Virat Kohli First Car: ಶ್ರೇಷ್ಠ ಕ್ರಿಕೆಟರ್ ವಿರಾಟ್ ಕೊಯ್ಲಿ ಮೊದಲ ಕಾರು ಯಾವುದು ಗೊತ್ತಾ? ಕಾರ್ ಹಿಂದಿನ ಅಪರೂಪದ ಘಟನೆ ತೆರೆದಿಟ್ಟ ಕೊಯ್ಲಿ!

Virat Kohli First Car: ವಿರಾಟ್ ಕೋಹ್ಲಿಗೆ ಕಾರುಗಳ ಮೇಲೆ ಕ್ರೇಜ್ (Craze) ಇರುವುದು ಎಲ್ಲರಿಗೂ ಗೊತ್ತಿರುವ ಸುದ್ದಿಯೇ. ಪ್ರಸ್ತುತ ಅವರು ಔಡಿ ಇಂಡಿಯಾ (Audi India) ದ ಭಾರತದ ಬ್ರಾಂಡ್ ಅಂಬಾಸೇಡರ್ (brand ambassador) ಕೂಡ ಆಗಿದ್ದಾರೆ. ಅವರ ಬಳಿ ಎಸ್.ಯು.ವಿ ಮತ್ತು ಲಕ್ಸುರಿ ಕಾರುಗಳ ಕಲೆಕ್ಷನ್ ಇದೆ. ಇದರಲ್ಲಿ ಔಡಿ ಕಂಯ ಹಲವಾರು ಕಾರುಗಳು ಇವೆ. ಇದರ ಜೊತೆಗೆ ರೇಂಜ್ ರೋವರ್ ವೋಗ್, ಟೊಯೋಟಾ ಫಾರ್ಚುನರ್ (Toyota Fortuner)  ಮತ್ತು ರೆನೋ ಡಸ್ಟರ್ ಕೂಡ ಇದೆ. ದೆಹಲಿಯ ಅವರ ಮನೆಯಲ್ಲಿ ಬೆಂಟ್ಲಿಯ ಕಾಂಟಿನೆಂಟಲ್ ಜಿ.ಟಿ ಇದ್ದು ಇತ್ತೀಚೆಗೆ ಅವರು ಮುಂಬೈಗೆ ಶಿಫ್ಟ್ ಆದ ಮೇಲೆ ಅವರು ಮತ್ತು ಅನುಷ್ಕಾ ಶರ್ಮಾ ಬೆಂಟ್ಲಿಯ ಕಾರಿನಲ್ಲಿ ನೋಡಲಾಗಿತ್ತು. ಫ್ಲೈಯಿಂಗ್ ಸ್ಪುರ್ ನ ಬೆಲೆ ಸುಮಾರು 3.41 ಕೋಟಿಯಿಂದ 3.93 ಕೋಟೀಯ ತನಕ ಇದೆ. ಇದನ್ನೂ ಓದಿ: Force Gurkha: ಥಾರ್, ಜಿಮ್ನಿಗಳು ಇನ್ನು ಮುಂದೆ ಸೈಡ್ ಲನ್, ಬೆಂಕಿಯಂತಹ ಫೀಚರ್ಸ್ ಹೊತ್ತು ಬರ್ತಿದೆ  ಗೂರ್ಖಾ ಕಾರು!

ಕೋಹ್ಲಿ ಭಾರತದ ಓರ್ವ ಸಕ್ಸಸ್ ಫುಲ್ ಬ್ಯಾಟ್ಸ್ ಮನ್ ಹಾಗೂ ಹಲವಾರು ದಾಖಲೆಗಳನ್ನೂ ಹೊಂದಿದ್ದಾರೆ. ಅವರ ಈ ಕೆರಿಯರ್ ನಲ್ಲಿ ಅವರು ಹಲವಾರು ಬ್ರಾಂಡ್ ಗಳ ಅಂಬಾಸೇಡರ್ ಆಗಿಯೂ ಇದ್ದರು. ಈಗ ಅವರ ಬಳಿ ಇಂತಹ ಲಕ್ಸುರಿ ಕಾರುಗಳ ಕಲೆಕ್ಷನ್ ಇರುವುದು ಅಚ್ಚರಿಯ ವಿಚಾರವೇನಲ್ಲ. ಆದರೆ ಕೋಹ್ಲಿ ಖರೀದಿಸಿದ ಮೊದಲ ಕಾರು ಯಾವುದು ಮತ್ತು ಆ ಕಾರನ್ನೇ ಏಕೆ ಖರೀದಿಸಿದ್ದರು ನಿಮಗೆ ತಿಳಿದಿದೆಯೇ?

