Tirupati Tirumala: ತಿರುಪತಿ ತಿರುಮಲನಿಗೆ ಮುಡಿ ಕೊಡುವುದಕ್ಕೂ ಇಲ್ಲಿರುವ ನೀಲಾದ್ರಿ ಬೆಟ್ಟಕ್ಕೂ ಇರುವ ಸಂಬಂಧವೇನು ಗೊತ್ತೇ? ಇದೇ ಕಾರಣಕ್ಕಂತೆ ನೋಡಿ ಭಕ್ತಾದಿಗಳು ತಿರುಪತಿಯಲ್ಲಿ ಮುಡಿ ಅರ್ಪಿಸುವುದು

Tirupati Tirumala: ತಿರುಪತಿ ತಿಮ್ಮಪ್ಪನ ಭಕ್ತಾದಿಗಳು ಈ ದೇಶದಲ್ಲಿ ಅದೆಷ್ಟಿದ್ದಾರೋ ಗೊತ್ತಿಲ್ಲ. ದಿನಕ್ಕೆ ತಿರುಪತಿಗೆ ಹೋಗುವ ಭಕ್ತರ ಸಂಖ್ಯೆ ನೋಡಿದರೆ ಅಲ್ಲಿ ಅಚಲವಾಗಿ ನಿಂತಿರುವ ತಿಮ್ಮಪ್ಪನ ಮಹಿಮೆ ಎಷ್ಟು ದೊಡ್ಡದು ಎಂಬುದು ಅರ್ಥವಾಗುತ್ತದೆ. ತಿರುಪತಿಯ ಸಪ್ತಗಿರಿಯಲ್ಲಿ ಶೇಷಾದ್ರಿ ನೀಲಾದ್ರಿ, ಗರುಡಾದ್ರಿ ಹಾಗೂ ಅಂಜನಾದ್ರಿ ಬೆಟ್ಟಗಳನ್ನು ನೀವು ಕಾಣಬಹುದು. ಈ ಬೆಟ್ಟಗಳ ಹಿಂದೆಯೂ ಒಂದೊಂದು ಪೌರಾಣಿಕ ಕಥೆಗಳು ಕೂಡ ಇವೆ.

ಶೇಷಾದ್ರಿ ಬೆಟ್ಟ:

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಾದರೆ ಸಪ್ತಗಿರಿಗಳಲ್ಲಿ ಒಂದಾಗಿರುವ ಶೇಷಾದ್ರಿ ಬೆಟ್ಟವನ್ನು ದಾಟಿಕೊಂಡೆ ಮುಂದೆ ಹೋಗಬೇಕು. ಈ ಬೆಟ್ಟದಲ್ಲಿ ಆದಿಶೇಷ ಅಚಲವಾಗಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತೆ. ಇಲ್ಲಿ ಆದಿಶೇಷ ನೆಲೆಯೂರಿರುವುದು ಒಂದು ಕಾರಣವಿದೆ. ಒಮ್ಮೆ ವಾಯುದೇವ, ಆದಿಶೇಷನಿಗಿಂತ ತಾನೇ ಬಲಶಾಲಿ ಎಂದು ಭಾವಿಸಿ ಮಲಗಿದ್ದ ಆದಿಶೇಷನನ್ನು ಎಬ್ಬಿಸಲು ಪ್ರಯತ್ನಿಸುತ್ತಾನೆ. ಅದಕ್ಕಾಗಿ ಬಲವಾಗಿ ಗಾಳಿ ಬೀಸುತ್ತಾನೆ ಗಾಳಿ ಬೀಸಿದ ದಿಕ್ಕಿಗೆ ನೋಡಿದ ಆದಿಶೇಷ ಏನಿದು ಇಷ್ಟು ಬಲವಾಗಿ ಗಾಳಿ ಬರುತ್ತಿದೆಯಲ್ಲ ಎಂದು ಎದ್ದು ನೋಡುತ್ತಾನೆ ಆದರೆ ವಾಯು ಮಾತ್ರ ತನ್ನ ಗಾಳಿಯ ಪ್ರಭಾವ ತಡೆಯಲು ಸಾಧ್ಯವಾಗದೆ ಅದಿಶೇಷ ಎದ್ದು ಕುಳಿತಿದ್ದಾನೆ ಎಂದು ಭಾವಿಸುತ್ತೇನೆ. ಇದರಿಂದ ಆದಿಶೇಷನಿಗೆ ಬೇಸರವಾಗುತ್ತದೆ. ನಂತರ ಈ ಎಲ್ಲವನ್ನು ನೋಡುತ್ತಿದ್ದ ತಿರುಪತಿ ತಿಮ್ಮಪ್ಪ ನೀನು ನನ್ನ ಆವಾಸಸ್ಥಾನದಲ್ಲಿಯೇ ನನ್ನ ಜೊತೆಗೆ ನೆಲೆಸು ನನ್ನನ್ನು ನೋಡಲು ಬರುವ ಪ್ರತಿಯೊಬ್ಬ ಭಕ್ತರು ನಿನ್ನನ್ನು ಮೊದಲು ನೋಡುವಂತಾಗಲಿ ಎಂದು ಹರಸುತ್ತಾನೆ. ಹೀಗಾಗಿ ಶೇಷಾದ್ರಿ ಬೆಟ್ಟ ಎನ್ನುವ ಹೆಸರನ್ನು ಈ ಬೆಟ್ಟಕ್ಕೆ ನೀಡಲಾಗಿದೆ.

