Retirement Planning: ನಿವೃತ್ತಿ ನಂತರವೂ ತಿಂಗಳಿಗೆ ಒಂದು ಲಕ್ಷ ಹಣ ಕೊದಬಲ್ಲ ಪಿಂಚಣಿ ಯೋಜನೆ; ಇದಕ್ಕಿಂತ ಬೆಸ್ಟ್ ಪಿಂಚಣಿ ಯೋಜನೆ ಇನ್ನೊಂದಿದ್ಯಾ?

Retirement Planning:  ರಿಟೈರ್ ಮೆಂಟ್ ಜೀವನ ಆರಾಮವಾಗಿರಬೇಕು ಎನ್ನುವುದು ಎಲ್ಲರ ಆಸೆ. ಮನುಷ್ಯನಿಗೆ ವರ್ಷ ಆದಷ್ಟೂ ಶಕ್ತಿ ಕುಗ್ಗುವ ಬದಲು ಹಿಗ್ಗುತ್ತಾ ಹೋಗುತ್ತದೆ. ಇದರಿಂದ ವಯೋಸಹಜ ಆರೋಗ್ಯದ ಸಮಸ್ಯೆಗಳು ನಮ್ಮನ್ನು ಬಾಧಿಸುವುದು ಸಾಮಾನ್ಯ. ಆದರೆ ಇದರ ಜೊತೆಗೆ ಹಣಕಾಸಿನ ತೊಂದರೆಯೂ (Financial Problems) ನಮ್ಮನ್ನು ಬಾಧಿಸಿದರೆ ನಮ್ಮ ಇಳಿ ವಯಸ್ಸಿನ ಜೀವನ ಇನ್ನೂ ಕಠಿಣ ವಾಗುತ್ತದೆ. ಇದನ್ನು ಓದಿ: Cricket News: ಸೂರ್ಯ ಕುಮಾರ್ ಗೆ ಮಣೆ ಹಾಕಿ ಈ ಆಟಗಾರನ ಕ್ರಿಕೆಟ್ ವೃತ್ತಿ ಜೀವನಕ್ಕೆ ಕೊಳ್ಳಿ ಇಟ್ರಾ ಮಿಸ್ಟರ್ ರೋಹಿತ್ ಶರ್ಮಾ!

ಏಜಿಂಗ್ ಅಥವಾ ವರ್ಷಗಳು ಹೆಚ್ಚಾಗುವುದನ್ನು ನಾವು ಅಥವಾ ಇನ್ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಆರ್ಥಿಕ ಸುರಕ್ಷತೆ (Financial help) ನಮ್ಮ ಕೈಯಲ್ಲಿದೆ ಅದರ ಬಗ್ಗೆ ನಾವು ಗಮನ ಕೊಡಬೇಕಾಗಿರುವುದು ಅಗತ್ಯ. ಸಾಮಾನ್ಯವಾಗಿ 25 ವಯಸ್ಸಿನ ಹೊತ್ತಿಗೆ ಒಂದು ಮಟ್ಟದ ಒಳ್ಳೆಯ ಕೆಲಸ ಸಿಕ್ಕಿರುವ ವ್ಯಕ್ತಿ ನಂತರ ಮದುವೆ, ಸುತ್ತಾಟ, ಮಗು ಮತ್ತು ಮಗುವಿನ ಆರೈಕೆ ಎಂದೇ ಸಮಯ ಕಳೆಯುತ್ತಾ 50 ರ ಹೊತ್ತಿಗೆ ರಿಟೈರ್ ಮೆಂಟ್ (Retirement) ಗೆ ಯೋಚಿಸಿದರೆ ಬಹಳ ತಡವಾಗಿಬಿಡುತ್ತದೆ. ಆ ನಂತರ ದೊಡ್ಡ ಮೊತ್ತದ ಹಣವನ್ನು ಸೇರಿಸಬೇಕಾಗುತ್ತದೆ.

ಹಣದುಬ್ಬರದ ದರವನ್ನು ಸೇರಿಸಿಕೊಂಡು ಲೆಕ್ಕ ಹಾಕಿದರೆ ನಮ್ಮ ಐವತ್ತನೆಯ ವರ್ಷದಲ್ಲಿ ಇರುವ ಬೆಲೆಗಳು ನಮ್ಮ ಅರವತ್ತನೆಯ ವರ್ಷದಲ್ಲಿ ಇರುವುದಿಲ್ಲ. ಹೀಗಾಗಿ ಹಣದುಬ್ಬರ ಅಥವಾ ಬೆಲೆಗಳು ಏರಿಕೆಯಾಗುತ್ತವೆ ಎನ್ನುವುದನ್ನು ಗಮನದಲ್ಲಿಟ್ಟು ಸೇವಿಂಗ್ಸ್ ಆರಂಭಿಸಬೇಕಾಗುತ್ತದೆ. ರಿಟೈರ್ ಮೆಂಟ್ ಆದ ಮೇಲೆ ಸ್ವಾವಲಂಬಿ ಆಗಿರಬೇಕು ಇದಕ್ಕಾಗಿ ಸೇವಿಂಗ್ಸ್ ಬೇಕು ಎಂದು ಕೆಲಸ ಸಿಕ್ಕ ದಿನದಿಂದ ಯಾರೂ ಸೇವಿಂಗ್ಸ್ (Savings) ಮಾಡುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ತೀರಾ ತಡಮಾಡಿಯೂ ಬೇಕಾದಷ್ಟು ಸೇವಿಂಗ್ಸ್ ಮಾಡಲಾಗುವುದಿಲ್ಲ. ಇದನ್ನೂ ಓದಿ: Ration Card correction: ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನ ಹೆಸರನ್ನು ಬದಲಾಯಿಸಿ ಯಜಮಾನಿಯ ಹೆಸರನ್ನು ಹಾಕುವುದು ಈಗ ಅತ್ಯಂತ ಸುಲಭ ಈ ಕೂಡಲೇ ಮಾಡಿಸಿಕೊಳ್ಳಿ, ಇಲ್ಲವಾದರೆ ಸರ್ಕಾರದ ಯೋಜನೆಯ ಪ್ರಯೋಜನ ಸಿಗುವುದಿಲ್ಲ!

