Ola S1 Pro: ಸಮುದ್ರದಲ್ಲೂ ಓಡುತ್ತಾ Ola S1 Pro ಈವಿ ಸ್ಕೂಟರ್; ಪರೀಕ್ಷಿಸಿದ ರೈಡರ್ ಕೊಟ್ಟ ಅಂಕವೆಷ್ಟು ಗೊತ್ತಾ? ಅಬ್ಬಾ ಸೂಪರ್ ಕಣ್ರಿ!

Ola S1 Pro: ಎಲೆಕ್ಟ್ರಿಕ್ ಸ್ಕೂಟರ್ಸ್ (Electric scooter)  ಆರಂಭವಾದಾಗಿನಿಂದ ಹಲವಾರು ಕಂಪನಿಗಳ ಸ್ಕೂಟರ್ಸ್ ಗಳು ಲಾಂಚ್ ಆಗಿವೆ. ಒಂದಕ್ಕಿಂತ ಒಂದು ಹೇಗೆ ಉತ್ತಮ ಎಂದು ಎಲ್ಲರೂ ಹೇಳುತ್ತಾ ಬರುತ್ತಿದ್ದಾರೆ. ಹಲವಾರು ಸಣ್ಣ ಕಂಪನಿಗಳ ಜೊತೆಗೆ ದೊಡ್ಡದಾಗಿ ಹೆಸರು ಮಾಡಿದ ಕಂಪನಿಗಳಲ್ಲಿ ಒಂದು ಓಲಾ. ಮೊದಲು ಕ್ಯಾಬ್ ಗಳಿಂದ ಹೆಸರುವಾಸಿಯಾದ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಫೀಲ್ಡ್ ಗೆ ಇಳಿದಾಗ ಸ್ಕೂಟರ್ ಗಳು ಬಹಳ ಬೇಗನೇ ಬುಕ್ ಆಗಿದ್ದವು.

ಓಲಾ ತನ್ನ ಮೊದಲ ಸ್ಕೂಟರ್ ಎಸ್. – 1 ಪ್ರೋ (Ola S1 Pro) ಲಾಂಚ್ ಮಾಡಿದ ಮೇಲೆ ಅದರ ಬಗ್ಗೆ ಪಾಸಿಟಿವ್ ಮತ್ತು ನೆಗೆಟಿವ್ ಕಮೆಂಟ್ ಗಳು ಸಾಕಷ್ಟು ಬಂದಿದ್ದವು. ಓಲಾ ಕಂಪನಿಯೂ (Ola company) ಸಾಕಷ್ಟು ಸುಧಾರಣೆ ಮಾಡಿಕೊಂಡು ನೆಗೆಟಿವ್ (negative) ಗಳನ್ನೆಲ್ಲಾ ಕಡಿಮೆ ಮಾಡಿಕೊಂಡು ಬಂದಿತ್ತು.

ಸಮುದ್ರದಲ್ಲಿ ಟೆಸ್ಟ್ ಮಾಡಲಾದ Ola S1 Pro ಸ್ಕೂಟರ್

ಈಗ ಸುಧಾರಣೆಗಳ ನಂತರ ಓಲಾವನ್ನು ರೀಯಲ್ ಲೈಫ್ ಕಂಡೀಷನ್ ನಲ್ಲಿ ಟೆಸ್ಟ್ ಮಾಡುತ್ತಾ ಸಮುದ್ರಕ್ಕೆ ತೆಗೆದುಕೊಂಡು ಹೋಗಲಾಗಿತ್ತು ಸ್ಕೂಟರ್ ಮುಳುಗುವಷ್ಟು ನೀರಿನ ಆಳಕ್ಕೆ ಸ್ಕೂಟರ್ ಅನ್ನು ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿಂದ ಸ್ಕೂಟರ್ ಅನ್ನು ತಿರುಗಿಸಿ ವಾಪಸ್ ತೆಗೆದುಕೊಂಡು ಬರಲಾಗಿತ್ತು ನೀರಿನಲ್ಲಿ ಸಂಪೂರ್ಣ ಮುಳುಗಿದ ಸ್ಕೂಟರ್ ವಾಪಸ್ ಬಂದಾಗಲೂ ಅದೇ ತರಹ ಕೆಲಸ ಮಾಡುತ್ತಿತ್ತು. ಹಾರ್ನ್, ಇಂಡಿಕೇಟರ್ಸ್ ಅದರ ಬಝರ್ಸ್ ಎಲ್ಲವೂ ಸರಿಯಾಗಿತ್ತು. ನೀರಿನಲ್ಲಿ ಮುಳುಗಿಸಿದ ಮೇಲೂ ಸರಿಯಾಗಿ ಕೆಲಸ ಮಾಡುವ ಓಲಾ ಎಸ್.1 ಪ್ರೋ ಸ್ಕೂಟರ್ ನಲ್ಲಿ ಏನೆನೆಲ್ಲಾ ಇದೆ ನೋಡೋಣ.