ತಿರುಪತಿಯಲ್ಲಿ ಮುಡಿ ಕೊಡುವುದು ಯಾಕೆ ಗೊತ್ತಾ?

ತಿರುಪತಿಗೆ ಹೋದರೆ ನೀಲಾದ್ರಿ ಬೆಟ್ಟವನ್ನು ಕಣ್ಣು ತುಂಬಿಸಿಕೊಳ್ಳಬಹುದು. ನೀಲಾದ್ರಿ ಅಥವಾ ನೀಲಾಂಬರಿ ಎನ್ನುವ ಭಕ್ತೆ ಒಬ್ಬಳು ತಿರುಪತಿಗೆ ಕೂದಲನ್ನು ಅರ್ಪಿಸುತ್ತಾಳೆ. ಅದೇ ರೀತಿ ಒಬ್ಬ ವ್ಯಕ್ತಿ ತನ್ನ ಅಹಂಕಾರ, ಸ್ವಯಂ ಪ್ರತಿಷ್ಠೆ ಎಲ್ಲವನ್ನು ಸ್ವಾಮಿಯ ಪಾದಾರವಿಂದಗಳಿಗೆ ಕೊಟ್ಟು ತಿರುಪತಿಯ ಅತಿ ದೊಡ್ಡ ಭಕ್ತ ಎನಿಸಿಕೊಳ್ಳುತ್ತಾನೆ. ಹಾಗಾಗಿ ಈ ಬೆಟ್ಟಕ್ಕೆ ನೀಲಾದ್ರಿಯನ್ನುವ ಹೆಸರು ಬಂದಿದೆ.

ಅಂಜನಾದ್ರಿ ಬೆಟ್ಟ:

ಅಂಜನಾದೇವಿ ಮದುವೆಯಾಗಿ ಅದೆಷ್ಟು ಕಾಲ ಮಕ್ಕಳಾಗದೆ ಪರಿತಪಿಸುತ್ತಾಳೆ. ಆಗ ಇದೇ ಬಟ್ಟೆ ಬೆಟ್ಟಕ್ಕೆ ಬಂದು ತಪಸ್ಸು ಮಾಡುತ್ತಾಳೆ. ಇದನ್ನು ನೋಡಿದ ಮಹಾವಿಷ್ಣು ಆಕೆಯ ತಪಸ್ಸಿಗೆ ಮೆಚ್ಚಿ ಅಂಜನಾದ್ರಿ ಬೆಟ್ಟದಲ್ಲಿಯೇ ಆಕೆಗೆ ಗರ್ಭ ಫಲವನ್ನು ನೀಡುತ್ತಾನೆ. ನಂತರ ಅಂಜನಾದೇವಿ ಆಂಜನೇಯನಿಗೆ ಜನ್ಮ ನೀಡುತ್ತಾಳೆ. ಅಂಜನಾದೇವಿ ಈ ಬೆಟ್ಟದಲ್ಲಿ ತಪಸ್ಸು ಮಾಡಿರುವ ಕಾರಣ ಈ ಬೆಟ್ಟಕ್ಕೆ ಅಂಜನಾದ್ರಿ ಎಂದು ಕರೆಯಲಾಗುತ್ತದೆ.

ಗರುಡಾದ್ರಿ ಬೆಟ್ಟ:

ವಿಷ್ಣುವಿನ ವಾಹನ ಗರುಡ ತನ್ನ ಶತ್ರು ಕುದ್ರುವಿನ ಮಕ್ಕಳನ್ನು ಸಂಹಾರ ಮಾಡುತ್ತಾನೆ ನಂತರ ಪಶ್ಚಾತಾಪ ಪಟ್ಟುಕೊಂಡ ಗರುಡ ಮೋಕ್ಷಕ್ಕಾಗಿ ಈ ಜಾಗದಲ್ಲಿ ಬಂದು ತಪಸ್ಸು ಮಾಡುತ್ತಾನೆ ಭಗವಾನ್ ಮಹಾವಿಷ್ಣು ಆತನಿಗೆ ಮೋಕ್ಷವನ್ನು ದಯಪಾಲಿಸಿ. ಈ ಶಿಖರದಲ್ಲಿ ನನ್ನ ಜೊತೆ ನೀನು ನೆಲೆಸು ಎಂದು ವರ ಕೊಡುತ್ತಾನೆ ಇದರಿಂದ ಈ ಬೆಟ್ಟವನ್ನು ಗರುಡಾದ್ರಿ ಬೆಟ್ಟ ಎಂದು ಕರೆಯಲಾಗುತ್ತೆ.

Comments are closed.