Team India: ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಈ ಆಟಗಾರ ಇರಲೇಬೇಕು; ಗೌಅಮ್ ಗಂಭೀರ್ ’ಗಂಭೀರವಾಗಿ ಸೂಚಿಸಿದ್ದು ಯಾರ ಹೆಸರು ಗೊತ್ತಾ?

Team India: ಭಾರತದ ಕ್ರಿಕೆಟ್ಟಿಗರಿಗೆ ಐ.ಪಿ.ಎಲ್ (IPL) ಎಷ್ಟು ಮಹತ್ವದ್ದು ನಮಗೆಲ್ಲಾ ಗೊತ್ತೇ ಇದೆ. ಎರಡು ತಿಂಗಳುಗಳ ಕಾಲ ನಡೆಯುವ ಈ ಕ್ರಿಕೆಟ್ ಹಬ್ಬ ಬಂತೆಂದರೆ ಭಾರತದ ಆಟಗಾರರು (Team India Players)  ಮತ್ತು ಪ್ರೇಕ್ಷಕರು ಆನಂದ ಪಡುತ್ತಾರೆ. ಭಾರತದ ಪರ ನಿಯಮಿತವಾಗಿ ಆಡದ ಎಮ್. ಎಸ್. ಧೋನಿ (M.S. Dhoni) ಯಂತಹ ಆಟಗಾರರನ್ನು ನಾವು ಕಳೆದೆರಡು ಸೀಸನ್ ಗಳಿಂದ ಇಲ್ಲಿ ಮಾತ್ರ ನೋಡಲು ಸಾಧ್ಯವಾಗಿತ್ತು. ಇದನ್ನೂ ಓದಿ: Kannada Film: ರಮ್ಯಾ ಗೆ ಬಿಗ್ ಶಾಕ್- ಸಂಜು ವೆಗ್ಸ್ ಗೀತಾ 2 ಗೆ ರಮ್ಯಾ ಅಲ್ಲ ನಾಯಕಿ- ರಮ್ಯಾಕ್ಕಿಂತ ಒಂದು ಕೈ ಮೇಲೆ ಇರುವ ನಟಿ ಆಯ್ಕೆ. ಯಾರು ಗೊತ್ತಾ.

ಕೇವಲ ಅನುಭವ ಇರುವ ಆಟಗಾರರಿಗೆ ಪ್ರದರ್ಷನ ನೀಡಲು ಮತ್ತು ಉತ್ತಮ ಸಂಭಾವನೆ ಪಡೆಯಲಷ್ಟೇ ಈ ಟೂರ್ನಮೆಂಟ್ ಸೀಮಿತವಾಗಿಲ್ಲ. ಹಲವಾರು ಹೊಸ ಟಾಲೆಂಟ್ ಗೆ ಈ ಟೂರ್ನಮೆಂಟ್ ಅವಕಾಶ ಒದಗಿಸಿದೆ. ಭಾರತದ ಏಳು ಜನ ಆಟಗಾರರು ಅಂದಿನ ಪಂದ್ಯವಾಡುವ ಹನ್ನೊಂದು ಜನರಲ್ಲಿ ಇರಲೇ ಬೇಕು ಎಂಬ ನಿಯಮ ಇರುವುದರಿಂದ ಹೊರದೇಶದ ಎಷ್ಟೇ ಆಟಗಾರರು ಇದ್ದರೂ ಎಲ್ಲಾ ಹತ್ತು ತಂಡಗಳು ಸೇರಿ ಎಪ್ಪತ್ತು ಭಾರತೀಯ ಆಟಗಾರರಿಗೆ ಅವಕಾಶ ಇದ್ದೇ ಇರುತ್ತದೆ.

ಹೀಗೆ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಭಾರತೀಯ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗುವುದನ್ನೂ ನಾವು ನೋಡಿದ್ದೇವೆ. ಬುಮ್ರಾ, ಹಾರ್ದಿಕ್, ಜೈಸ್ವಾಲ್ ಮುಂತಾದವರು ಐ.ಪಿ. ಎಲ್. ನ ಆಟದಿಂದಲೇ ಹೆಸರು ಮಾಡಿದವರು. ಕಳೆದ ಸೀಸನ್ ನಲ್ಲೂ ಇದೇ ತರಹ ಹಲವು ಆಟಗಾರರು ಉತ್ತಮ ಆಟ ಆಡಿದ್ದರು. ಅವರಲ್ಲಿ ಜೈಸ್ವಾಲ್ (Yashasvi Jaiswal) ಮತ್ತು ರಿಂಕೂ ಸಿಂಗ್ (Rinku Singh) ಪ್ರಮುಖರು. ಇದನ್ನೂ ಓದಿ: Sania Mirza: ಕರ್ನಾಟಕ ಆರ್ ಸಿ ಬಿ ಮಹಿಳಾ ತಂಡಕ್ಕೆ ಮೆಂಟರ್ ಆಗಿದ್ದ ಸಾನಿಯಾ ಮಿರ್ಜಾ ಕನ್ನಡದಲ್ಲಿ ಒಂದು ಮಾತನಾಡಿ ಅಂದ್ರು ಐ ಕಾಂಟ್ ಎಂದಿದ್ದೇಕೆ ಕಡೆಗೂ ಕನ್ನಡಿಗರು ಏನು ಉತ್ತರ ಕೊಟ್ಟಿದ್ದಾರೆ ಗೊತ್ತೇ

ಗೌತಮ್ ಗಂಭೀರ್ ಸೂಚಿಸಿದ್ದ ಹೆಸರು ಇವರದ್ದೇ!

ಆದರೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ (Gautam Gambhir) ಐ.ಪಿ.ಎಲ್ ಆಧಾರದ ಮೇಲೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಬಿ.ಸಿ.ಸಿ.ಐ ಗೆ ಸಲಹೆ ಒಂದನ್ನು ನೀಡಿದ್ದಾರೆ. ಅವರ ಪ್ರಕಾರ ಕೇವಲ ಎರಡು ತಿಂಗಳುಗಳ ಐ.ಪಿ.ಎಲ್ ನ ಒಂದು ಸೀಸನ್ ಅಷ್ಟನ್ನೇ ಆಯ್ಕೆಗೆ ಪರಿಗಣಿಸಬೇಡಿ. ಆ ಆಟಗಾರನ ದೇಶೀಯ ಕ್ರಿಕೆಟ್ ನ ಸಾಧನೆಯನ್ನೂ ಗಮನಿಸಿ ಎಂದಿದ್ದಾರೆ.

ಪ್ರಸ್ತುತ ಭಾರತದ ತಂಡದಲ್ಲಿ ಅವಕಾಶ ಪಡೆದು ವೆಸ್ಟ್ ಇಂಡೀಸ್ ಸರಣಿ ಆಡುತ್ತಿರುವ ಜೈಸ್ವಾಲ್ ಕೇವಲ ಐ.ಪಿ.ಎಲ್ ಅಲ್ಲದೇ ದೇಶಿಯ ಕ್ರಿಕೆಟ್ ನಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ಫಸ್ಟ್ ಕ್ಲಾಸ್ ಮತ್ತು ದೇಶೀಯ ಏಕದಿನ ಪಂದ್ಯಗಳೆರಡಲ್ಲೂ ಡಬಲ್ ಸೆಂಚುರಿ ಬಾರಿಸಿದ್ದಾರೆ. ಇದೇ ಫಾರ್ಮ್ ಅನ್ನು ಅವರು ಐ.ಪಿ. ಎಲ್ ನಲ್ಲೂ ತೋರಿಸಿ ಭಾರತೀಯ ತಂಡಕ್ಕೆ ಆಯ್ಕೆ ಆಗಿದ್ದಾರೆ.

ರಿಂಕು ಸಿಂಗ್ ಇತ್ತೀಚೆಗೆ ಮುಕ್ತಾಯವಾದ ಐ.ಪಿ.ಎಲ್ ನಲ್ಲಿ 59.25 ಸರಾಸರಿಯಲ್ಲಿ, 149.53 ರ ಸ್ಟ್ರೈಕ್ ರೇಟ್ ನೊಂದಿಗೆ 474 ರನ್ ಗಳಿಸಿದ್ದಾರೆ. ಆದರೆ ಇಂತಹ ಒಂದು ಸೀಸನ್ ಅಷ್ಟೇ ಅವರ ಸಿಲೆಕ್ಷನ್ ಗೆ ಮಾನದಂಡ ಆಗದೇ, ದೇಶೀಯ ಕ್ರಿಕೆಟ್ ನಲ್ಲಿ ಅವರ ಆಟವನ್ನು ಗಮನಿಸಿ ಅಲ್ಲೂ ಇದೇ ತರಹ ಪ್ರದರ್ಶನ ನೀಡಿದರೆ ನಂತರ ಭಾರತೀಯ ತಂಡದಲ್ಲಿ ಆಯ್ಕೆ ಮಾಡಿ ಎಂದು ಗೌತಮ್ ಗಂಭೀರ್‍ ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಲ್ಲಿ ಚೈನಾ ದಲ್ಲಿ ನಡೆಯುವ ಏಷಿಯನ್ ಗೇಮ್ಸ್ ನಲ್ಲಿ ಭಾರತದ ತಂಡವನ್ನು ಲೀಡ್ ಮಾಡಲು ರುತುರಾಜ್ ಗಾಯಕ್ವಾಡ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಐ.ಪಿ.ಎಲ್ ಮತ್ತು ದೇಶೀಯ ಕ್ರಿಕೆಟ್ ಎರಡರ ಸಾಧನೆಯನ್ನೂ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದೇ ತಂಡದಲ್ಲಿ ರಿಂಕು ಸಿಂಗ್ ಮತ್ತು ಜಿತೇಶ್ ಶರ್ಮಾ ಕೂಡ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: Film News: ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮೇಕಪ್ ಮ್ಯಾನ್ ಒಂದು ದಿನ ಸಿಗರೇಟ್ ಸೇದಿಕೊಂಡು ಬಂದಾಗ ಮಾಡಿದ್ದೇನು ಗೊತ್ತೇ ಅವರಿಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ

Comments are closed.