Maruti EECO: ಬಾಡಿಗೆ ಬಿಸಿನೆಸ್ ಮಾಡುವವರಿಗಾಗಿ ಸೂಪರ್ ಕಾರು ಲಾಂಚ್ ಮಾಡಿದ ಮಾರುತಿ; 10 ಆಸನಗಳು ಜಾಸ್ತಿ ಮೈಲೇಜ್!

Maruti EECO: ಬಾಡಿಗೆ ಕಾರುಗಳ ಆಯ್ಕೆಗಳು ಸೀಮಿತವಾಗಿರುತ್ತವೆ. ಒಳ್ಳೆಯ ಮೈಲೇಜ್(mileage)  ಬೇಕಿರುತ್ತದೆ, ಪ್ಯಾಸೆಂಜರ್ಸ್ ಗೆ ಮತ್ತು ಲಗೇಜ್ ಇಡಲು ಒಳ್ಳೆಯ ಸ್ಪೇಸ್ (Space) ಬೇಕಿರುತ್ತದೆ. ಇಂತಹ ಕಾರುಗಳಷ್ಟೇ ಬಾಡಿಗೆ ವಾಹನಗಳಾಗಿ ಪ್ರಸಿದ್ಧವಾಗುತ್ತವೆ. ಈಗಾಗಲೇ ತನ್ನ ಹೊಸ ಮಾಡೆಲ್ ಗಳಿಂದ ಪ್ರಸಿದ್ಧವಾಗಿರುವ ಮಾರುತಿಯ ಹೊಸ ಕಾರುಗಳ ಲೈನ್ ಅಪ್ ನಲ್ಲಿ ಒಂದು ಬಾಡಿಗೆಗೆ ಸರಿಯಾದ ಕಾರು ಲಾಂಚ್ ಆಗುತ್ತಿದೆ. ಈ ಮೂಲಕ ಮಾರುತಿ ತನ್ನ ಮಾರಾಟವನ್ನು ಇನ್ನೂ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಹಾಗಾದರೆ ಯಾವುದು ಈ ಮಾರುತಿಯ ಹೊಸ ಮಾಡೆಲ್ ಎಂದು ಯೋಚಿಸುತ್ತಿದ್ದೀರೇ ? ಇಲ್ಲಿದೆ ಉತ್ತರ: ಇದನ್ನೂ ಓದಿ: Ration Card correction: ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಜಮಾನ ಹೆಸರನ್ನು ಬದಲಾಯಿಸಿ ಯಜಮಾನಿಯ ಹೆಸರನ್ನು ಹಾಕುವುದು ಈಗ ಅತ್ಯಂತ ಸುಲಭ ಈ ಕೂಡಲೇ ಮಾಡಿಸಿಕೊಳ್ಳಿ, ಇಲ್ಲವಾದರೆ ಸರ್ಕಾರದ ಯೋಜನೆಯ ಪ್ರಯೋಜನ ಸಿಗುವುದಿಲ್ಲ!

ಮಾರುತಿ ಸುಝುಕಿ ಈಕೋ (EECO) 

ಮಾರುತಿ ಸುಝುಕಿ (Maruti Suzuki)  ರೂಪಾಂತರ ಮಾಡಿರುವ ಈಕೋ ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಈಕೋ ಮಾಡೆಲ್ ಈ ಮೊದಲು ಇತ್ತಾದರೂ ಅಷ್ಟೊಂದು ಪ್ರಖ್ಯಾತವಾಗಿರಲಿಲ್ಲ. ಈಗ ಅದೇ ಈಕೋ ಬದಲಾದ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಈಕೋ ಈಗ 10 ಆಸನಗಳನ್ನು ಹೊಂದಿದೆ.

ಎಂಜಿನ್ ಮತ್ತು ಪವರ್:

ಮಾರುತಿ ಸುಝುಕಿ ಈಕೋ ಕಾರು 1.2 ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಎಂಜಿನ್ ಜೊತೆ ಬರಲಿದೆ. ಈ ಎಂಜಿನ್ ಗರಿಷ್ಟ 80.76 ಪಿ.ಎಸ್ ಸಾಮರ್ಥ್ಯವನ್ನು ಹೊಂದಿದೆ. 104.4 ಎಮ್.ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನೂ ಓದಿ: Meghana Raj: “ಧ್ರುವ ಸರ್ಜಾ ಇನ್ನೂ ಎಳಸು, ನನ್ನ ಮಗ ರಾಯನ್ ಗೂ ಧ್ರುವನಿಗೂ ಏನು ವ್ಯತ್ಯಾಸವಿಲ್ಲ” ಮೇಘನಾ ರಾಜ್ ಇಂಥದೊಂದು ಹೇಳಿಕೆ ಕೊಟ್ಟಿದ್ದು ಯಾಕೆ ಗೊತ್ತಾ?

