Heart Attack: ಮಹಿಳೆಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ನಿಜವಾದ ಕಾರಣ ಏನು ಗೊತ್ತಾ? ಚಿಕ್ಕ ವಯಸ್ಸಿನವರಲ್ಲೇ ಜಾಸ್ತಿ; ಇದಕ್ಕೆ ಕೋವಿಡ್ ಕೂಡ ಕಾರಣಾನಾ?

Heart Attack: ನಮ್ಮ ದೇಶದಲ್ಲಿ ಅಕಾಲಿಕ ಮರಣ ಎನ್ನುವುದು ಜಾಸ್ತಿ ಆಗುತ್ತಿದೆ ಅದರಲ್ಲೂ ಇದಕ್ಕೆ ಮುಖ್ಯವಾದ ಕಾರಣ ಹೃದಯಾಘಾತ (Heart Attack) ಎನ್ನುವುದು ನಿಜಕ್ಕೂ ಆತಂಕಕಾರಿ ವಿಷಯ. ಇವರಿಗೆ ಹೃದಯಘಾತ ಅನ್ನುವುದು ಸಾಮಾನ್ಯವಾಗಿ ಗಂಡಸರಲ್ಲಿ (Men) ಸಂಭವಿಸುತ್ತದೆ ಹಾಗೂ ವಯಸ್ಸಾದವರಲ್ಲಿ ಸಂಭವಿಸುತ್ತದೆ ಎನ್ನುವ ನಂಬಿಕೆ ಇತ್ತು ಆದರೆ ಕಳೆದ ಹತ್ತು ವರ್ಷಗಳಲ್ಲಿ ಯುವ ವಯಸ್ಸಿನವರಲ್ಲಿ ಅದರಲ್ಲೂ ಮಹಿಳೆಯರಲ್ಲಿ (Women) ಹೃದಯಾಘಾತದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನು ಓದಿ: Mutual Fund SIP: ಬ್ಯಾಂಕ್ ಗಳಲ್ಲಿ ಎಷ್ಟೇ ಹಣ ಇಟ್ಟರು ಉತ್ತಮ ಬಡ್ಡಿ ಸಿಗುತ್ತಿಲ್ಲವೇ? ಹಾಗಾದ್ರೆ ಈ ಯೋಜನೆ ಟ್ರೈ ಮಾಡಿ, ಹಣ ದುಪ್ಪಟ್ಟಾಗೋದು ಗ್ಯಾರಂಟಿ!

ಮಹಿಳೆಯರಲ್ಲಿ ಹೃದ್ರೋಗ ಪತ್ತೆ ಆಗುವುದಿಲ್ಲ!

15 ರಿಂದ 49 ವಯಸ್ಸಿನ ಮಹಿಳೆಯರಲ್ಲಿ ರೋಗ ನಿರ್ಣಯ ಮಾಡದೆ ಇರುವಂತಹ ಅಧಿಕ ರಕ್ತದೊತ್ತಡದ (BP) ಹರಡುವಿಕೆ ನಮ್ಮ ದೇಶದಲ್ಲಿ 18.69% ನಷ್ಟಿದೆ. ಅಂತರಾಷ್ಟ್ರೀಯ ಅಧ್ಯಯನದ (International study) ಪ್ರಕಾರ ಸ್ತನ ಕ್ಯಾನ್ಸರ್ (Breast Cancer) ಗಿಂತಲೂ 10 ಪಟ್ಟು ಹೆಚ್ಚಿನ ಸಾವು ರದ್ರೋಗದಿಂದ ಮಹಿಳೆಯರಲ್ಲಿ ಸಂಭವಿಸುತ್ತಿದೆ. ಮಹಿಳೆಯರು ತಮ್ಮ ಪ್ರೀತಿ ಪಾತ್ರರ ಯೋಗಕ್ಷೇಮಗಲ್ಲಿಯೇ ದಿನವನ್ನು ಕಳೆಯುತ್ತಾರೆ ಹಾಗಾಗಿ ತಮ್ಮ ಸ್ವಂತ ಅಗತ್ಯಗಳ ಬಗ್ಗೆ ಆರೋಗ್ಯ (Health) ದ ಬಗ್ಗೆ ಗಮನ ಕೊಡುವುದಿಲ್ಲ. ಸಾಕಷ್ಟು ಬಾರಿ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡರು ಅದು ಹೃದಯದ ಸಮಸ್ಯೆ ಆಗಿರಬಹುದು ಎಂಬುದನ್ನು ಮನಗಾಣದೆ ತಮ್ಮ ಕೆಲಸದಲ್ಲಿಯೇ ಮಗನರಾಗಿರುತ್ತಾರೆ. ಈ ಕಾರಣಕ್ಕೆ ಹೃದಯ ಸಮಸ್ಯೆ ಬಂದರು ಮಹಿಳೆಯರು ಹೇಳಿಕೊಳ್ಳುವುದಿಲ್ಲ.

