Temple Dress Code: ದೇವಸ್ಥಾನಕ್ಕೂ ಬಂತು ಡ್ರೆಸ್ ಕೋಡ್; ಚಿಕ್ಕಮಗಳೂರಿನ ಈ ದೇವಾಲಯದಲ್ಲಿ ಇಂತಹ ಡ್ರೆಸ್ ಧರಿಸುವವರಿಗೆ ಪ್ರವೇಶವಿಲ್ಲ!

Temple Dress Code: ದೇವಸ್ಥಾನ (Temple) ಅಂದರೆ ಅದೊಂದು ಪವಿತ್ರವಾದ ಸ್ಥಳ. ಇಲ್ಲಿ ಮನಸ್ಸಿನ ಶಾಂತಿಗಾಗಿ, ಲೌಕಿಕ ಜೀವನದ ಜಂಜಾಟಗಳಿಂದ ಸ್ವಲ್ಪ ಸಮಯವಾದರೂ ದೂರವಿರಬೆಕು ಎನ್ನುವ ಕಾರಣಕ್ಕೆ ದೇವಾಲಯಕ್ಕೆ ಬರುತ್ತಾರೆ. ಆದರೆ ದೇವಾಲಯಗಳಲ್ಲಿ ಬರುವ ಭಕ್ತಾದಿಗಳಲ್ಲಿ ಸಾಕಷ್ಟು ಬದಲಾವಣೆಗಳೂ ಆಗಿವೆ. ದೇವಾಲಯಕ್ಕೆ ಬರುವವರು ಧರಿಸುವ ಬಟ್ಟೆಗಳು ಇತರರಿಗೂ ಮುಜುಗರ ಉಂಟು ಮಾಡುವಂತೆ ಇರುತ್ತವೆ. ಈ ಕಾರಣಕ್ಕಾಗಿ ದೇವಾಲಯಗಳಲ್ಲಿಯೂ ಡ್ರೆಸ್ ಕೋಡ್ (Dress Code) ಇರಬೇಕು. ಇಂತದ್ಡೆ ಉಡುಗೆ ಧರಿಸಬೇಕು ಎನ್ನುವ ರೂಲ್ಸ್ (Rules) ಮಾಡಬೇಕು ಎಂದು ಬಹಳ ಹಿಂದಿನಿಂದ ಇರುವ ಬೇಡಿಕೆ.

ಹೌದು, ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ದೇವರಿಗೆ ಬಹಳ ಭಕ್ತಿಯಿಂದ ನಡೆದುಕೊಳ್ಳಬೇಕು ಹಾಗೆಯೇ ದೇವಸ್ಥಾನದ ಆವರಣದಲ್ಲಿ ಯಾವ ರೀತಿ ವರ್ತಿಸಬೇಕು ಯಾವ ರೀತಿ ಡ್ರೆಸ್ ಧರಿಸಿಕೊಂಡು ಬರಬೇಕು ಎನ್ನುವುದನ್ನು ಕೂಡ ಗಮನದಲ್ಲಿ ಇಟ್ಟುಕೊಂಡಿರಬೇಕು ಈ ಬಗ್ಗೆ ಚಿಕ್ಕಮಂಗಳೂರು ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಬೆಂಡಿಗ ದೇವೇರಮ್ಮ ದೇವಸ್ಥಾನದ ಆಡಳಿತ ಮಂಡಳಿ ಯೋಜನೆ ಮಾಡಿದ್ದು ಇಲ್ಲಿ ಬರುವ ಭಕ್ತರಿಗೆ ಡ್ರೆಸ್ ಕೋಡ್ ತಿಳಿಸಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಪಾಶ್ಚತ್ಯ ಉಡುಪುಗಳಾದ ಸ್ಕರ್ಟ್ ಮಿಡಿ ಸ್ಲೀವ್ಲೆಸ್ ಡ್ರೆಸ್ ಜೀನ್ಸ್ ಪ್ಯಾಂಟ್ ಸಾಕ್ಸ್ ಹಾಕಿಕೊಂಡು ದೇವಾಲಯದ ಆವರಣದಲ್ಲಿ ಮಾತ್ರ ಓಡಾಡುವಂತಿಲ್ಲ. ಕೇವಲ ಸಾಂಪ್ರದಾಯಿಕ ಉಡುಗೆಗಳನ್ನು ಮಾತ್ರ ಧರಿಸಿಕೊಂಡು ಬರಬೇಕು.

ದೇವೇರಮ್ಮ ದೇವಸ್ಥಾನಕ್ಕೆ ಡ್ರೆಸ್ ಕೋಡ್ ಅಳವಡಿಸಿರುವುದು ಮಾತ್ರವಲ್ಲದೆ ಈ ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಸುವುದನ್ನು ಕೂಡ ನಿಷೇಧಿಸಲಾಗಿದೆ. ಬಹಳ ಖ್ಯಾತಿಗಳಿಸಿಕೊಂಡಿರುವ ಚಿಕ್ಕಮಂಗಳೂರಿನ ದೇವಿರಮ್ಮ ದೇವಾಲಯಕ್ಕೆ ಸಾಕಷ್ಟು ಭಕ್ತಾದಿಗಳು ಭೇಟಿ ನೀಡುತ್ತಾರೆ. ಅದರಲ್ಲೂ ದೀಪಾವಳಿ ಹಬ್ಬದ ಸಮಯದಲ್ಲಿ ಮಧ್ಯರಾತ್ರಿಯಿಂದಲೇ ಪಿರಮಿಡ್ ಆಕಾರದ ಬೆಟ್ಟ ಹತ್ತಿ ಭಕ್ತರ ದಂಡೆ ದೇವಸ್ಥಾನಕ್ಕೆ ಆಗಮಿಸುತ್ತದೆ. ಇಷ್ಟೊಂದು ಭಕ್ತ ಸಮುದಾಯ ಇರುವ ಸಂದರ್ಭದಲ್ಲಿ ಬರುವ ಭಕ್ತಾದಿಗಳ ಉಡುಗೆ ಕೂಡ ಸರಿಯಾಗಿ ಇರಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಕ್ಕೆ ಬಂದಿದ್ದು, ಕೇವಲ ಸಾಂಪ್ರದಾಯಿಕ ಅಡುಗೆಗಳನ್ನು ಮಾತ್ರ ಧರಿಸಿ ಬರಬಹುದು ಎಂದು ಸೂಚನೆ ನೀಡಿದೆ. ಇದು ಮಾತ್ರವಲ್ಲದೇ ದೇವಾಲಯದ ಆವರಣದಲ್ಲಿ ಪ್ರಿ ವೆಡ್ಡಿಂಗ್ ಶೂಟ್, ರಿಲ್ಸ್ ಮೊದಲಾದವುಗಳನ್ನು ಮಾಡುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.

Comments are closed.