Spandana: ಬ್ಯಾಂಕಾಕ್ ಪ್ರವಾಸದಲ್ಲಿದ್ದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನ!

Spandana: ಬ್ಯಾಂಕಾಕ್ ಪ್ರವಾಸದಲ್ಲಿದ್ದ ವೇಳೆ ಸ್ಪಂದನಾ ಹ್ರುದಯಾಘಾತದಿಂದ ನಿಧನರಾಗಿದ್ದಾರೆ. ಇವರು ಪತಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಹಾಗೂ ಮಗ ಶೌರ್ಯನನ್ನು ಅಗಲಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಅವರಲ್ಲಿ ಇರಲಿಲ್ಲ. ಆದರೂ ಹೃದಯಾಘಾತ ಹಠಾತ್ ಸಂಭವಿಸಿದೆ.

ಇದೊಂದು ಶಾಕಿಂಗ್ ವಿಷಯ. ಸ್ಪಂದನಾ ಚಿಕ್ಕ ವಯಸ್ಸು. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮನೆಯವರನ್ನು ಅಗಲಿದ್ದಾರೆ. ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ವಿಜಯ ರಾಘವೇಂದ್ರ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಸ್ಪಂದನಾ. 2016ರಲ್ಲಿ ಕನ್ನಡ ಸಿನಿಮಾ ಒಂದರಲ್ಲಿ ಅತಿಥಿ ಪಾತ್ರದಲ್ಲಿಯೂ ಅಭಿನಯಿಸಿದ್ದರು.

ಸ್ಪಂದನಾ ಇತ್ತೀಚಿಗೆ ವಿದೇಶಿ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಯೇ ಹೃದಯಾಘಾತ ಸಂಭವಿಸಿದೆ. ಅಲ್ಲಿಯೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ತಮ್ಮ ತುಂಬು ಕುಟುಂಬವನ್ನು ಅಗಲಿದ್ದಾರೆ ಸ್ಪಂದನಾ. ಅವರ ಆತ್ಮಕ್ಕೆ ಚಿರ  ಶಾಂತಿ ಸಿಗಲಿ ಎಂದು ಅಭಿಮಾನಿಗಳೂ ಕೋರಿದ್ದಾರೆ.

Comments are closed.