಿದ್ದರು ಜನರಿಗೆ. ಡಾಕ್ಟರ್ ರಾಜಕುಮಾರ್ ಅವರು ನಿಭಾಯಿಸಿದ ಎಲ್ಲಾ ಪಾತ್ರಗಳು ಇನ್ನೊಬ್ಬರಿಗೆ ಮಾದರಿಯಾಗಿದ್ದವು ಜೊತೆಗೆ ಒಂದಲ್ಲ ಒಂದು ಸಂದೇಶವನ್ನು ಕೊಡುವಂತೆಯೇ ಇತ್ತು. ಇದನ್ನೂ ಓದಿ:Story of Soujanya; ಸಿನಿಮಾದಲ್ಲಾದ್ರೂ ಸಿಗಲಿದ್ಯಾ ಸೌಜನ್ಯ ಕೇಸ್ ಗೆ ನ್ಯಾಯ? ಸ್ಟೋರಿ ಆಫ್ ಸೌಜನ್ಯ ಸಿನಿಮಾ ನಿರ್ಮಾಣಕ್ಕೆ ಮುಂದಾದ ನಿರ್ದೇಶಕರು ಯಾರು?

ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ತಮ್ಮ ಜೊತೆಗೆ ಕೆಲಸ ಮಾಡುವ ಪ್ರತಿಯೊಬ್ಬರನ್ನು ಕೂಡ ಬಹಳ ಪ್ರೀತಿ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಡಾಕ್ಟರ್ ರಾಜಕುಮಾರ್ ಅವರು ಒಬ್ಬ ನಿರ್ಮಾಪಕ, ನಿರ್ದೇಶಕರಿಂದ ಹಿಡಿದು ಸಾಮಾನ್ಯ ಮೇಕಪ್ ಮ್ಯಾನ್ (Make up man) ವರೆಗೂ ಒಂದೇ ರೀತಿಯಾಗಿ ಟ್ರೀಟ್ ಮಾಡುತ್ತಿದ್ದರು ಒಂದೇ ರೀತಿಯಾದ ಗೌರವ ನೀಡುತ್ತಿದ್ದರು. ಹೀಗಿರುವಾಗ ಅಣ್ಣಾವ್ರ ಮೇಕಪ್ ಮ್ಯಾನ್ ಒಬ್ಬರು ಅಣ್ಣಾವ್ರ ಬಗ್ಗೆ ಸಾಕಷ್ಟು ಕುತೂಹಲಕಾರಿ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರು ಸಾಮಾನ್ಯ ಪಾತ್ರಗಳಿಂದ ಹಿಡಿದು ಪೌರಾಣಿಕ ಪಾತ್ರಗಳ ವರೆಗೆ ನಿಭಾಯಿಸಿದ್ದಾರೆ. ಅವರು ಪೌರಾಣಿಕ ಪಾತ್ರಗಳಲ್ಲಿ ಅತ್ಯದ್ಭುತವಾಗಿ ಕಂಗೊಳಿಸುವಂತೆ ಮಾಡುತ್ತಿದ್ದಂತೆ ಅವರ ಮೇಕಪ್ ಮ್ಯಾನ್ ಕೇಶವ (Keshav) ಅವರು. ಡಾಕ್ಟರ್ ರಾಜಕುಮಾರ್ ಅವರಿಗೆ ಯಾರಾದ್ರೂ ಪಾನ್ ಪರಾಗ್ ತಿನ್ನುವುದು ಸಿಗರೇಟ್ ಸೇದುವುದು ಇವೆಲ್ಲಾ ಆಗಿ ಬರುತ್ತಿರಲಿಲ್ಲ. ಸಿಗರೇಟ್ ವಾಸನೆ ಇದ್ದು ಹತ್ತಿರ ಬಂದು ಮೇಕಪ್ ಮಾಡಿದರೆ ರಾಜಕುಮಾರ್ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಶೂಟಿಂಗ್ ಬ್ಯಾಕಪ್ ಆದ ನಂತರ ಅಷ್ಟೇ ಅಲ್ಲಿನ ಕೆಲಸಗಾರರು ಪಾನ್ ಪರಾಗ್ ತಿನ್ನುವುದು ಅಥವಾ ಸಿಗರೇಟ್ ಸೇದುವಂತಹ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ:Loan Transfer: ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡಿಕೊಂಡರೆ ಸಾಲದ ಮೊತ್ತ ಕಡಿಮೆಯಾಗುತ್ತೆ ಹೇಗೆ ಗೊತ್ತಾ?

