Ration Card correction: ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನ ಹೆಸರನ್ನು ಬದಲಾಯಿಸಿ ಯಜಮಾನಿಯ ಹೆಸರನ್ನು ಹಾಕುವುದು ಈಗ ಅತ್ಯಂತ ಸುಲಭ ಈ ಕೂಡಲೇ ಮಾಡಿಸಿಕೊಳ್ಳಿ, ಇಲ್ಲವಾದರೆ ಸರ್ಕಾರದ ಯೋಜನೆಯ ಪ್ರಯೋಜನ ಸಿಗುವುದಿಲ್ಲ!

Ration Card correction: ಸರ್ಕಾರ ಒಂದರ ಹಿಂದೆ ಒಂದರಂತೆ ಬಿಡುಗಡೆ ಮಾಡುತ್ತಿರುವ ಯೋಜನೆಗಳಿಗೆ ಪಡಿತರ ಚೀಟಿ ಹೊಂದಿರುವುದು ಬಹಳ ಅಗತ್ಯವಾಗಿದೆ. ಎಪಿಎಲ್ (APL), ಬಿಬಿ ಎಲ್ (BPL card) ಅಥವಾ ಅಂತ್ಯೋದಯ ಕಾರ್ಡ್ ಇದ್ದರೆ ಮಾತ್ರ ಸರ್ಕಾರದಿಂದ ಸಿಗುವ ಹೊಸ ಯೋಜನೆಗಳ ಪ್ರಯೋಜನಗಳು ಸಿಗುತ್ತಿವೆ. ಆದರೆ ಅದೆಷ್ಟೋ ಪಡಿತರ ಚೀಟಿ (ration card)ಗಳಲ್ಲಿ ಹೆಸರಿನ ತಿದ್ದುಪಡಿ ಅಥವಾ ಸಂಬಂಧಗಳ ಸೇರ್ಪಡೆ ಅಥವಾ ಯಜಮಾನರ ಹೆಸರು ಬದಲಾಯಿಸುವುದು ಇಂತಹ ಕೆಲಸಗಳು ಆಗಬೇಕಿದೆ ಇದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನೀವು ಸುಲಭವಾಗಿ ಈ ಒಂದು ಕೆಲಸ ಮಾಡಿದರೆ ನಿಮ್ಮ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಬಹುದು. ಇದನ್ನೂ ಓದಿ: Film News: ಡಾಕ್ಟರ್ ರಾಜಕುಮಾರ್ ಅವರು ತಮ್ಮ ಮೇಕಪ್ ಮ್ಯಾನ್ ಒಂದು ದಿನ ಸಿಗರೇಟ್ ಸೇದಿಕೊಂಡು ಬಂದಾಗ ಮಾಡಿದ್ದೇನು ಗೊತ್ತೇ ಅವರಿಗೆ ಸಿಗುತ್ತಿದ್ದ ಸಂಭಾವನೆ ಎಷ್ಟು ಗೊತ್ತೇ

ಪಡಿತರ ಚೀಟಿ ತಿದ್ದುಪಡಿ ಎಂದರೆ ಏನು?

ಸರ್ಕಾರ ನಾಗರಿಕರಿಗೆ ಕೊಡಲ್ಪಡುವ ಪಡಿತರ ಚೀಟಿ ಮೂಲಕ ನ್ಯಾಯಬೆಲೆ ಅಂಗಡಿಯಲ್ಲಿ ಸರ್ಕಾರದಿಂದ ಸಿಗುವ ಧಾನ್ಯಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದು. 5 ಕೆಜಿ ಅಕ್ಕಿ ಉಚಿತವಾಗಿ ಸಿಗುತ್ತಿದೆ ಇನ್ನು ರಾಜ್ಯ ಸರ್ಕಾರ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಹಣವನ್ನು ನೀಡುತ್ತಿದೆ. ಈಗ ಈ ಪ್ರಯೋಜನ ಪಡೆದುಕೊಳ್ಳಬೇಕು ಅಂದರೆ, ಕೆಲವರು ತಮ್ಮ ಪಡಿತರ ಚೀಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯಲ್ಲಿಯೇ ಮಾಡಿಕೊಳ್ಳಬಹುದು..