ಎಂಜಿನ್, ಪವರ್ ಮತ್ತು ರೇಂಜ್

ಓಲಾ ಏಸ್.1 ಪ್ರೋ 121 ಕೆ.ಜಿ ತೂಕ ಇರುವ ಸ್ಕೂಟರ್ ಆಗಿದ್ದು 1859 ಎಮ್.ಎಮ್ ಉದ್ದ ಇದೆ. 165 ಎಮ್.ಎಮ್. ಗ್ರೌಂಡ್ ಕ್ಲಿಯರೆನ್ಸ್ ಇದೆ. ಇದರ ಮೋಟರ್ ಪವರ್ 8500 ವ್ಯಾಟ್ ಇದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಲು 6 ಗಂಟೆ 30 ನಿಮಿಷ ತೆಗೆದುಕೊಳ್ಳುವ ಈ ಸ್ಕೂಟರ್ ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 181 ಕಿ.ಮೀ ತನಕ ಓಡುತ್ತದೆ. ಕಂಪನಿಯು ಕ್ಲೈಮ್ ಮಾಡುವ ಇದರ ಟಾಪ್ ಸ್ಪೀಡ್ ಗಂಟೆಗೆ 116 ಕೀಮೀ ಆಗಿದೆ. ಫಾಸ್ಟ್ ಚಾರ್ಜಿಂಗ್ ಅನ್ನೂ ಈ ಸ್ಕೂಟರ್ ಹೊಂದಿದೆ. ಟ್ಯೂಬ್ ಲೆಸ್ ಟಯರ್ಸ್ ಜೊತೆಗೆ ಬರುವ ಈ ಸ್ಕೂಟರ್ ಬ್ರೇಕಿಂಗ್ ಗಾಗಿ ಡಿಸ್ಕ್ ಬ್ರೇಕ್ ಗಳನ್ನು ಒದಗಿಸಿದೆ ಮತ್ತು ಕಂಬೈಂಡ್ ಬ್ರೇಕಿಂಗ್ ಸಿಸ್ಟಮ್ ನೀಡಲಾಗಿದೆ.

ಫೀಚರ್ಸ್:

ರಿಮೋಟ್ ಮತ್ತು ಪುಷ್ ಬಟನ್ ಸ್ಟಾರ್ಟ್ ಜೊತೆಗೆ ಈ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದು. ಡಿಜಿಟಲ್ ಸ್ಪೀಡೋ ಮೀಟರ್ ಜೊತೆಗೆ ಡಿಜಿಟಲ್ ಕನ್ಸೋಲ್ ಅನ್ನು ಓಲಾ ಎಸ್.1 ಹೊಂದಿದೆ. ನಾರ್ಮಲ್, ಹೈಪರ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ಡ್ರೈವ್ ಮೋಡ್ ಗಳನ್ನು ಈ ಸ್ಕೂಟರ್ ಹೊಂದಿದೆ. ರಿಮೋಟ್ ಬೂಟ್ ಅನ್ ಲಾಕ್ ಆಯ್ಕೆ ಕೂಡ ಈ ಸ್ಕೂಟರ್ ನಲ್ಲಿದೆ.

Comments are closed.