ವಿಭಿನ್ನವಾದ ಲಕ್ಷಣ

ಪುರುಷರಲ್ಲಿ ಸಂಭವಿಸುವ ಹೃದಯಾಘಾತಕ್ಕೂ ಹೆಣ್ಣು ಮಕ್ಕಳಲ್ಲಿ ಸಂಭವಿಸುವ ಹೃದಯಾಘಾತಕ್ಕೂ ಬಹಳ ವ್ಯತ್ಯಾಸವಿದೆ. ಪುರುಷರಲ್ಲಿ ಸಾಮಾನ್ಯವಾಗಿ ಹಠಾತ್ ಎದೆ ನೋವು ಶುರುವಾಗುತ್ತದೆ ಸಿಕ್ಕಾಪಟ್ಟೆ ಬೆವರುತ್ತಾರೆ. ಆದರೆ ಮಹಿಳೆಯರಲ್ಲಿ ಹೃದಯ ರೋಗದ ಲಕ್ಷಣ ಗುರುತಿಸುವುದು ಕಷ್ಟವಾಗಿರುತ್ತದೆ. ಬಹಳ ಸೌಮ್ಯವಾದ ಎದೆನೋವಿರುತ್ತದೆ. ಹಾಗಾಗಿ ಮಹಿಳೆಯರು ಈ ವಿಷಯದಲ್ಲಿ ಆತಂಕ ಪಟ್ಟುಕೊಳ್ಳುವುದಿಲ್ಲ. ಇದನ್ನೂ ಓದಿ: Spandana: ಬ್ಯಾಂಕಾಕ್ ಪ್ರವಾಸದಲ್ಲಿದ್ದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ಹಠಾತ್ ನಿಧನ!

ಯಾವ ವಯಸ್ಸಿನ ಮಹಿಳೆಯರಲ್ಲಿ ಹೃದಯಘಾತ ಆಗುತ್ತೆ ಗೊತ್ತಾ

45 ರಿಂದ 55 ವರ್ಷ ವಯಸ್ಸಿನ ಮಹಿಳೆಯರಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆ ಆಗುತ್ತೆ ಋತುಬಂಧ ಉಂಟಾದ ಮೇಲೆ ಕುಟುಂಬದ ಅತಿಯಾದ ಒತ್ತಡದ ಕೆಲಸ ದೈಹಿಕ ಚಟುವಟಿಕೆಯ ಕೊರತೆ ಈ ಎಲ್ಲವೂ ಹೃದಯಘಾತ ಹೆಚ್ಚಾಗುವಂತೆ ಮಾಡುತ್ತದೆ.

ಹೃದಯಘಾತ ಆಗದಂತೆ ತಡೆಗಟ್ಟುವುದು ಹೇಗೆ?

  • ಮೊಟ್ಟ ಮೊದಲನೆಯದಾಗಿ ಸಣ್ಣದಾಗಿ ಎದೆ ನೋವು ಕಾಣಿಸಿಕೊಂಡರು ಅದನ್ನ ನಿರ್ಲಕ್ಷ ಮಾಡಬಾರದು.
  • ಒತ್ತಡದ ಬದುಕಿನಿಂದ ದೂರ ಇರಬೇಕು.
  • ಧೂಮಪಾನ ಅಥವಾ ತಂಬಾಕಿನ ಬಳಕೆ ಮಾಡಬಾರದು
  • ಜಂಕ್ ಫುಡ್ ಅಥವಾ ತಂಪಾದ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬಾರದು.
  • ಉತ್ತಮವಾದ ಆರೋಗ್ಯಕರವಾದ ಆಹಾರ ಸೇವಿಸಬೇಕು. ಪ್ರೋಟೀನ್ ಜೀವಸತ್ವಗಳು ಹೆಚ್ಚಾಗಿ ಇರುವಂತಹ ತರಕಾರಿ ಹಣ್ಣುಗಳ ಸೇವನೆ ಮಾಡಬೇಕು.

ತಜ್ಞರು ಏನನ್ನುತ್ತಾರೆ ಗೊತ್ತಾ?

ತಜ್ಞರ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ ಮಹಿಳೆಯರಲ್ಲಿ ಉಂಟಾಗುವ ಹೃದಯಾಘಾತದ ಪ್ರಕರಣ ಶೇಕಡ 30ರಷ್ಟು ಹೆಚ್ಚಾಗಿದೆ. ಇದಕ್ಕೆ ನಾವು ಅನುಸರಿಸುವ ಜೀವನ ಶೈಲಿ ಆಹಾರ ಪದ್ಧತಿ, ಕೌಟುಂಬಿಕ ಆರೋಗ್ಯ ಹಿನ್ನೆಲೆ ಕೂಡ ಕಾರಣವಾಗಿರುತ್ತದೆ. ಅದೇ ರೀತಿ ಕೋವಿಡ್ ನಂತರ ಹೃದಯಾಘಾತ ಪ್ರಕರಣ ಜಾಸ್ತಿ ಆಗುತ್ತಿದೆ ಎನ್ನುವುದನ್ನು ಕೂಡ ವೈದ್ಯರು ಅಲ್ಲಗಳೆಯುವುದಿಲ್ಲ. ಈ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಆಗದೆ ಇರುವಂತೆ ತಡೆಗಟ್ಟಲು ನಾವು ನಮ್ಮ ಜೀವನ ಶೈಲಿಯಲ್ಲಿ ಮಾಡಿಕೊಳ್ಳುವ ಪ್ರಮುಖ ಬದಲಾವಣೆಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಇದನ್ನೂ ಓದಿ: Smart Cooking Machine: ನಾನ್ ವೆಜ್ ಅಡುಗೆಯನ್ನು ಮಾಡುತ್ತೆ ಈ ಮಷೀನ್; ಗಂಡಸರಿಗೆ ಇನ್ನು ಮುಂದೆ ಇಲ್ಲ ಟೆನ್ಶನ್!! ಅತೀ ಕಡಿಮೆ ಬೆಲೆ

Comments are closed.