ಈಗಿನ ಜೀವನ ಮತ್ತು ಮುಂದಿನ ರಿಟೈರ್ ಮೆಂಟ್ ಜೀವನ ಎರಡನ್ನೂ ಸರಿಹೊಂದಿಸಲು ಕನಿಷ್ಟ 40 ನೆಯ ವರ್ಷಕ್ಕಾದರೂ ಸೇವಿಂಗ್ಸ್ ಆರಂಭಿಸಬೇಕು ಎನ್ನುವುದು ಆರ್ಥಿಕ ತಜ್ಞರ ಸಹಮತ. ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು 1 ಲಕ್ಷ ಪಿಂಚಣಿ ಬರಬೇಕು ಎಂದಾದರೆ ಏನು ಮಾಡಬೇಕು ಈಗ ನೋಡೋಣ.

ಈಗ ನಮ್ಮ ವಯಸ್ಸು 40 ಇದೆ ಹಾಗೂ ಇಂದು ನಮ್ಮ ತಿಂಗಳ ಖರ್ಚು 50,000 ಇದೆ ಎಂದು ತಿಳಿದಿಕೊಳ್ಳೋಣ. ಇಂದಿನ 50,000 ಇಪ್ಪತ್ತು ವರ್ಷಗಳ ನಂತರ 6% ವಾರ್ಷಿಕ ಹಣದುಬ್ಬರದ ಪ್ರಕಾರ ಸುಮಾರು 1.5 ಆಗಲಿದೆ. ಅಂದರೆ ಇವತ್ತು ನಮ್ಮ ತಿಂಗಳ ಖರ್ಚಿಗೆ 50,000 ಬೇಕಾಗಿರುವುದು ಇಪ್ಪತ್ತು ವರ್ಷಗಳ ನಂತರ 1.5 ಬೇಕಾಗುತ್ತದೆ. ಇದೇ ತರಹ ನಂತರದ ಇಪ್ಪತ್ತು ವರ್ಷ ಇದೇ ಜೀವನಶೈಲಿ ನಡೆಸಬೇಕಾದರೆ ನಮಗೆ ಒಟ್ಟಾರೆ 4 ಕೋಟಿಯಷ್ಟು ಹಣ ಬೇಕಾಗುತ್ತದೆ. ಇದನ್ನು ಹೇಗೆ ಸಾಧಿಸಬಹುದು ನೋಡೋಣ.

ಈ ನಾಲ್ಕು ಕೋಟಿ ಹಣ ಪಡೆಯಲು ಆರಂಭದಲ್ಲಿ ಮಾಸಿಕ 38,000 ಹೂಡಿಕೆ ಬೇಕಾಗುತ್ತದೆ. ಈ ಹಣದಲಿ 40% ಡೆಬ್ಟ್ ಫಂಡ್ಸ್ ಗಳಲ್ಲಿ (ಸಾಲನಿಧಿ) ಮತ್ತು 60% ಹಣವನ್ನು ಈಕ್ವಿಟಿಯಲ್ಲಿ (ಶೇರು ಮಾರುಕಟ್ಟೆ) ಯಲ್ಲಿ ಹೂಡಿಕೆ ಮಾಡಬೇಕು. ಪ್ರತೀ ವರ್ಷ ಈ ಮೊತ್ತವನ್ನು 5% ಹೆಚ್ಚಿಸಬೇಕು. ಈ ತರಹ ಹೂಡಿಕೆ ಶಿಸ್ತನ್ನು ಪಾಲಿಸಿದರೆ ಇಪ್ಪತ್ತು ವರ್ಷಗಳ ನಂತರ ಡೆಬ್ಟ್ ಫಂಡ್ಸ್ ನಿಂದ ಸುಮಾರು 90 ಲಕ್ಷ ಮತ್ತು ಈಕ್ವಿಟಿಯಿಂದ 3.15 ಕೋಟಿ ಹಣವನ್ನು ಪಡೆಯಬಹುದು. ಈ ಮೊತ್ತ 4 ಕೋಟಿಯಷ್ಟಾಗಿ ಮುಂದಿನ ಇಪ್ಪತ್ತು ವರ್ಷಗಳು ಪ್ರತೀ ತಿಂಗಳಿಗೆ 1 ಲಕ್ಷಕ್ಕಿಂತಲೂ ಹೆಚ್ಚಿನ ರಿಟೈರ್ ಮೆಂಟ್ ಫಂಡ್ ಅನ್ನು ಪಡೆಯಬಹುದಾಗಿದೆ. ಹೀಗೆ ರಿಟೈರ್ ಮೆಂಟ್ ಜೀವನದಲ್ಲಿ ಆರ್ಥಿಕ ಸ್ವಾವಲಂಬನೆ ಪಡೆಯಬಹುದಾಗಿದೆ.

Comments are closed.