ಡಾಕ್ಟರ್ ರಾಜಕುಮಾರ್ ಅವರ ಮೇಕಪ್ ಮ್ಯಾನ್ ಕೇಶವ ಇಂತಹ ಒಂದು ಘಟನೆಯನ್ನು ವಿವರಿಸಿದ್ದಾರೆ. ಕೇಶವ ಅವರು ಒಮ್ಮೆ ಸಿನಿಮಾ ಸೆಟ್ನಲ್ಲಿ ಸಿಗರೇಟ್ ಎಳೆದು ನಂತರ ಟೀ ಕುಡಿದು ಅದರಲ್ಲಿಯೇ ಬಾಯಿ ಮುಕ್ಕಳಿಸಿ ಮತ್ತೆ ಮೇಕಪ್ ಮಾಡಲು ಬಂದರಂತೆ. ಇದನ್ನು ದೂರದಿಂದಲೇ ನೋಡಿದ ಡಾಕ್ಟರ್ ರಾಜಕುಮಾರ್ ಅವರು ಮೇಕಪ್ ಮ್ಯಾನ್ ಕೇಶವ್ ಹತ್ತಿರ ಬರುತ್ತಿದ್ದಂತೆ ಸಿಗರೇಟ್ ಸೇದುವುದರಿಂದ ನಿನಗೆ ಏನು ಸಿಗುತ್ತದೆ. ಆರೋಗ್ಯಕ್ಕೂ ಒಳ್ಳೆಯದಲ್ಲ ಬಿಟ್ಟುಬಿಡಯ್ಯ ಎಂದು ಸಲಹೆ ನೀಡಿದ್ದರಂತೆ. ಈ ಮಾತನ್ನು ಕೇಶವ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ ಅದೇ ರೀತಿ ಅವರ ಮಾತನ್ನು ಕೇಳಿ ದುಶ್ಚಟ ಬಿಡುವ ತೀರ್ಮಾನಕ್ಕೂ ಬಂದಿದ್ದರಂತೆ.

ಇನ್ನು ಡಾಕ್ಟರ್ ರಾಜಕುಮಾರ್ ಅವರ ಮೇಕಪ್ ಮ್ಯಾನ್ ಗೆ ಸಿನಿಮಾ ಒಂದಕ್ಕೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಅಣ್ಣಾವ್ರ ಸಿನಿಮಾಗಳು ವಜ್ರೇಶ್ವರಿ ಕಂಬೈನ್ಸ್ ಮೂಲಕವೇ ಸಾಕಷ್ಟು ನಿರ್ಮಾಣವಾಗಿದೆ. ಇನ್ನು ಆ ಸಂದರ್ಭದಲ್ಲಿ ರಾಜಕುಮಾರ್ ಅವರು ಮೇಕಪ್ ಮ್ಯಾನ್ ಗೆ ಕೊಡುತ್ತಿದ್ದ ಸಂಬಳ 80 ರೂಪಾಯಿಗಳು. ಒಂದು ಸಿನಿಮಾಕ್ಕೆ ಒಂದು ಸಲ ಮೇಕಪ್ ಮಾಡಿದ್ದಕ್ಕೆ ಇಷ್ಟು ಹಣ ಸಿಗುತ್ತಿತ್ತು. ಆದರೆ ಆ ಕಾಲದಲ್ಲಿ 80 ಎನ್ನುವುದು ಬಹಳ ದೊಡ್ಡ ಮೊತ್ತವಾಗಿತ್ತು. ಎಂದು ಕೇಶವ ಹೇಳಿಕೊಳ್ಳುತ್ತಾರೆ. ಡಾಕ್ಟರ್ ರಾಜಕುಮಾರ್ ಅವರು ಎಷ್ಟು ಚೆನ್ನಾಗಿ ತಮ್ಮನ್ನು ಕೂಡ ಟ್ರೀಟ್ ಮಾಡುತ್ತಿದ್ದರು ಎಂಬುದನ್ನು ಕೇಶವ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಅಣ್ಣಾವ್ರ ಇಂತಹ ವ್ಯಕ್ತಿತ್ವಕ್ಕೆ ಜನರು ಅವರನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅಭಿನಯಿಸಿದ ಪ್ರತಿಯೊಂದು ಪಾತ್ರದ ಮೂಲಕವೂ ನಮ್ಮಲ್ಲಿ ಸದಾ ಕಾಲಕ್ಕೆ ಶಾಶ್ವತವಾಗಿ ನೆಲೆಸಿರುತ್ತಾರೆ ಅಲ್ವಾ? ಇದನ್ನೂ ಓದಿ:Adhik Maas 2023: ಅಧಿಕ ಮಾಸದಲ್ಲಿ ಈ ನಾಲ್ಕು ರಾಶಿಯವರು ಲಕ್ಷ್ಮೀದೇವಿಯನ್ನು ಪೂಜಿಸದೆ ಇದ್ದರೆ ಭಾರಿ ದೊಡ್ಡ ನಷ್ಟವಾಗುವುದು ಖಂಡಿತ!

Comments are closed.