Mutual Fund SIP: ಬ್ಯಾಂಕ್ ಗಳಲ್ಲಿ ಎಷ್ಟೇ ಹಣ ಇಟ್ಟರು ಉತ್ತಮ ಬಡ್ಡಿ ಸಿಗುತ್ತಿಲ್ಲವೇ? ಹಾಗಾದ್ರೆ ಈ ಯೋಜನೆ ಟ್ರೈ ಮಾಡಿ, ಹಣ ದುಪ್ಪಟ್ಟಾಗೋದು ಗ್ಯಾರಂಟಿ!

Mutual Fund SIP: ಭವಿಷ್ಯದ ದೃಷ್ಟಿಯಿಂದ ನಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ಈಗಿನಿಂದಲೇ ಹೂಡಿಕೆ (Investment) ಮಾಡುತ್ತಾ ಬಂದರೆ ನಿವೃತ್ತಿಯ (Retirement)  ಸಮಯದಲ್ಲಿ ಯಾರ ಮುಂದೆಯೂ ಕೈ ಚಾಚುವಂತಹ ಪರಿಸ್ಥಿತಿ ಬರುವುದಿಲ್ಲ ಜೊತೆಗೆ ನಾವು ಆರ್ಥಿಕವಾಗಿಯೂ ಕೂಡ ಸಬಲರಾಗಿರುತ್ತವೆ. ಅದೇ ರೀತಿ ಈಗಾಗಲೇ ನಿವೃತ್ತಿ ಹೊಂದಿರುವವರು ಕೂಡ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಲು ಸಾಧ್ಯವಿದೆ. ಇದಕ್ಕಾಗಿ ಬ್ಯಾಂಕ್ ನಲ್ಲಿ ಹಣ ಇಟ್ಟರೆ ಜಾಸ್ತಿ ಬಡ್ಡಿ ಸಿಗುವುದಿಲ್ಲ ಎನ್ನುವವರು ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (systematic investment schemes) ಹೂಡಿಕೆ ಮಾಡಬಹುದು. ಅವು ಯಾವವು? ಅದರಿಂದ ಏನೆಲ್ಲ ಪ್ರಯೋಜನ ಇದೆ ನೋಡೋಣ.

ವ್ಯವಸ್ಥಿತ ಹೂಡಿಕೆ ಯೋಜನೆಗಳು (systematic investment schemes):

ಇದು ದೀರ್ಘ ಕಾಲದ ಹೂಡಿಕೆಯಾಗಿದ್ದು ಮ್ಯೂಚುವಲ್ ಫಂಡ್ (Mutual Fund) ನಲ್ಲಿ ದೀರ್ಘಕಾಲದ ಹೂಡಿಕೆಗಾಗಿ ಎಸ್ಐಪಿ ಆಯ್ಕೆ ಮಾಡಿಕೊಳ್ಳಬಹುದು. ಇಷ್ಟು ವರ್ಷಕ್ಕೆ ಇಷ್ಟು ಕಂತು ಎಂದು ನಿಗದಿಪಡಿಸಿರಲಾಗುತ್ತದೆ ನಿಮ್ಮ ಬಜೆಟ್ ಗೆ ಅನುಕೂಲವಾಗುವಂತೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಸ್ಟೆಪ್ ಅಪ್ ಎಸ್ ಪಿ:

ಸ್ಟೆಪ್ ಆಫ್ ಹೂಡಿಕೆ ಕಾಲ ಕಾಲಕ್ಕೆ ನಿಮ್ಮ ಮೊತ್ತವನ್ನು ಹೆಚ್ಚಿಸುತ್ತಾ ಹೋಗುತ್ತದೆ. ನಿಮ್ಮ ಬಳಿ ಹಣ ಜಾಸ್ತಿ ಇದ್ದಷ್ಟು ಜಾಸ್ತಿ ಠೇವಣಿ ಮಾಡುತ್ತಾ ಹೋದರೆ ಈ ಹೂಡಿಕೆಯಲ್ಲಿ ಚಿನ್ನ ಲಾಭ ಗಳಿಸಬಹುದು. ವಾರ್ಷಿಕ ಅಥವಾ ಅರ್ಥ ವಾರ್ಷಿಕ ಅವರಿಗೆ ಕಂತುಗಳನ್ನು ಪಾವತಿಸಬಹುದಾದ ಆಯ್ಕೆ ಇದರಲ್ಲಿ ಇದೆ.

