RBI: ಅಗಸ್ಟ್ 10 ರಿಂದ ಜಾರಿಗೆ ಬರಲಿದೆ ಆರ್ ಬಿ ಐ ಹೊಸ ನಿಯಮ: ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡವರಿಗೆ ಹೊಡೆಯಲಿದೆ ಜಾಕ್ ಪಾಟ್: ಏನು ಗೊತ್ತೇ?

RBI: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿ ಕಾಂತ್ ದಾಸ್ (Shakti kanth Das) ನೇತೃತ್ವದ ಆರು ಸದಸ್ಯರ ಸಮಿತಿ ಆಗಸ್ಟ್ ಎಂಟರಿಂದ 10ರವರೆಗೆ ಮಹತ್ವದ ಸಭೆ ನಡೆಸಲಿದೆ. ಈ ಸಭೆಯಲ್ಲಿ ಸಾಕಷ್ಟು ಹಣಕಾಸು ವ್ಯವಹಾರದ ಬಗ್ಗೆ ವಿಶೇಷವಾದ ನಿರ್ಣಯ ಕೈಗೊಳ್ಳಲಿದ್ದು ಅಗಸ್ಟ್ ಹತ್ತರಂದು ಆರ್ ಬಿ ಐ ಈ ನಿರ್ಧಾರಗಳನ್ನು ಪ್ರಕಟಿಸಲಿದೆ. ಈ ಬಾರಿಯ ಸಮಾಲೋಚನೆಯಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತಹ ಹಲವು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಅದರಲ್ಲೂ ಬ್ಯಾಂಕ್ (bank) ಗಳಲ್ಲಿ ಸಾಲ ಪಡೆದುಕೊಂಡವರಿಗೆ ಸಿಹಿ ಸುದ್ದಿ ಸಿಗಲಿದೆ. ಇದನ್ನೂ ಓದಿ: Best 5 Cars: ದೇಶದ ಆಟೋ ಮಾರುಕಟ್ಟೆಯನ್ನು ಆಳಲು ಬಂದಿರುವ ಬೆಸ್ಟ್ 5 ಕಾರುಗಳು ಇವು; ನೋಡಿದ್ರೆ ಫಿದಾ ಆಗ್ತೀರಾ!

ರೆಪೋ ದರ ಸ್ಥಿರವಾಗಿರಬಹುದು:

ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ತನ್ನ ರೆಪೋ ದರ (Repo Rate) ದಲ್ಲಿ ಯಾವುದೇ ವ್ಯತ್ಯಾಸ ಮಾಡಲಿಲ್ಲ. ಏಪ್ರಿಲ್ ಹಾಗೂ ಜೂನ್ ತಿಂಗಳಿನಲ್ಲಿ ರೆಪೋ ದರ 6.5 ಇದ್ದಿದ್ದು ಅಷ್ಟೇ ಉಳಿದಿದೆ. ಕಳೆದ ಎರಡು ಸಭೆಗಳಲ್ಲಿಯೂ ಕೂಡ ರೆಪೋ ದರ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ ಹಾಗಾಗಿ ಈ ಬಾರಿಯೂ ಕೂಡ ಶೇಕಡ 6.5 ಅಷ್ಟೇ ಇರಬಹುದು ಎಂದು ಊಹಿಸಲಾಗಿದೆ.

ಹಣದುಬ್ಬರ ದರ ಕಡಿಮೆ ಇದೆ:

ರೆಪೋ ದರದ ಬಗ್ಗೆ ಮಾತನಾಡಿರುವ ಬ್ಯಾಂಕ್ ಆಫ್ ಬರೋಡದ ಮುಖ್ಯ ಅರ್ಥಶಾಸ್ತ್ರಜ್ಞ ಮದನ್ ಸಬ್ನವಿಸ್, ಹಣದುಬ್ಬರದ ದರ ಶೇಕಡ 5ಕ್ಕಿಂತ ಕಡಿಮೆ ಇರುವುದರಿಂದ ಆರ್ ಬಿ ಐ ತನ್ನ ರೆಪೋ ದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳುತ್ತದೆ ಎಂದು ಹೇಳಿದ್ದಾರೆ. 2000 ರೂಪಾಯಿಗಳ ನೋಟುಗಳನ್ನು ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಲಿಕ್ವಿಡಿಟಿ ಸ್ಥಿತಿ ಅನುಕೂಲಕರವಾಗಿದೆ ಹಾಗಾಗಿ ಆರ್‌ಬಿಐ ಪ್ರಸ್ತುತ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈಗಾಗಲೇ ಎಲ್ಲಾ ಕಡೆ ಬೆಲೆ ಏರಿಕೆಯ ಬಿಸಿ ತಟ್ಟಿದೆ ಹಾಗಾಗಿ 2023 ಜುಲೈ ನಿಂದ ಆಗಸ್ಟ್ ತಿಂಗಳಿನಲ್ಲಿ ಸಿಪಿಐ ಅಥವಾ ಚಿಲ್ಲರೆ ಹಣದುಬ್ಬರಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆ. ಇದನ್ಣೂ ಓದಿ: SIP Investments: ಕೇವಲ 4,000 ರೂಪಾಯಿಗಳ ಉಳಿತಾಯ, ನಿಮ್ಮನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಬಹುದು; ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದ್ರೆ ಎರಡು ಕೋಟಿಗಿಂತಲೂ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ನೋಡಿ!

ರೆಪೋ ದರದಲ್ಲಿ ಸ್ಥಿರತೆ ಇದ್ದರೆ ಏನಾಗುತ್ತದೆ?

ಆರ್ ಬಿ ಐ ತನ್ನ ರೆಪೋ ದರವನ್ನು ಏರಿಸಿದರೆ ಬ್ಯಾಂಕ್ ಗಳು ಆರ್ ಬಿ ಐ ನಿಂದ ಪಡೆದುಕೊಂಡ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಇದು ನೇರವಾಗಿ ಗ್ರಾಹಕರ ಸಾಲದ ಬಡ್ಡಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ರೆಪೋ ದರ ಯಥಾ ಸ್ಥಿತಿಯಲ್ಲಿ ಇದ್ದರೆ ಬ್ಯಾಂಕ್ ನ ಬಡ್ಡಿದರ ಹೆಚ್ಚಿಗೆ ಆಗುವುದಿಲ್ಲ ಇದರಿಂದ ಸಾಲದ ಮೇಲಿನ ಬಡ್ಡಿ ದರ ಕೂಡ ಜಾಸ್ತಿಯಾಗುವುದಿಲ್ಲ. ಹೆಚ್ಚಿಸಿದಾಗ ಗೃಹ ಸಾಲದ ಮೇಲಿನ ಬಡ್ಡಿದರ ಜಾಸ್ತಿ ಮಾಡಲಾಗಿತ್ತು ಆದರೆ ಈಗ ಗೃಹ ಸಾಲ ಹಾಗೂ ವೈಯಕ್ತಿಕ ಸಾಲದ ಮೇಲಿನ ಬಡ್ಡಿಯಲ್ಲಿಯೂ ಬ್ಯಾಂಕ್ ಗಳು ಕಡಿಮೆ ಮಾಡುವ ಸಾಧ್ಯತೆ ಇದೆ.

Comments are closed.