DBT Status: ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ಯಾ ಅಂತ ಈ ರೀತಿ ಚೆಕ್ ಮಾಡಿಕೊಳ್ಳಿ: ವಿಳಂಬ ಮಾಡಿದ್ರೆ ನಿಮಗೆ ನಷ್ಟ ಗ್ಯಾರಂಟಿ!

DBT Status: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯ (Annabhagya Scheme) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಸರ್ಕಾರ ಹಣ ಕೊಡಲು ನಿರ್ಧರಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಜುಲೈ 10 ನೇ ತಾರೀಖಿನಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರ ಪ್ರತಿಮನೆಗೆ ಪ್ರತಿ ವ್ಯಕ್ತಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 120ಗಳನ್ನು ಅವರ ಖಾತೆಗೆ ವರ್ಗಾವಣೆ ಮಾಡಲು ತೀರ್ಮಾನಿಸಿದೆ. ಇದನ್ನೂ ಓದಿ: SIP Investments: ಕೇವಲ 4,000 ರೂಪಾಯಿಗಳ ಉಳಿತಾಯ, ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು; ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಎರಡು ಕೋಟಿಗಿಂತಲೂ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ನೋಡಿ!

ವರ್ಗಾವಣೆ ಆಗಿದ್ಯಾ ಸರ್ಕಾರದಿಂದ ಹಣ?

ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರದಿಂದ ಬರುವ ಐದು ಕೆಜಿ ಅಕ್ಕಿಗೆ ಜೊತೆಗೆ ಇನ್ನೂ ಐದು ಕೆಜಿ ಸೇರಿಸಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಸರ್ಕಾರ ತಿಳಿಸಿತ್ತು. ಇದೀಗ ಐದು ಕೆಜಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗದೇ ಇರುವ ಕಾರಣಕ್ಕೆ 5 ಕೆಜಿ ಅಕ್ಕಿಯ ಬದಲು ಬಿಪಿಎಲ್ (BPL Card) ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 170 ರೂಪಾಯಿಗಳನ್ನು ಕೊಡಲಾಗುತ್ತದೆ. ಇನ್ನು ಜುಲೈ ತಿಂಗಳ ಅನ್ನಭಾಗ್ಯದ ಹಣ ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ (Ration card) ಹೊಂದಿರುವವರ ಖಾತೆಗೆ ಜಮಾ ಆಗಿದೆ. ನೀವು ಈ ಕೆಳಗಿನ ವಿಧಾನಗಳ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದ್ದೀಯಾ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಿ. ಒಂದು ವೇಳೆ ನಿಮ್ಮ ಖಾತೆಗೆ ಜಮಾ ಆಗದೆ ಇದ್ದಲ್ಲಿ ನೀವು ತಕ್ಷಣವೇ ಬ್ಯಾಂಕ್ ಖಾತೆಯನ್ನು ಪರಿಶೀಲಿಸಬೇಕು ನಂತರ ನಿಮ್ಮ ಪಡಿತರ ಅಂಗಡಿಯಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು ಅಥವಾ ಆಹಾರ ಇಲಾಖೆಯನ್ನು ನೇರವಾಗಿ ಸಂಪರ್ಕಿಸಬಹುದು.

ಅನ್ನಭಾಗ್ಯ ಡಿಬಿಟಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check DBT status online)

  • ಮೊದಲನೆಯದಾಗಿ ಅನ್ನ ಭಾಗ್ಯ ದುಡ್ಡು ನಿಮ್ಮ ಖಾತೆಗೆ ಬಂದಿದೆ ಇಲ್ಲವಾ ಎಂಬುದನ್ನು ತಿಳಿದುಕೊಳ್ಳಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆಗಿರುವ https://ahara.kar.nic.in/lpg/ ಗೆ ಭೇಟಿ ನೀಡಿ.
  • ಅಲ್ಲಿ ನಿಮಗೆ ಮೂರು ಲಿಂಕ್ಗಳು ಕಾಣುತ್ತವೆ ನಿಮ್ಮ ಜಿಲ್ಲೆ ಯಾವುದು ಆ ಲಿಂಕ್ ಮೇಲೆ ನೀವು ಕ್ಲಿಕ್ ಮಾಡಿಕೊಳ್ಳಬೇಕು. (ಉದಾಹರಣೆ: only for belagavi /Mysore division click here) ಆಯ್ಕೆಯ ಕೆಳಗೆ ಎಲ್ಲ ಜಿಲ್ಲೆಯ ಹೆಸರುಗಳನ್ನು ನಮೂದಿಸಿರಲಾಗುತ್ತದೆ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಸೆಲೆಕ್ಟ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಬೇಕು.
  • ನಂತರ ನೇರ ನಗದು ವರ್ಗಾವಣೆ ಸ್ಥಿತಿ (DBT status) ಏನು ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಸೆಲೆಕ್ಟ್ ಇಯರ್ (Select year) ಸೆಲೆಕ್ಟ್ ಮಂತ್ (Select Month) ಆಯ್ಕೆಗಳು ಕಾಣಿಸುತ್ತವೆ. ಅದರ ಕೆಳಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ಹಾಕಲು ಆಯ್ಕೆ ಇರುತ್ತದೆ.
  • ಆರ್ ಸಿ ನಂಬರ್  (RC NO. )ಎಂಟರ್ ಮಾಡಿದ ಬಳಿಕ ಕೆಳಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
  • ಕೊನೆಯಲ್ಲಿ ನಿಮ್ಮ ಕುಟುಂಬದ ಮುಖ್ಯಸ್ಥರ ಹೆಸರು ಅಲ್ಲಿ ಕಾಣಿಸುತ್ತದೆ. ಆಧಾರ್ ಸಂಖ್ಯೆಯ ಕೊನೆಯ ಸಂಖ್ಯೆ, ಸದಸ್ಯರ ಸಂಖ್ಯೆ, ಅಕ್ಕಿ ಸಿಗುವ ಪ್ರಮಾಣ ನಿಮ್ಮ ಖಾತೆಗೆ ಜಮಾ ಆಗಿರುವ ಮೊತ್ತ ಎಲ್ಲವನ್ನು ನೀವು ಇಲ್ಲಿ ನೋಡಬಹುದು. ಒಂದು ವೇಳೆ ಡಾಟಾ ನಾಟ್ ಫೌಂಡ್ (Data Not found) ಎಂದು ಬಂದರೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಅರ್ಥ. ಆಗ ನೀವು ಬ್ಯಾಂಕ (bank account) ) ಖಾತೆಯನ್ನು ಪರಿಶೀಲಿಸಬೇಕು ಜೊತೆಗೆ ಆಹಾರ ಇಲಾಖೆಯನ್ನು ಸಂಪರ್ಕಿಸಬಹುದು. ಇದನ್ನೂ ಓದಿ: Kisan Credit Card: ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರ ನೀಡುವ ಸಬ್ಸಿಡಿ, ಸಾಲ ಎಲ್ಲವೂ ಸಿಗುತ್ತದೆ, ಇಲ್ಲದಿದ್ದರೆ ನಷ್ಟ ಆಗುತ್ತದೆ: ಕೂಡಲೇ ಬ್ಯಾಂಕ್ನಿಂದ ಈ ಕಾರ್ಡ್ ಪಡೆಯಿರಿ!

ಅನ್ನಭಾಗ್ಯ ಪೇಮೆಂಟ್ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ: https://ahara.kar.nic.in/lpg/

Comments are closed.