Gold rate: ಬಂಗಾರದ ಬೆಲೆ ಎಷ್ಟೇ ಜಾಸ್ತಿ ಆಗ್ಲಿ, ನೀವು ಇಲ್ಲಿ ಚಿನ್ನ ಖರಿದಿಸಿದರೆ ಮಾತ್ರ ಲಾಭವೋ ಲಾಭ; 10ಗ್ರಾಂ ಚಿನ್ನಕ್ಕೆ ಕೇವಲ 27-30,000 ರೂ. ಮಾತ್ರ: ಎಲ್ಲಿ ಗೊತ್ತೆ?

Gold rate: ಚಿನ್ನವೆಂದರೆ ಭಾರತದಲ್ಲಿ ಎಲ್ಲರಿಗೂ ಪ್ರಿಯ. ಕೆಲವರಿಗೆ ಆಭರಣಗಳಾಗಿ ಬಹಳ ಇಷ್ಟವಾದರೆ ಇನ್ನೂ ಕೆಲವರು ಇದನ್ನು ಒಂದು ಇನ್ವೆಸ್ಟ್ ಮೆಂಟ್ (Investment) ರೀತಿಯಲ್ಲಿ ಇಷ್ಟಪಡುತ್ತಾರೆ. ಅಕ್ಷಯ ತ್ರತೀಯದಂತಹ ಹಬ್ಬಗಳಂದು ಚಿನ್ನ ಖರೀದಿಸಿದರೆ ಶುಭ ಎಂದು ಪರಿಗಣಿಸಲಾಗುತ್ತದೆ. ಪ್ರತೀ ತಿಂಗಳು ಆರ್. ಡಿ. ಯ ತರಹ ಇನ್ವೆಸ್ಟ್ ಮಾಡುವ ಗೋಲ್ಡ್ ಸ್ಕೀಮ್ ಗಳಲ್ಲಿ ಎಲ್ಲಾ ಮನಗಳೂ ಒಂದಲ್ಲ ಒಂದು ಸಲ ಪಾಲ್ಗೊಂಡಿರುತ್ತಾರೆ. ಹೀಗೆ ಚಿನ್ನ (Gold) ಭಾರತದಲ್ಲಂತೂ ಬಹಳ ಮಹತ್ವದ ಸ್ಥಾನ ಪಡೆದಿದೆ. ಇದನ್ನೂ ಓದಿ: Kisan Credit Card: ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ ಸರ್ಕಾರ ನೀಡುವ ಸಬ್ಸಿಡಿ, ಸಾಲ ಎಲ್ಲವೂ ಸಿಗುತ್ತದೆ, ಇಲ್ಲದಿದ್ದರೆ ನಷ್ಟ ಆಗುತ್ತದೆ: ಕೂಡಲೇ ಬ್ಯಾಂಕ್ನಿಂದ ಈ ಕಾರ್ಡ್ ಪಡೆಯಿರಿ!

ಭಾರತಕ್ಕಿಂತ ಕಡಿಮೆ ರೇಟಿನಲ್ಲಿ ಚಿನ್ನ ಸಿಗುತ್ತದೆ ಎಂದು ಮೊದಲು ದುಬೈಗೆ ಹೋಗುವ ಜನರಿದ್ದರು. ಸ್ವಲ್ಪ ಜಾಸ್ತಿ ಪ್ರಮಾಣದ ಚಿನ್ನ ಖರೀದಿಸಬೇಕಾದರೆ ದುಬೈಗೆ ಖರೀದಿಸಿ ಹಾಗೆಯೇ ದುಬೈಯನ್ನು ಒಂದು ಸುತ್ತು ಹಾಕಿಕೊಂಡು ಬರುವ ಜನರಿದ್ದರು. ಆದರೆ ಇನ್ನು ಮುಂದೆ ದುಬೈ ನೋಡಿ ಆದವರು ತಮ್ಮ ಡೆಸ್ಟಿನೇಷನ್ ಅನ್ನು ಬದಲಾಯಿಸಿಕೊಳ್ಳಬಹುದು.

