Ketu Transit: ಚಿತ್ರ ನಕ್ಷತ್ರದಲ್ಲಿ ಸಂಚರಿಸುವ ಕೇತು ಈ ಐದು ರಾಶಿಯವರಿಗೆ ಮಾತ್ರ ಅದೆಷ್ಟು ಕಷ್ಟ ಕೊಡುತ್ತಾನೋ ಏನೋ? ಈ ರಾಶಿಯವರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು!

Ketu Transit: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ತಮ್ಮ ಪಥವನ್ನು ಬದಲಾಯಿಸಿದಾಗ ಎಲ್ಲಾ ರಾಶಿ ಚಕ್ರಗಳ ಮೇಲೆ ಪರಿಣಾಮ ಬೀರುತ್ತವೆ, ಅದರಲ್ಲಿ ಕೇತು ಗ್ರಹ ಕೆಟ್ಟ ಪರಿಣಾಮವನ್ನು ಬೀರುವ ಗ್ರಹ ಎಂದು ಪರಿಗಣಿಸಲಾಗುತ್ತದೆ ಕೇತು ಗ್ರಹದ ಸಂಚಾರ ಅಂದರೆ ಜನರಲ್ಲಿ ಆತಂಕ ಮೂಡಿಸುವಂಥದ್ದು. ನಿಗೂಢ ಗ್ರಹ ಎಂದೇ ಕರೆಯಲಾಗುವ ಕೇತು ಹಲವರ ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಚಿತ್ರ ನಕ್ಷತ್ರವನ್ನು ಪ್ರವೇಶಿಸಲು ಇರುವ ಕೇತುವಿನಿಂದ ಮುಖ್ಯವಾಗಿ ಈ ಐದು ರಾಶಿಯವರು ಕಷ್ಟವನ್ನು ಎದುರಿಸಬೇಕಾಗುತ್ತದೆ ಯಾವ ರಾಶಿಯವರು ನೋಡೋಣ.

ಮಿಥುನ ರಾಶಿ: ಇದು ಸಂಚಾರದಿಂದ ಮಿಥುನ ರಾಶಿಯವರ ವೈಯಕ್ತಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ ಸಂಗಾತಿಯ ಜೊತೆಗೆ ಜಗಳ ಆಗಬಹುದು ಪ್ರೀತಿಯ ಜೀವನದಲ್ಲಿ ಸಾಕಷ್ಟು ಸಮಸ್ಯೆ ಉಂಟಾಗಬಹುದು. ವೃತ್ತಿ ಜೀವನ ಯಥಾ ಸ್ಥಿತಿಯಲ್ಲಿ ಇದ್ದರೂ ವೈಯಕ್ತಿಕ ಸಂತೋಷಕ್ಕೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ.

ಕನ್ಯಾ ರಾಶಿ: ಕನ್ಯಾ ರಾಶಿಯ ವಿದ್ಯಾರ್ಥಿಗಳ ಮೇಲೆ ಕೇತುವಿನ ಪ್ರಭಾವ ಎಚ್ಚರುತ್ತದೆ ಪರೀಕ್ಷೆಯಲ್ಲಿ ಎಂದಿಗಿಂತ ಹೆಚ್ಚಿನ ಸವಾಲು ಎದುರಿಸಬೇಕಾಗುತ್ತದೆ ವಿದೇಶಕ್ಕೆ ಓದಲು ಹೋಗುವವರಿಗೆ ಸಂಕಷ್ಟ ಎದುರಾಗುತ್ತದೆ ಮಾನಸಿಕವಾಗಿ ತಳಮಳ ಉಂಟಾಗುತ್ತದೆ. ಹಾಗಾಗಿ ಮನಸ್ಸನ್ನು ನಿಗ್ರಹಿಸಿಕೊಳ್ಳುವುದು ಬಹಳ ಮುಖ್ಯ.

ಮಕರ ರಾಶಿ: ಕೇತುವಿನ ಸಂಚಾರ ಮಕರ ರಾಶಿಯವರಿಗೆ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ತರಬಹುದು ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಮಾಡಿ. ನಿಮ್ಮ ಆರೋಗ್ಯದ ಬಗ್ಗೆಯೂ ಗಮನ ಇರಲಿ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ಸೇವಿಸುವುದರಿಂದ ತಕ್ಕಮಟ್ಟಿಗೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಕಟಕ ರಾಶಿ: ಕೇತುವಿನ ಸಂಚಾರ ಕರ್ಕ ರಾಶಿಯವರ ಕೌಟುಂಬಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡಬಹುದು ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ 10 ಬಾರಿ ಯೋಚನೆ ಮಾಡಿ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುವ ಸಾಧ್ಯತೆ ಇರುತ್ತದೆ.

ಮೀನ ರಾಶಿ: ನಿಮ್ಮ ಮಾತೆ ನಿಮಗೆ ಸಮಸ್ಯೆಯನ್ನು ಉಂಟು ಮಾಡಬಹುದು ಜನ ನಿಮ್ಮನ್ನು ಅರ್ಥ ಮಾಡಿಕೊಳ್ಳದೆ ಇರುವ ಸಾಧ್ಯತೆ ಇದೆ ಇದರಿಂದ ಸಂಬಂಧ ಹಾಳಾಗಬಹುದು ಆರ್ಥಿಕ ಪರಿಸ್ಥಿತಿಯಲ್ಲಿಯೂ ಸಮಸ್ಯೆ ಉಂಟಾಗಬಹುದು. ಈ 5 ರಾಶಿಗಳು ಕೇತು ಸಂಚಾರದಿಂದ ಸಮಸ್ಯೆ ಎದುರಿಸಬೇಕಾಗುತ್ತದೆ ಆದರೆ ಇದು ಕೆಲವು ಸಮಯಗಳಿಗೆ ಮಾತ್ರ ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಜೊತೆಗೆ ನಿಶ್ಚಿಂತೆಯಿಂದ ನಿಮ್ಮ ಕೆಲಸವನ್ನು ನೀವು ಮಾಡಿ.

Comments are closed.