kalash sthapana right way: ಪೂಜೆ ಮಾಡುವಾಗ ಲಕ್ಷ್ಮಿ ಕಳಸ ಇಡುವಾಗ ಇಂತಹ ತಪ್ಪನ್ನು ಮಾಡಲೇಬೇಡಿ: ಹಾಗೆ ಮಾಡಿದರೆ ಲಕ್ಷ್ಮಿಯ ಕೋಪಕ್ಕೆ ನೀವು ಗುರಿಯಾಗಬೇಕಾಗುತ್ತದೆ!

kalash sthapana right way: ಕಳಸ ಎನ್ನುವುದು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತೆ. ಮನೆಯಲ್ಲಿ ಲಕ್ಷ್ಮಿ, ಮಂಗಳಗೌರಿ ಪೂಜೆ ಮಾಡುವಾಗ ಅಥವಾ ಇನ್ನು ಇತರ ಹಲವು ಪೂಜಾ ಸಂದರ್ಭದಲ್ಲಿ ಕಳಸ ಇಡುವುದು ಸಾಮಾನ್ಯ. ಆದರೆ ಹೇಗೆ ಕಳಸ ಇಡುವಾಗ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಈ ರೀತಿ ಮಾಡಿದ್ರೆ ಲಕ್ಷ್ಮಿ ಒಲಿಯುವುದಿಲ್ಲ ಜೊತೆಗೆ ಮುನಿಸಿಕೊಳ್ಳುತ್ತಾಳೆ. ಕಳಸವನ್ನು ಹೇಗೆ ಇಡಬೇಕು ಯಾವೆಲ್ಲ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಬಹುದು.

