Car Deal: ದುಬಾರಿ ಫಾರ್ಚುನರ್ ಕಾರೊಂದು ಮಾರಾಟವಾದರೆ ಅದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರುವುದು 18 ಲಕ್ಷ ರೂ. ಹೇಗೆ ಗೊತ್ತೇ?

Car Deal: ಒಂದು ಕಾರು ಮಾರುಕಟ್ಟೆಗೆ ಬರಬೇಕಾದರೆ ಅದರ ಹಿಂದೆ ಏನೆಲ್ಲಾ ನಡೆಯುತ್ತದೆ ಯಾವೆಲ್ಲಾ ಭಾಗಗಳು ಕಾರುಗಳಲ್ಲಿ ಇರುತ್ತದೆ, ಆ ಭಾಗಗಳು ಎಲ್ಲಿ  ತಯಾರಾಗುತ್ತವೆ. ಇವೆಲ್ಲದರ ಬಗೆಗೆ ಬಹಳ ಜನರಿಗೆ ತಿಳಿಯಲು ಆಸಕ್ತಿ ಇರುತ್ತದೆ ಮತ್ತು ವೀಡಿಯೋ ನೋಡಿ ಅಥವಾ ನ್ಯೂಸ್ ಓದಿ ತಿಳಿದಿರುತ್ತೇವೆ ಆದರೆ ಕಾರೊಂದು ಮಾರಾಟವಾದಾಗ ಯಾರಿಗೆ ಎಷ್ಟು ಹಣ ಅಥವಾ ಲಾಭ ಸಿಗುತ್ತದೆ ಎಂಬ ಬಗ್ಗೆ ಯಾವಾಗಲಾದರೂ ಯೋಚಿಸಿದ್ದೀರಾ? ಹಾಗಾದರೆ ಕಾರೊಂದು ಮಾರಾಟವಾದಾಗ ಯಾರಿಗೆ ಎಷ್ಟು ಹಣ ಸಿಗುತ್ತದೆ ಇಂದು ನೋಡೋಣ.

ಕಾರು ಎಂದರೆ ಸಾಮಾನ್ಯವಾಗಿ ಯಾವೆಲ್ಲಾ ಭಾಗಗಳು ಇರುತ್ತವೆ ನಮಗೆಲ್ಲಾ ತಿಳಿದೇ ಇದೆ. ಎಂಜಿನ್ ಭಾಗಗಳು ಇರುತ್ತವೆ, ಟ್ರಾನ್ಸ್ಮಿಷನ್ ಭಾಗಗಳೂ ಇರುತ್ತವೆ. ಎಲೆಕ್ಟ್ರಿಕಲ್ ವಿಷಯಗಳು ಇರುತ್ತವೆ. ವೀಲ್ಸ್ ಮತ್ತು ಟಯರ್ ಇರುತ್ತವೆ, ಗ್ಲಾಸ್ ಇರುತ್ತದೆ. ಈ ಎಲ್ಲಾ ತಯಾರಾರಕರೂ ಒಂದೇ ಕಂಪನಿ ಆಗಿರುವುದಿಲ್ಲ. ಈಗ ಟೋಯೋಟಾ ಫಾರ್ಚುನರ್ ಉದಾಹರಣೆ ತೆಗೆದುಕೊಂಡರೆ ಎಲ್ಲಾ ಭಾಗಗಳನ್ನೂ ಟೋಯೋಟಾ ತಾನೇ ತಯಾರು ಮಾಡುವುದಿಲ್ಲ. ಪ್ರಮುಖವಾದ ಎಂಜಿನ್ ಮತ್ತು ಟ್ರಾನ್ಸ್ ಮಿಷನ್ ಭಾಗಗಳನ್ನು  ತಾನೇ ತಯಾರಿಸಿದರೆ ಉಳಿದ ಭಾಗಗಳನ್ನು ತನ್ನ ಮಾನದಂಡಗಳಿಗೆ ಅನುಗುಣವಾಗಿ ತಯಾರು ಮಾಡುವ ಕಂಪನಿಗಳಿಂದ ಪಡೆದುಕೊಳ್ಳುತ್ತದೆ. ಈ ಎಲ್ಲಾ ಭಾಗಗಳನ್ನು ಪೂರೈಕೆ ಮಾಡುವವರು ತಮ್ಮ ಲಾಭವನ್ನಿಟ್ಟೇ ಮಾರಾಟ ಮಾಡಿರುತ್ತಾರೆ.