ಭೂತಾನ್ (Bhutan) ದಲ್ಲಿ ಚಿನ್ನ ಅಗ್ಗವಾಗಿ ಸಿಗುತ್ತದೆ ಮತ್ತು ಇಪ್ಪತ್ತು ಗ್ರಾಂ ನಷ್ಟು ಚಿನ್ನವನ್ನು ಭಾರತಕ್ಕೆ ತರಬಹುದಾಗಿದೆ. ಫುಯೆನ್ ಶೋಲಿಂಗ್ ಮತ್ತು ಥಿಂಪು ಗೆ ಭೇಟಿನೀಡುವ ಭಾರತೀಯರಿಗೆ 20 ಗ್ರಾಂ ಚಿನ್ನವನ್ನು ಡ್ಯೂಟಿ ಫ್ರೀ ಯಾಗಿ ಖರೀದಿಸುವ ಅವಕಾಶವನ್ನು ಭೂತಾನ್ ಸರ್ಕಾರ ನೀಡುತ್ತಿದೆ. ಭೂತಾನ್ ಪ್ರವಾಸೋದ್ಯಮ ಮತ್ತು ಭೂತಾನ್ ಡ್ಯೂಟಿ ಫ್ರೀ (BDF) ಸಹಭಾಗಿತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: Temple: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೆಚ್ಚುತ್ತಿರುವ ಭಕ್ತರು: ಜನರಿಗೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡಲು ಮಾಸ್ಟರ್ ಪ್ಲಾನ್ ಮಾಡಿದ ಟಿಟಿಡಿ ಸಂಸ್ಥೆ! ಏನು ಗೊತ್ತಾ?

ಇದರಿಂದ ಪ್ರವಾಸೋದ್ಯಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಭೂತಾನ್ ಸರ್ಕಾರವಿದೆ. ಇದರ ಜೊತೆಗೆ ವಿದೇಶಿ ವಿನಿಮಯವೂ ಹೆಚ್ಚಾಗಲಿದೆ. ಕೆಲವು ಬೇಸಿಕ್ ಎನ್ನಬಹುದಾದ ವಿವಿವರಗಳನ್ನು ನೀಡಿ ಈ ತರಹ ಡ್ಯೂಟಿ ಫ್ರೀ ಚಿನ್ನವನ್ನು ಖರೀದಿಸಬಹುದಾಗಿದೆ. ಹಾಗಾದರೆ ಆ ವಿವರಗಳು ಯಾವುದು ಎನ್ನುವುದನ್ನು ತಿಳಿದುಕೊಳ್ಳಬೇಕೆ. ಇಲ್ಲಿದೆ ಆ ವಿವರಗಳು. ಮೊದಲನೆಯದಾಗಿ ಪ್ರವಾಸಿಗರು ಎಸ್.ಡಿ.ಎಫ್ (ಸಸ್ಟೈನೇಬಲ್ ಡೆವಲಪ್ ಮೆಂಟ್ ಫೀ) ಅನ್ನು ಕೊಟ್ಟ ರಸೀದಿ ತೋರಿಸಬೇಕಾಗುತ್ತದೆ. ಎಸ್.ಡಿ.ಎಫ್ ಎಂದರೆ ಭೂತಾನ್ ಸರ್ಕಾರ ತನ್ನ ದೇಶದ ಜನರ ಅಭಿವೃದ್ಧಿಗಾಗಿ ಪ್ರವಾಸಿಗರಿಂದ ತೆಗೆದುಕೊಳ್ಳುವ ಫೀ ಆಗಿದೆ. ಎರಡನೆಯದಾಗಿ ಪ್ರವಾಸೋದ್ಯಮ ಇಲಾಖೆ ಮಾನ್ಯ ಮಾಡಿದ ಹೋಟೇಲ್ ಒಂದರಲ್ಲಿ ಒಂದು ರಾತ್ರಿ ನಿಲ್ಲಬೇಕಾಗಿರುತ್ತದೆ. ಮೂರನೆಯದಾಗಿ ಚಿನ್ನವನ್ನು ಯು.ಎಸ್. ಡಾಲರ್ ಕೊಟ್ಟು ಖರೀದಿಸಬೇಕಾಗಿದೆ. ಇವಿಷ್ಟು ವಿವರಗಳನ್ನು ನೀಡಿದ ಬಳಿಕ 22 ಕ್ಯಾರೆಟ್ ನ 10 ಗ್ರಾಂ ಚಿನ್ನವನ್ನು ಭೂತಾನ್ ನಲ್ಲಿ 27 ರಿಂದ 30 ಸಾವಿರ ರೂಪಾಯಿಗಳಲ್ಲಿ ಖರೀದಿಸಬಹುದು.

ಚಿನ್ನ ಭಾರತದಲ್ಲಿ ಆಭರಣಗಳಾಗಿ ಎಷ್ಟು ಇಷ್ಟವೋ ವಿದೇಶೀ ವಿನಿಮಯದಲ್ಲೂ ಅಷ್ಟೇ ಮಹತ್ವದ ಸ್ಥಾನವನ್ನು ಪಡೆದಿದೆ. 2022 ರಲ್ಲಿ ಭಾರತ 706 ಟನ್ ಗಳಷ್ಟು ಚಿನ್ನವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿತ್ತು. ಇದಕ್ಕೆ ತಗುಲಿದ ವೆಚ್ಚ ಸುಮಾರು 36.6 ಶತಕೋಟಿ ಡಾಲರ್ ಗಳು ಈಗ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು 61,000 ರೂ ಗಳಾಗಿದೆ.

Comments are closed.