Kannada Astrology: ಹೆಂಗಸರು ಬೆಳಗ್ಗೆ ಎದ್ದು ಈ ಮೂರು ಕೆಲಸ ಮಾಡಿದರೆ ಲಕ್ಷ್ಮಿ ದೇವಿ ತಲೆಮಾರಿಗೆ ಆಗುವಷ್ಟು ಸಂಪತ್ತು ಕರುಣಿಸುತ್ತಾಳೆ; ಯಾವ ಕೆಲಸ ಮಾಡ್ಬೇಕು ಗೊತ್ತೇ?

Kannada Astrology: ಸಂಪತ್ತಿನ ಅತಿ ದೇವತೆ ಆಗಿರುವ ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕಾದರೆ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಮನೆಯ ಗೃಹಿಣಿಯರು ಈ ಮುಖ್ಯವಾಗಿರುವ ಮೂರು ಕೆಲಸಗಳನ್ನು ಮಾಡಲೇಬೇಕು. ಹೀಗೆ ಮಾಡಿ ಲಕ್ಷ್ಮೀದೇವಿಯನ್ನು ಒಲಿಸಿಕೊಂಡರೆ ಶತಶತಮಾನದ ಕಾಲಕ್ಕೂ ಲಕ್ಷ್ಮಿ ದೇವಿ ನಿಮ್ಮ ಜೊತೆಗೆ ನೆಲೆಸಿರುತ್ತಾಳೆ ಆರ್ಥಿಕ ಸಮಸ್ಯೆ ಎನ್ನುವುದು ಎಂದೆಂದಿಗೂ ಕಾಡುವುದೇ ಇಲ್ಲ. ಹಾಗಾದ್ರೆ ಲಕ್ಷ್ಮಿ ದೇವಿ ಕೃಪಾ ಕಟಾಕ್ಷ ಬೇಕು ಎಂದರೆ ಹೆಣ್ಣು ಮಕ್ಕಳು ಮಾಡಬೇಕಾದ ಪ್ರಮುಖ ಕೆಲಸಗಳು ಯಾವವು ನೋಡೋಣ.

ಮೊದಲನೆಯದಾಗಿ ಮನೆಯ ಗೃಹಿಣಿ ಬೆಳಿಗ್ಗೆ ಎದ್ದು ಮುಖ ತೊಳೆದು ಬೆಳಗಿನ ಕೆಲಸ ಮುಗಿಸಿದ ನಂತರ ಮೊದಲು ಮನೆಯ ಮುಂದೆ ರಂಗೋಲಿ ಹಾಕಬೇಕು ಅಂದರೆ ನೀವು ಬೆಳ್ಳಂಬೆಳಗ್ಗೆ ಎದ್ದು ಒಂದು ಜೀವಿಗೆ ಆಹಾರವನ್ನು ಒದಗಿಸಿದ್ದೀರಿ ಎಂದಾಗುತ್ತದೆ. ಬೇರೆಯವರಿಗೆ ಸಹಾಯ ಮಾಡುವ ನಿಮ್ಮ ಮನೋಭಾವವನ್ನು ಬಹಳವಾಗಿ ಮೆಚ್ಚಿಕೊಳ್ಳುತ್ತಾಳೆ ಹಾಗೂ ನಿಮಗೆ ಸಕಲ ಐಶ್ವರ್ಯವನ್ನು ದಯಪಾಲಿಸುತ್ತಾಳೆ.

ಇನ್ನು ಎರಡನೆಯದಾಗಿ ಹೆಂಗಸರು ಬೆಳಿಗ್ಗೆ ಎದ್ದು ಕಾಫಿ ತಿಂಡಿ ಮಾಡಲು ಅಡುಗೆ ಮನೆ ಪ್ರವೇಶಿಸುವುದು ಸಹಜ ಹೀಗೆ ಅಡುಗೆ ಮನೆಗೆ ಹೋದರೆ ಮೊದಲು ನಿಮ್ಮ ಗ್ಯಾಸ್ ಸ್ಟವ್ ಅನ್ನು ಪೂಜೆ ಮಾಡಿ ನಂತರ ಅಡುಗೆ ಆರಂಭಿಸಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವತ್ತೂ ಅನ್ನಕ್ಕೆ ಕೊರತೆಯಾಗುವುದಿಲ್ಲ ತಾಯಿ ಅನ್ನಪೂರ್ಣೇಶ್ವರಿಯ ದಯ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ಜೊತೆಗೆ ಬೆಂಕಿಯಿಂದ ಆಗುವ ಅನಾಹುತವೂ ಕೂಡ ನಿಮಗೆ ಆಗುವುದಿಲ್ಲ.

ಇನ್ನು ಮೂರನೆಯದಾಗಿ ಮನೆ ಕೆಲಸದ ನಂತರ ಒಂದು ತಂಬಿಗೆ ನೀರನ್ನು ತುಳಸಿ ಗಿಡಕ್ಕೆ ಅರ್ಪಿಸಿ ಪ್ರತಿದಿನ ದೊಡ್ಡ ದೊಡ್ಡ ಪೂಜೆ ಪುನಸ್ಕಾರಗಳನ್ನು ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸಿ ದೇವರಿಗೆ ಭಕ್ತಿ ಭಾವದಿಂದ ಒಂದು ತುಳಸಿ ಅರ್ಪಿಸಿದರು ಸಾಕು ಇನ್ನು ಶುಕ್ರವಾರದ ದಿನ ಸಾಧ್ಯವಾದರೆ ಲಕ್ಷ್ಮಿ ದೇವಿಗೆ ತುಪ್ಪದ ದೀಪ ಹಚ್ಚಿ ಅಷ್ಟೋತ್ತರ ನಾಮ ಹಾಗೂ ಲಕ್ಷ್ಮಿ ಕುಬೇರ ಮಂತ್ರವನ್ನು 108 ಬಾರಿ ಪಠಿಸಿ. ಈ ರೀತಿ ಮನೆಯ ಗ್ರಹಿಣಿಯರು ದಿನವೂ ಮಾಡುವುದರಿಂದ ಮನೆಯಲ್ಲಿ ಧನ ಕನಕದಿಗಳು ಯಾವಾಗಲೂ ತುಂಬಿ ತುಳುಕುತ್ತವೆ. ಲಕ್ಷ್ಮೀದೇವಿಯ ಕೃಪೆ ಯಾವಾಗಲೂ ನಿಮ್ಮ ಮೇಲಿರುತ್ತದೆ.

Comments are closed.