  • ಕಳಸವನ್ನು ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಬಾರದು. ಅದರ ಬದಲು ಬೆಳ್ಳಿ, ಹಿತ್ತಾಳೆ, ಅಥವಾ ತಾಮ್ರದ ಚೆಂಬುಗಳನ್ನು ಬಳಸಿದರೆ ಅದು ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ.
  • ಮನೆಯಲ್ಲಿ ಪೂರ್ವಜರು ಯಾವ ರೀತಿ ಕಳಸ ಸ್ಥಾಪನೆ ಮಾಡಿ ಪೂಜೆ ಮಾಡುತ್ತಿದ್ದರು ಅದೇ ರೀತಿಯಲ್ಲಿ ನೀವು ಕೂಡ ಅದೇ ನಿಯಮವನ್ನು ಪಾಲಿಸಬೇಕು. ಕೆಲವರು ಲಕ್ಷ್ಮಿ ಕಳಿಸಿರುತ್ತಾರೆ ಇನ್ನು ಕೆಲವರು ಮನೆದೇವರ ಕೆಲಸ ಇಡುತ್ತಾರೆ, ಕೆಲವರು ಕಾಯಿ ಕೆಲವರು ಕಾಯಿ ಕಲಸ ಅಥವಾ ಎಲೆ ಕಳಸ ಇಡುತ್ತಾರೆ ಇದು ನಿಮ್ಮ ಮನೆಗಳಲ್ಲಿ ನಡೆದುಕೊಂಡು ಬಂದ ಪದ್ಧತಿಯನ್ನು ಆಧರಿಸಿ ಇರುತ್ತದೆ.
  • ಲಕ್ಷ್ಮಿ ಕಳಸ ಸ್ಥಾಪನೆ ಮಾಡಿದರೆ ಕಳಸಕ್ಕೆ ಮಾಂಗಲ್ಯ ಸರವನ್ನು ಹಾಕಬೇಕು ಅಥವಾ ಅರಿಶಿನ ಕುಂಕುಮನಾದರೂ ಕಟ್ಟಲೇಬೇಕು ಈ ನಿಯಮವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
  • ಕಳಸವನ್ನು ನೆಲದ ಮೇಲೆ ಸ್ಥಾಪನೆ ಮಾಡಬಾರದು ಒಂದು ತಟ್ಟೆಯಲ್ಲಿ ಮೂರು ಹಿಡಿಯುವ ಐದು ಹಿಡಿಯ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಉಂಗುರದ ಬೆರಳಿನಿಂದ ಅಷ್ಟ ದಳದ ಕಮಲದ ಚಿತ್ರವನ್ನು ಬಿಡಿಸಿ ಅದರ ಮೇಲೆ ಇಡಬೇಕು.
  • ಇನ್ನು ಕಳಸ ಸ್ಥಾಪನೆ ಮಾಡಬೇಕಾದರೆ ಶುದ್ಧವಾಗಿರುವ ಚೊಂಬನ್ನು ತೆಗೆದುಕೊಳ್ಳಬೇಕು ಅದರೊಳಗೆ ಶುದ್ಧವಾಗಿರುವ ನೀರನ್ನೇ ಹಾಕಬೇಕು ಚೊಂಬಿಕೆಯ ಅರಿಶಿನ ಕುಂಕುಮ ಗಂಧ ಹಚ್ಚಿ ನಂತರ ಅರಿಶಿನ ಕುಂಕುಮ ಜೊತೆಗೆ ಅಕ್ಕಿ ಬೆರೆಸಿದ ಮಂತ್ರಾಕ್ಷತೆ ಹಾಕಿ ಒಂದು ಹೂವು ಹಾಗೂ ಒಂದು ನಾಣ್ಯವನ್ನು ಇಡಬೇಕು.
  • ಕಳಸಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಗುವಂತೆ ಇರಬೇಕು ಆದರೆ ಚೊಂಬಿನಿಂದ ಹೊರಗಡೆ ಚೆಲ್ಲಬಾರದು.
  • ಸರಿಯಾದ ಜುಟ್ಟು ಇರುವ ತೆಂಗಿನಕಾಯಿ ಆಯ್ಕೆ ಮಾಡಿ ಕಳಸದಲ್ಲಿ ತೆಂಗಿನಕಾಯಿಯನ್ನು ಅದರ ಕಣ್ಣುಗಳು ಕಾಣಿಸಬಾರದು ಆ ರೀತಿಯಲ್ಲಿ ಇಡುವುದು ಬಹಳ ಮುಖ್ಯ.
  • ಕಳಸಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆಯನ್ನು ಇಡಬಹುದು ಆದರೆ ಎಲೆ ಸಂಪೂರ್ಣವಾಗಿರಬೇಕು ಯಾವುದೇ ಕಾರಣಕ್ಕೂ ಹರಿದಿರಬಾರದು ಮತ್ತು ಹಾಳಾಗಿರಬಾರದು.
  • ಮಂಗಳವಾರ ಶುಕ್ರವಾರ ಅಮಾವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಕಳಸ ಇಟ್ಟ ಜಾಗದಿಂದ ತೆಗೆಯಬಾರದು.
  • ಕಳಸವನ್ನು ಇಟ್ಟ ನಂತರ ಅದನ್ನು ಬೇರೆ ಜಾಗದಲ್ಲಿ ಇಡುವುದು ಅಥವಾ ಕದಲಿಸುವುದು ಮಾಡಬಾರದು.
  • ಇನ್ನು ಪೂಜೆ ಮುಗಿದ ನಂತರ ಕಳಸ ಕದಲಿಸಿದ ಬಳಿಕ ಆ ನೀರನ್ನು ತುಳಿಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಬೇಕು ಈ ರೀತಿ ನೀವು ಸರಿಯಾದ ಕ್ರಮದಲ್ಲಿ ಕಳಸ ಸ್ಥಾಪನೆ ಮಾಡಿ ದೇವರಿಗೆ ಪೂಜೆ ಮಾಡಿದರೆ ಆ ಪೂಜೆ ಸಂಪನ್ನವಾಗುತ್ತದೆ ಲಕ್ಷ್ಮಿಯ ಅನುಗ್ರಹವು ನಿಮ್ಮ ಮೇಲಿರುತ್ತದೆ.

Comments are closed.