ಕೋಹ್ಲಿಯ ಮೊದಲ ಕಾರು (Kohli First Car):

ಕೋಹ್ಲಿ ಮೊದಲ ಕಾರು ಟಾಟಾ ಸಫಾರಿ ಡೈಕೋರ್ (Tata Safari Dicor)  ಆಗಿತ್ತು. ತಮ್ಮ ಕಾರಿನ ಆಯ್ಕೆಯ ಬಗ್ಗೆ ಬಹಳ ಪರ್ಟಿಕ್ಯುಲರ್ ಆಗಿದ್ದ ಕೋಹ್ಲಿ ಲಾಡರ್ ಆನ್ ಫ್ರೇಮ್ ಬಿಲ್ಟ್ ನ ಕಾರಣದಿಂದಾಗಿ ನಾರ್ಮಲ್ ಸಫಾರಿಯನ್ನು ಆಯ್ಕೆ ಮಾಡದೇ ಸಫಾರಿ ಡೈಕೋರ್ ಅನ್ನು ಆಯ್ಕೆ ಮಾಡಿದ್ದರು. ಇದರ ರೋಡ್ ಪ್ರಸೆನ್ಸ್ ಕೂಡ ಅವರಿಗೆ ಬಹಳ ಇಷ್ಟವಾಗಿತ್ತು. ಇದರ ಜೊತೆಗೆ ಕಾರು ನೀಡುತ್ತಿದ್ದ ಜಾಗ ಮತ್ತು ಕಂಫರ್ಟ್ ಅವರಿಗೆ ಬಹಳ ಮೆಚ್ಚುಗೆಯಾಗಿತ್ತು.

ಟಾಟಾ ಗೂ ಮಹತ್ವವಾಗಿತ್ತು ಸಫಾರಿಯ ಸಕ್ಸಸ್

ಕೇವಲ ಕೋಹ್ಲಿಯ ಜೀವನದಲ್ಲಷ್ಟೇ ಅಲ್ಲದೇ ಟಾಟಾ ದ ಆಟೋಮೊಬೈಲ್ ಇತಿಹಾಸದಲ್ಲೂ ಸಫಾರಿ ಪ್ರಮುಖ ಸ್ಥಾನವನ್ನು ಹೊಂದಿದೆ. 1990 ರ ದಶಕದಲ್ಲಿ ಬಂದ ಸಫಾರಿ ಏಳು ಸೀಟುಗಳ ಕಾರುಗಳ ಸರಣಿಯಲ್ಲಿ ಪ್ರಖ್ಯಾತ ಮತ್ತು ಯಶಸ್ವಿ ಮಾಡೆಲ್ ಆಗಿತ್ತು. ಆ ಸಮಯದಲ್ಲಿದ್ದ ಟಾಟಾ ಸುಮೋ ಮತ್ತು ಟಾಟಾ ಸಿಯೆರಾ ಗೆ ಹೋಲಿಸಿದರೆ ಇದರ ಲುಕ್ಸ್, ಫೀಚರ್ಸ್ ಮತ್ತು ರೋಡ್ ಪ್ರಸೆನ್ಸ್ ಬೇರೆಯೇ ಆಗಿತ್ತು. ಈ ಮಾಡೆಲ್ ಸುಮಾರು ಎರಡು ದಶಕಗಳ ತನಕ ಸೇಲ್ ನಲ್ಲಿತ್ತು. ಇದನ್ನು ಓದಿ: Smart Cooking Machine: ನಾನ್ ವೆಜ್ ಅಡುಗೆಯನ್ನು ಮಾಡುತ್ತೆ ಈ ಮಷೀನ್; ಗಂಡಸರಿಗೆ ಇನ್ನು ಮುಂದೆ ಇಲ್ಲ ಟೆನ್ಶನ್!! ಅತೀ ಕಡಿಮೆ ಬೆಲೆ

Comments are closed.