ಪಡಿತರ ಚೀಟಿ ತಿದ್ದುಪಡಿ;

ತಿದ್ದುಪಡಿಯನ್ನು ಆನ್ಲೈನ್ (online) ಮೂಲಕ ಮಾಡಲು ಸಾಧ್ಯವಿಲ್ಲ. ನೀವು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಕ್ಯೂ ನಿಲ್ಲುವ ಅಗತ್ಯವೂ ಇಲ್ಲ. ನೀವು ಪ್ರತಿ ತಿಂಗಳು ಎಲ್ಲಿ ರೇಷನ್ ತೆಗೆದುಕೊಳ್ಳುತ್ತೀರೋ ಅದೇ ನ್ಯಾಯಬೆಲೆ ಅಂಗಡಿಯಲ್ಲಿ ಬೆರಳಚ್ಚು ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದು. ಹಾಗಾದ್ರೆ ನ್ಯಾಯಬೆಲೆ ಅಂಗಡಿಯಲ್ಲಿ ಯಾವೆಲ್ಲ ತಿದ್ದುಪಡಿಗೆ ಅವಕಾಶ ಮಾಡಿಕೊಡಲಾಗಿದೆ ನೋಡೋಣ. ಇದನ್ನು ಓದಿ: Loan Transfer: ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ಸಾಲ ವರ್ಗಾವಣೆ ಮಾಡಿಕೊಂಡರೆ ಸಾಲದ ಮೊತ್ತ ಕಡಿಮೆಯಾಗುತ್ತೆ ಹೇಗೆ ಗೊತ್ತಾ?

  • ನಿಮ್ಮ ಸಂಬಂಧಗಳಲ್ಲಿ ಯಾವುದಾದರು ತಿದ್ದುಪಡಿ ಆಗಬೇಕಿದ್ದರೆ ಉದಾಹರಣೆಗೆ ಮಗಳ ಸಂಬಂಧ ಸೊಸೆ ಎಂದಾಗಿದ್ದರೆ ಅದನ್ನು ಮಗಳು ಎಂದು ತಿದ್ದುಪಡಿ ಮಾಡಬಹುದು ಅಥವಾ ಲಿಂಗದಲ್ಲಿ ಹೆಚ್ಚು ಕಡಿಮೆ ಆಗಿದ್ದರೆ ಅದನ್ನು ತಿದ್ದುಪಡಿ ಮಾಡಬಹುದು.
  • ಮನೆಯಲ್ಲಿ ಯಾರಾದರೂ ತೀರಿ ಹೋಗಿದ್ದು ಅವರ ಹೆಸರು ಪಡಿತರ ಚೀಟಿಯಲ್ಲಿ ಇದ್ದರೆ ಅವರ ಹೆಸರನ್ನು ತೆಗೆದು ಹಾಕಬಹುದು.
  • ಮನೆಯ ಯಜಮಾನಿನ ಹೆಸರನ್ನು ಬದಲಾಯಿಸಬಹುದು ಉದಾಹರಣೆಗೆ ಪಡಿತರ ಚೀಟಿಯಲ್ಲಿ ಮನೆಯ ಯಜಮಾನನ ಬದಲು ಯಜಮಾನಿಯ ಹೆಸರನ್ನು ಹಾಕಿದ್ದರೆ ಆ ಕೆಲಸ ಮಾಡಿಕೊಳ್ಳಬಹುದು.
  • ಎಪಿಎಲ್ ಕಾರ್ಡ್ ಹೊಂದಿರುವವರು ಇನ್ನು ಇ-ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಆನ್ಲೈನ್ ಮೂಲಕ ಮಾಡಬಹುದು ಅಥವಾ ನ್ಯಾಯಬೆಲೆ ಅಂಗಡಿಯಲ್ಲಿಯೂ ಮಾಡಿಸಿಕೊಳ್ಳಬಹುದು.

Comments are closed.