ಸಿ.ಎನ್.ಜಿ:

ಈಕೋ ಕೇವಲ ಪೆಟ್ರೋಲ್ ಮಾದರಿಯಲ್ಲಿ ಮಾತ್ರವಲ್ಲದೆ ಸಿ.ಎನ್.ಜಿ. ಇಂಧನ ಆಯ್ಕೆಯ ಜೊತೆಗೂ ಬರಲಿದೆ. ಸಿ.ಎನ್.ಜಿ. ಕಡಿಮೆ ಪ್ರತೀ ಕಿಲೋಮೀಟರ್ ದರದಲ್ಲಿ ಓಡುವುದರಿಂದ ಕ್ಯಾಬ್ ಗಾಗಿ ಈ ಕಾರು ಆಯ್ಕೆ ಮಾಡಿಕೊಂಡವರು ಒಳ್ಳೆಯ ಮೈಲೇಜ್ ಪಡೆಯಲಿದ್ದಾರೆ. ಸಿ.ಎನ್.ಜಿ. ಎಂಜಿನ್ 71.65 ಪಿ.ಎಸ್. ಪವರ್ ಅನ್ನು ಉತ್ಪಾದಿಸುತ್ತದೆ ಹಾಗೂ 95 ಎನ್.ಎಮ್ ಟಾರ್ಕ್ ಉತ್ಪಾದಿಸುತ್ತದೆ.

ಮೈಲೇಜ್:

ಹತ್ತು ಆಸನಗಳೊಂದಿಗೆ ಬಂದಿರುವ ಈ ಕಾರು ಕ್ಯಾಬ್ ಗಾಗಿ ಒಳ್ಳೆಯ ಆಯ್ಕೆ ಆಗಲಿದೆ. ಆದರೆ ಮೈಲೇಜ್ ಕೂಡ ಉತ್ತಮವಾಗಿದ್ದರಷ್ಟೇ ಈ ಕಾರು ಬಾಡಿಗೆ ಕಾರು ಮಾಲೀಕರ ಆಯ್ಕೆಯಾಗಲಿದೆ. ಪೆಟ್ರೋಲ್ ಮಾದರಿಯಲ್ಲಿ ಈ ಕಾರು 20.2 ಮೈಲೇಜ್ ನೀಡುತ್ತದೆ ಸಿ.ಎನ್.ಜಿ ಮಾದರಿಯ ಕ್ಲೈಮ್ ಮಾಡಲಾದ ಮೈಲೇಜ್ 27.05 ಆಗಿದೆ.

ಫೀಚರ್ಸ್:

ಹತ್ತು ಆಸನಗಳೊಂದಿಗೆ ಬಿಡುಗಡೆ ಆಗುತ್ತಿರುವ ಈಕೋ ಕಾರಿನಲ್ಲಿ ಜಾಗ ಮತ್ತು ಮೈಲೇಜ್ ಚೆನ್ನಾಗಿದೆ ಆದರೆ ಯಾವೆಲ್ಲಾ ಫೀಚರ್ಸ್ ಇದೆ? ಈಗ ಲಭ್ಯವಾಗಿರುವ ಮಾಹಿತಿಯಂತೆ ಇದರಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡಿಜಿಟಲ್ ಸ್ಪೀಡೋ ಮೀಟರ್, ಆಟೋ ಎರ್‍ ಕಂಡೀಷನಿಂಗ್, ಲೋ ಫ್ಯೂಯಲ್ ಇಂಡಿಕೇಟರ್ ಮತ್ತು ಚೈಲ್ಡ್ ಲಾಕ್ ಇದೆ. ಸುರಕ್ಷತೆಗಾಗಿ ಎರಡು ಏರ್ ಬ್ಯಾಗ್ ಗಳನ್ನೂ ನೀಡಲಾಗಿದೆ.

ಬೆಲೆ:

ಇಷ್ಟೆಲ್ಲಾ ಪೀಚರ್ಸ್ ಇರುವ ಈ ಕಾರಿನ ಬೆಲೆ 15.1 ಲಕ್ಷ ನಿಗದಿಪಡಿಸಲಾಗಿದೆ. ಆದರೆ ಯಾವೆಲ್ಲಾ ವೇರಿಯಂಟ್ ಗಳಿವೆ, ಪೆಟ್ರೋಲ್ ಮತ್ತು ಸಿ.ಎನ್.ಜಿ ಮಾದರಿಗೆ ಯಾವ ಬೆಲೆ ಇದೆ ಎಂಬೆಲ್ಲಾ ನಿಖರ ಮಾಹಿತಿಗಳು ಇನ್ನು ಹೊರಬರಲಿವೆ.

Comments are closed.