ಟೋಯೋಟಾ ತನ್ನ ಭಾಗಗಳು, ಹೊರಗಿಂದ ತಂದ ಬಿಡಿ ಭಾಗಗಳು ಎಲ್ಲವನ್ನೂ ಸೇರಿ ಖರ್ಚು ಲೆಕ್ಕ ಮಾಡಿ ಅದರ ಮೇಲೆ ತನ್ನ ಲಾಭವನ್ನು ಇಟ್ಟುಕೊಂಡಿರುತ್ತದೆ. ಫಾರ್ಚುನರ್ ನ ಬೆಲೆ 38 ಲಕ್ಷದಿಂದ ಆರಂಭವಾಗಿ 60 ಲಕ್ಷದ ತನಕ ಇರುತ್ತದೆ.  ಟೋಯೋಟಾ ಕಂಪನಿಯ ಓರ್ವ ಅಧಿಕಾರಿಯ ಪ್ರಕಾರ ಒಂದು ಫಾರ್ಚುನರ್ ಮಾರಾಟವಾದಾಗ ಕಂಪನಿಗೆ 35 ರಿಂದ 40 ಸಾವಿರ ಲಾಭ ಇರುತ್ತದೆ. ಇದು ಕಂಪನಿಯ ಲಾಭ

ಎಲ್ಲಾ ಕಾರುಗಳೂ ವಿತರಕರ ಮೂಲಕವೇ ಮಾರಾಟವಾಗುತ್ತದೆ. ಅದಕ್ಕಾಗಿ ವಿತರಕರು ಒಂದು ಷೋ ರೂಮ್ ತೆರೆದು ಅದಕ್ಕೆ ಬೇಕಾದ ಖರ್ಚುಗಳನ್ನು ಭರಿಸಿರುತ್ತಾರೆ. ಅವರ ಲಾಭ ಸುಮಾರು 1 ಲಕ್ಷ ರೂಪಾಯಿಗಳಾಗಿರುತ್ತದೆ. ಸರ್ಕಾರಕ್ಕೆ 18 ಲಕ್ಷ ರೂಪಾಯಿಗಳು ಸೇರುತ್ತದೆ. ಇದರಲ್ಲಿ ಕಾರಿನ ಮೇಲಿನ ತೆರಿಗೆಯ ಜೊತೆಗೆ ವಾಹನವನ್ನು ಖರೀದಿಸುವ ಸಮಯದಲ್ಲಿ ಆಗುವ ದಾಖಲೆಗಳ ಶುಲ್ಕ ಕೂಡ ಇದೆ. ತೆರಿಗೆ ಇರಲಿ ಶುಲ್ಕಗಳೇ ಇರಲಿ ಎಲ್ಲವೂ ಬೇರೆ ಬೇರೆ ಇಲಾಖೆಗಳ ಮೂಲಕ ಸರ್ಕಾರಕ್ಕೆ ಸೇರುವುದರಿಂದ ಅದನ್ನು ಒಂದೇ ಎಂದು ಪರಿಗಣಿಸಲಾದರೆ ಸರ್ಕಾರಕ್ಕೆ ಒಂದು ಫಾರ್ಚುನರ್ ಮಾರಾಟವಾದಾಗ 18 ಲಕ್ಷ ಮಾರಾಟವಾಗುತ್ತದೆ.

ಓಂದು ಫಾರ್ಚುನರ್ ಮಾರಾಟವಾದಾಗ ಸರ್ಕಾರ ಜಿ.ಎಸ್.ಟಿ. ಯ ಮೂಲಕ ಅತೀ ಹೆಚ್ಚು ಹಣವನ್ನು ಗಳಿಸುತ್ತದೆ. ಟಾಪ್ ಮಾಡೆಲ್ ಫಾರ್ಚುನರ್ ಸುಮಾರು 43 ಶೇಕಡಾ ಜಿ.ಎಸ್.ಟಿ. ಹೊಂದಿರುತ್ತದೆ. ಭಾರತೀಯ ಆಟೋ ಬ್ಲಾಗರ್ಸ್ ಗಳ ಪ್ರಕಾರ ಟಾಪ್ ಸ್ಪೆಕ್ ಫಾರ್ಚುನರ್ 28 ಮತ್ತು 15 ಶೇಕಡಾ ಜಿ.ಎಸ್.ಟಿ. ಯನ್ನು ಭರಿಸಬೇಕಾಗುತ್ತದೆ. ಇದರ ಹೊರತಾಗಿ ನೋಂದಣಿ, ಲಾಜಿಸ್ಟಿಕ್ಸ್, ಗ್ರೀನ್ ಸೆಸ್, ಟಿ.ಸಿ.ಎಸ್, ವಿಮೆ ಮುಂತಾದ ಶುಲ್ಕಗಳೆಲ್ಲಾ ಸರ್ಕಾರಕ್ಕೇ ಸಿಗುತ್ತದೆ. ಇನ್ನು ಫಾಸ್ಟಾಗ್ ರೆಜಿಸ್ಟ್ರೇಷನ್ ಮತ್ತು ಎಕ್ಟೆಂಡೆಡ್ ವಾರಂಟಿ ಗಳ ಮೇಲೆ ಭರಿಸುವ ತೆರಿಗೆಗಳೆಲ್ಲಾ ಸೇರಿದಾಗ ಇಷ್ಟೆಲ್ಲಾ ಹಣ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ.

Comments are closed.