Vastu Tips: ಎಷ್ಟೇ ದುಡಿದ್ರೂ ಜೇಬಿನಲ್ಲಿ ಒಂದು ರೂಪಾಯಿ ಕೂಡ ನಿಲ್ಲುತ್ತಿಲ್ಲವೇ? ಹಾಗಾದ್ರೆ  ಇದೊಂದು ಕೆಲ್ಸ ಮಾಡಿ, ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ!

Vastu Tips: ಇಂದು ಎಲ್ಲಾ ವಸ್ತುಗಳಿಗೂ ಬೆಲೆ ಇರುತ್ತದೆ ನಾವು ನಿತ್ಯ ಬಳಸುವ ವಸ್ತುಗಳನ್ನು ಖರೀದಿ ಮಾಡುವುದು ಕೂಡ ಕಷ್ಟವಾಗಿದೆ ಹಾಗಾಗಿ ಎಷ್ಟೇ ಹಣ ಗಳಿಸಿದರು ಜೇಬಿ ನಲ್ಲಿ ಒಂದು ರೂಪಾಯಿ ಕೂಡ ನಿಲ್ಲುತ್ತಿಲ್ಲ ಎನ್ನುವ ಅಳುಕು ಪ್ರತಿಯೊಬ್ಬರಲ್ಲೂ ಇರುತ್ತೆ. ಆದ್ರೆ ವಾಸ್ತು ಶಾಸ್ತ್ರ ಕೆಲವು ನಿಯಮಗಳನ್ನು ಮಾಡಿದ್ದು ಅವುಗಳನ್ನ ನಾವು ಅನುಸರಿಸಿದರೆ ಯಾವಾಗಲೂ ಆರ್ಥಿಕ ತೊಂದರೆ ಬರುವುದಿಲ್ಲ ಎಂದು ಹೇಳಲಾಗುತ್ತದೆ. ವಾಸ್ತು ಪ್ರಕಾರ ಯಾವೆಲ್ಲಾ ನಿಯಮಗಳನ್ನು ಅನುಸರಿಸಬೇಕು ನೋಡೋಣ.

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ:

ಲಕ್ಷ್ಮೀದೇವಿಯನ್ನು ಆಹ್ವಾನ ಮಾಡಲು ಇದು ಬಹಳ ಮುಖ್ಯವಾದ ವಿಷಯ. ಹೊಸ ಸಂಗ್ರಹವಾಗಿದ್ದರೆ ಲಕ್ಷ್ಮಿ ದೇವಿ ಮನೆಯ ಪ್ರವೇಶಿಸುವುದಿಲ್ಲ. ಭಾನುವಾರ ಮಂಗಳವಾರ ಹಾಗೂ ಗುರುವಾರ ಉಪ್ಪುನೀರಿಲ್ಲಿ ಮನೆಯನ್ನು ಒರೆಸಿ.

ಮಲಗುವ ಮುನ್ನ ಕೈಕಾಲು ತೊಳೆದು ಮಲಗಿ

ಮಲಗುವಾಗ ಸ್ವಚ್ಛತೆಯಿಂದ ಇರುವುದು ಕೂಡ ಬಹಳ ಮುಖ್ಯ ನೀವು ಚೆನ್ನಾಗಿ ಕೈಕಾಲು ಮುಖ ತೊಳೆದು ಮಲಗಿಕೊಂಡರೆ ಚೆನ್ನಾಗಿ ನಿದ್ದೆ ಬರುತ್ತದೆ. ಒಳ್ಳೆಯ ಆಲೋಚನೆ ಬರುತ್ತದೆ. ಹಾಗಾಗಿ ನೀವು ಯಾವುದೇ ಯೋಚನೆ ಇಲ್ಲದೆ ಕೆಲಸಕ್ಕೆ ಹೋಗಬಹುದು.