ಫ್ಲೆಕ್ಸಿಬಲ್ ಎಸ್ ಪಿ:

ಇದು ಮಾರುಕಟ್ಟೆಯ ಏರಿಳಿತಕ್ಕೆ ಅನುಗುಣವಾಗಿ ಮೊತ್ತವನ್ನು ಸರಿ ಹೊಂದಿಸಿಕೊಳ್ಳುವಂತಹ ಯೋಜನೆ ಆಗಿದೆ. ಅಂದ್ರೆ ಮಾರುಕಟ್ಟೆ ತುಂಬಾ ಕೆಳ ಮಟ್ಟಕ್ಕೆ ಹೋದಾಗ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡಲು ಸಾಧ್ಯವಾಗದೇ ಇದ್ದಾಗ ಕಡಿಮೆ ಹೂಡಿಕೆ ಮಾಡಲು ಇದರಲ್ಲಿ ಸಾಧ್ಯ. ಎಷ್ಟು ಹೂಡಿಕೆ ಮಾಡಬೇಕು ಎನ್ನುವುದು ಮೊದಲೇ ನಿರ್ಧಾರಿತವಾಗಿದ್ದರೂ ಕೂಡ ನೀವು ಆ ಮೊತ್ತವನ್ನು ಬದಲಾಯಿಸಿಕೊಳ್ಳಬಹುದು ಅಂದರೆ ಹೆಚ್ಚು ಠೇವಣಿ ಮಾಡಬಹುದು ಅಥವಾ ಕಡಿಮೆ ಮಾಡಬಹುದು.

ಟ್ರಿಗ್ಗರ್ ಎಸ್ ಪಿ:

ಪೂರ್ವ ನಿರ್ಧರಿತ ಟ್ರಿಗ್ಗರ್ ಆಧಾರದ ಮೇಲೆ ಕಂತುಗಳನ್ನು ಪಾವತಿಸುವ ಯೋಜನೆ ಇದಾಗಿದೆ. ಪ್ರಚೋದಕ ಸ್ಥಿತಿಯ ಪೂರೈಕೆ ಆದಾಗ ಮಾತ್ರ ಹೂಡಿಕೆ ಸ್ವಯಂ ಚಾಲಿತವಾಗಿ ಪ್ರಾರಂಭವಾಗುತ್ತದೆ ಇದು ನಿರ್ದಿಷ್ಟ ಸೂಚಂಕ ಮಟ್ಟ ಹಾಗೂ ಠೇವಣಿಯ ಕಾರ್ಯಕ್ಷಮತೆಯಂತಹ ಮಾರುಕಟ್ಟೆ ಪರಿಸ್ಥಿತಿಯನ್ನು ಆಧರಿಸಿ ಹೆಚ್ಚು ಕಡಿಮೆ ಆಗಬಹುದು.

ನಿಯಮಿತ ಎಸ್ ಪಿ:

ಈ ಮ್ಯೂಚುವಲ್ ಫಂಡ್ ನಲ್ಲಿ ಸಾಮಾನ್ಯವಾಗಿ ಎಲ್ಲರೂ ಹೂಡಿಕೆ ಮಾಡುತ್ತಾರೆ ಇದು ತಿಂಗಳಿಗೆ ಅಥವಾ ಮೂರು ತಿಂಗಳಿಗೆ ನಿಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡುವಂತಹ ಯೋಜನೆಯಾಗಿದೆ. ಇದರಲ್ಲಿ ಸ್ಥಿರವಾದ ಹೂಡಿಕೆಯ ಮುತ್ತು ಇರುತ್ತದೆ ದೀರ್ಘಾವಧಿಯವರೆಗೆ ನೀವು ಎಸ್ಐಪಿ ನಿಯಮಿತದಲ್ಲಿ ಹೂಡಿಕೆ ಮಾಡಬಹುದು.

Comments are closed.