Smart Cooking Machine: ನಾನ್ ವೆಜ್ ಅಡುಗೆಯನ್ನು ಮಾಡುತ್ತೆ ಈ ಮಷೀನ್; ಗಂಡಸರಿಗೆ ಇನ್ನು ಮುಂದೆ ಇಲ್ಲ ಟೆನ್ಶನ್!! ಅತೀ ಕಡಿಮೆ ಬೆಲೆ

Smart Cooking Machine: AI ತಂತ್ರಜ್ಞಾನ (Technology) ಇಂದು ಅಡುಗೆಮನೆಗೂ ಕಾಲಿಟ್ಟಿದೆ. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Artificial intelligence) ಎಂದು ಕರೆಯುವ ಎಐ ತಂತ್ರಜ್ಞಾನ ಮಾಡೋದಕ್ಕೂ ಕೂಡ ಬಳಸಿಕೊಳ್ಳಲಾಗುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 250ಕ್ಕೂ ಹೆಚ್ಚು ವಿವಿಧ ರುಚಿ ಆಗಿರುವ ಖಾದ್ಯಗಳನ್ನು ತಯಾರಿಸಿ ನಿಮ್ಮ ಪ್ಲೇಟಿನಲ್ಲಿ ಇರುತ್ತೆ. ಇದನ್ನೂ ಓದಿ: Raj. B. Shetty: ರಾಜ್ ಬಿ ಶೆಟ್ರು ನಿಜವಾಗ್ಲೂ ಗೂಗಲ್ ನಲ್ಲಿ ಎನನ್ನು ಸರ್ಚ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವ್ ಶಾಕ್ ಆಗೋದು ಗ್ಯಾರಂಟಿ!

ಬೆಂಗಳೂರಿನಲ್ಲಿ ತಯಾರಾದ ಮಷೀನ್

ಬೆಂಗಳೂರಿನಲ್ಲಿ upliance.ai ಹೆಸರಿನಲ್ಲಿ ಮಾಹೆಕ್ ಹಾಗೂ ಮೋಜಿತ್ ಎನ್ನುವವರು ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ (Smart cooking Asistent) ಒಂದನ್ನು ಪರಿಚಯಿಸಿದ್ದಾರೆ ಈ ಮಷೀನ್ ತಯಾರಿಸುವುದರ ಹಿಂದೆ ಇವರಿಬ್ಬರು ಒಂದುವರೆ ವರ್ಷದ ಪರಿಶ್ರಮ ಇದೆ. ತಯಾರಿಸಲು ಮುಖ್ಯವಾಗಿ ಗಂಡಸರೇ ಟಾರ್ಗೆಟ್. ಪ್ರತಿ ಶುಕ್ರವಾರ ಒಂದೊಂದು ಹೊಸ ರುಚಿಯನ್ನು ಏ ಐ (AI) ಅಡುಗೆ ಮಿಷನ್ ತಯಾರಿಸುತ್ತೆ.

ಏನೆಲ್ಲಾ ತಯಾರಾಗುತ್ತೆ ಗೊತ್ತಾ?

250ಕ್ಕೂ ಹೆಚ್ಚಿನ ಅಡುಗೆಯನ್ನು ಈ ಡೆಲಿಶ್ ಅಪ್ ಸ್ಮಾರ್ಟ್ ಕುಕಿಂಗ್ ಅಸಿಸ್ಟೆಂಟ್ (Delishup smart cooking assistant machine) ತಯಾರು ಮಾಡಿಕೊಡುತ್ತದೆ ಅನ್ನ, ಸಾಂಬಾರ್, ಬಿರಿಯಾನಿ, ನೂಡಲ್ಸ್, ರೊಟ್ಟಿ ಒಂದೇ ಎರಡೇ ಕೇವಲ ಕೆಲವೇ ನಿಮಿಷಗಳಲ್ಲಿ ಈ ಎಲ್ಲಾ ಅಡುಗೆಗಳು ಸಿದ್ಧವಾಗುತ್ತೆ. ಉದಾಹರಣೆಗೆ ಚಿಲ್ಲಿ ಗಾರ್ಲಿಕ್ ನೂಡಲ್ಸ್ ಮಾಡಲು ಈ ಮಷೀನ್ ಗೆ ಕೇವಲ 20 ನಿಮಿಷ ಸಾಕು. ಟೊಮೆಟೊ ಗ್ರೇವಿ ಮಾಡೋದಕ್ಕೆ 14 ನಿಮಿಷ ಬೇಕು. ಬ್ಯಾಚುಲರ್ ಆಗಿರುವವರಿಗೆ ಬಹಳ ಹೆಲ್ಪ್ ಆಗುವಂತಹ ಮೆಷಿನ್ ಇದು

ಈ ಮಷೀನ್ ನಾ ಇನ್ನು ಒಂದು ವಿಶೇಷತೆ ಅಂದ್ರೆ ವೆಜ್ (Veg) ಅಥವಾ ನಾನ್ ವೆಜ್ (Nonveg)ಎಂಬುದನ್ನ ತಿಳಿದುಕೊಂಡು ರೆಸಿಪಿ ಗಳನ್ನು ನಿಮ್ಮ ಎದುರಿಗೆ ತೆರೆದಿಡುತ್ತದೆ. ಸದ್ಯ ಪ್ರಾದೇಶಿಕ ತಿಂಡಿಗಳನ್ನು ತಯಾರಿಸುವುದಕ್ಕೆ ಮಾತ್ರ ಎಐ ಮಷೀನ್ ಸಿದ್ಧವಾಗಿಲ್ಲ. ಇದನ್ನು ಓದಿ: Force Gurkha: ಥಾರ್, ಜಿಮ್ನಿಗಳು ಇನ್ನು ಮುಂದೆ ಸೈಡ್ ಲನ್, ಬೆಂಕಿಯಂತಹ ಫೀಚರ್ಸ್ ಹೊತ್ತು ಬರ್ತಿದೆ  ಗೂರ್ಖಾ ಕಾರು!

ಅಡುಗೆ ಮಷೀನ್ ಬೆಲೆ ಎಷ್ಟು?

ಅಂದ ಹಾಗೆ ಎಷ್ಟು ರುಚಿಯಾಗಿರುವ ಅಡುಗೆಯನ್ನೆಲ್ಲ ತಯಾರಿಸಿ ಕೊಡುವ ಈ ಮಷೀನ್ ಬೆಲೆಯೂ ಕೂಡ ಅಷ್ಟೇ ಜಾಸ್ತಿ ಇರಬಹುದು ಅಂತ ಅಂದುಕೊಂಡಿದ್ದರೆ ತಪ್ಪು. ಕಂಪನಿ ಈಗಷ್ಟೇ ಈ ಮಷೀನ್ ತಯಾರಿಸಿದ್ದು ಇದಕ್ಕೆ ಈಗ ನಿಗದಿಪಡಿಸಿರುವ ಬೆಲೆ ಕೇವಲ 21,999 ರೂಪಾಯಿಗಳು! ಹಾಗಾದ್ರೆ ಇನ್ಯಾಕೆ ತಡ ಆಫೀಸ್ ಮನೆ ಕೆಲಸ ಅಂತ ತುಂಬಾ ಸುಸ್ತಾಗೋ ಹಾಗಿದ್ದರೆ ಈ ಮಷೀನ್ ಮನೆಗೆ ತಂದು ಒಮ್ಮೆ ಟ್ರೈ ಮಾಡಿ.

Comments are closed.