ಕರ್ಪೂರ ಉರಿಸುವುದು

ಪ್ರತಿದಿನ ಮನೆಯಲ್ಲಿ ಕರ್ಪೂರವನ್ನು ಉರಿಸಿದರೆ ಲಕ್ಷ್ಮಿ ದೇವಿ ಮನೆಗೆ ಬರುತ್ತಾಳೆ. ಕರ್ಪೂರ ಉಳಿಸುವುದರಿಂದ ಆ ಘಮಕ್ಕೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪ್ರವಾಹಿಸುತ್ತದೆ. ಜೊತೆಗೆ ಲಕ್ಷ್ಮಿಯೂ ಕೂಡ ಇಂತಹ ವಾತಾವರಣದಲ್ಲಿ ಇರಲು ಬಯಸುತ್ತಾಳೆ.

ಶುಕ್ರವಾರ ಲಕ್ಷ್ಮಿ ದೇವಿ ಪೂಜೆ

ಪ್ರತಿ ಶುಕ್ರವಾರ ತಪ್ಪದೇ ಲಕ್ಷ್ಮಿ ದೇವಿಯನ್ನು ಪೂಜೆ ಮಾಡಿ ಆಕೆಗೆ ಇಷ್ಟವಾದ ಹಾಲಿನಿಂದ ತಯಾರಿಸಿದ ಸಿಹಿಕಾತ್ಯ ಅಥವಾ ಕೀರನ್ನು ಸಮರ್ಪಿಸಿ. ಕನಕಧಾರ ಮಂತ್ರವನ್ನು ಪಠಣೆ ಮಾಡಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣಕ್ಕೆ ಹೊಸ ಮೂಲವೂ ಸಿಗುತ್ತದೆ ಜೊತೆಗೆ ಲಕ್ಷ್ಮಿ ದೇವಿಯ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ.

ಅಧ್ಯಯನ ಮಾಡುವಾಗ ಇದೊಂದು ಕೆಲಸ ಮಾಡಲೇಬೇಡಿ

ಸಾಕಷ್ಟು ಜನರಿಗೆ ಈ ಅಭ್ಯಾಸವಿರುತ್ತದೆ ಏನಾದ್ರು ಓದುವಾಗ ಅಥವಾ ಬರೆಯುವಾಗ ಆಹಾರವನ್ನು ಸೇವಿಸುತ್ತಾರೆ ಆಹಾರ ಲಕ್ಷ್ಮಿಗೆ ಸಮಾನ. ಅದಕ್ಕೆ ಸರಿಯಾದ ಗೌರವ ಕೊಡಬೇಕು ಸರಿಯಾದ ಸ್ಥಿತಿಯಲ್ಲಿ ಕುಳಿತು ಆಹಾರವನ್ನು ಸೇವಿಸಬೇಕು. ಚೆನ್ನಾಗಿ ಅಗೆದು ನುಂಗಬೇಕು ಆಗ ಮಾತ್ರ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಇದು ನೀವು ಅನ್ನಪೂರ್ಣೇಶ್ವರಿಗೆ ಕೊಡುವ ಗೌರವವು ಹೌದು. ಹಾಗಾಗಿ ಅಧ್ಯಯನ ಮಾಡುವಾಗ ಆಹಾರ ಸೇವಿಸುತ್ತಾ ಅಧ್ಯಯನ ಮಾಡುವುದನ್ನು ಲಕ್ಷ್ಮೀದೇವಿ ಸಹಿಸುವುದಿಲ್ಲ. ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಆಹಾರಕ್ಕೆ ನೀವು ಗೌರವ ಕೊಡುವುದು ಕೂಡ ಅಷ್ಟೇ ಮುಖ್ಯ. ಈ ರೀತಿ ಮನೆಯಲ್ಲಿ ನೀವು ಮಾಡಿಕೊಳ್ಳುವ ಕೆಲವು ಸಣ್ಣ ಪುಟ್ಟ ಬದಲಾವಣೆಗಳು ಲಕ್ಷ್ಮೀದೇವಿಯನ್ನು ಆಕರ್ಷಿಸಲು ಸಹಾಯವಾಗುತ್ತದೆ. ಜೊತೆಗೆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎಂದಿಗೂ ಬರುವುದಿಲ್ಲ.

Comments are closed.