Kisan Credit Card: ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸಿಗುತ್ತೆ 3 ಲಕ್ಷ ತ್ವರಿತ ಸಾಲ, ಕೇವಲ 4% ಬಡ್ಡಿ, ಬೆಳೆ ವಿಮೆ ಸೌಲಭ್ಯವೂ ಕೂಡ ಸಿಗುತ್ತೆ; ಇಂದೇ ಅರ್ಜಿ ಸಲ್ಲಿಸಿ

Kisan Credit Card: ಕೇಂದ್ರ ಸರ್ಕಾರ (Cemtral Govrnament) ದೇಶದ ಬೆನ್ನೆಲುಬಾಗಿರುವ ರೈತರಿಗೆ (Farmer) ಅನುಕೂಲವಾಗುವ ಹಲವು ಯೋಜನೆ (Scheme) ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಕೂಡ ಒಂದು. ನೀವು ನಿಮ್ಮ ಹತ್ತಿರದ ಬ್ಯಾಂಕ್ (Bank) ಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (Ksan Credut Card) ಪಡೆಯಬಹುದು. ಒಂದು ಅರ್ಜಿ ಸಲ್ಲಿಸುವುದರ ಮೂಲಕ ಹೆಚ್ಚಿನ ದಾಖಲೆಗಳೂ ಇಲ್ಲದೇ ಸುಲಭವಾಗಿ ಸಾಲ ಪಡೆಯಬಹುದು. ಇದನ್ನೂ ಓದಿ:Relationship: ಮದುವೆಯಾದ ಗಂಡಸರಿಗೆ ತಮ್ಮ ಹೆಂಡತಿಗಿಂತ ಬೇರೆ ಹೆಂಗಸರೇ ಸುಂದರವಾಗಿ ಕಾಣಿಸುತ್ತಾರಂತೆ ಯಾಕೆ ಗೊತ್ತಾ? ಇದರ ಹಿಂದೆ ಕೂಡ ಇದೆ ನೋಡಿ ಒಂದು ಲಾಜಿಕ್!

ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನಗಳು

ಕಿಸಾನ್ ಕ್ರೆಡಿಟ್ ಕಾರ್ಡ್ ರೈತರ ಬಳಿ ಇದ್ದರೆ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. ಇದು ಐದು ವರ್ಷದ ಅವಧಿಗೆ ನೀಡಲಾಗುವ ಸಾಲ. ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ ರೈತರಿಗೆ ಅಗತ್ಯವಾದ ಬೀಜಗಳು, ರಸಗೊಬ್ಬರ, ಕೀಟನಾಶಕ ಹಾಗೂ ಕೃಷಿಗೆ ಬೇಕಾಗಿರುವ ಇತರ ಉಪಕರಣಗಳನ್ನು ಖರೀದಿ ಮಾಡಬಹುದು. ರೂಪೇ ಕಾರ್ಡ್ ರೀತಿಯಲ್ಲಿಯೇ ಈ ಕಾರ್ಡ್ ಬಳಸಿಕೊಳ್ಳಬಹುದು ಯಾವುದೇ ಉಪಕರಣ ಖರೀದಿ ಮಾಡುವಾಗ ನಗದು ರೂಪದಲ್ಲಿ ಹಣ ಪಡೆಯಬಹುದು.

ಎಲ್ಲಿ ಸಿಗುತ್ತೆ ಸಾಲ? ಯಾರು ಅರ್ಹರು?

ಯಾವುದೇ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸಿಗುತ್ತದೆ. ಜಮೀನು ಹಿಡುವಳಿದಾರನಿಂದ ಹಿಡಿದು ಜಮೀನಿನಲ್ಲಿ ಉಳುಮೆ ಮಾಡುವವರೆಗೆ ಎಲ್ಲರೂ ಕಿಸಾನ್ ಕ್ರೆಡಿಟ್ ಕಾರ್ಡ್ ನ ಮೂಲಕ ಸಾಲ ಪಡೆದುಕೊಳ್ಳಬಹುದು. ಸಾಲ ನೀಡುವುದಕ್ಕೂ ಮೊದಲು, ರೈತರ ಆದಾಯ ರೈತರ ಬಳಿ ಇರುವ ಜಮೀನಿನ ದಾಖಲೆ ಹಿಂದಿನ ಸಾಲದ ಇತಿಹಾಸ ಎಲ್ಲವನ್ನು ಪರಿಶೀಲಿಸಿ ನಂತರ ಅರ್ಜಿಯನ್ನು ಪರಿಗಣಿಸಲಾಗುತ್ತದೆ.

ಕಿಸಾನ್ ಕ್ರೆಡಿಟ್ ಸಾಲಕ್ಕೆ ಎಷ್ಟು ಬಡ್ಡಿ

ಐದು ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಗಳ ವರೆಗೆ ಸಾಲ ಪಡೆದುಕೊಳ್ಳಬಹುದು ವಾರ್ಷಿಕವಾಗಿ 7% ಬಡ್ಡಿ ಇರುತ್ತದೆ. ಒಂದು ವೇಳೆ ನೀವು ಒಂದು ವರ್ಷದ ಒಳಗೆ ಮೂರು ಲಕ್ಷ ರೂಪಾಯಿಗಳ ಸಾಲವನ್ನು ತೀರಿಸಿದರೆ ನಿಮಗೆ ಕೇವಲ ಶೇಕಡ 4. ಬಡ್ಡಿ ಯಲ್ಲಿ ಈ ಸಾಲ ಸಿಗುತ್ತದೆ. ಅಂದರೆ ಮೂರು ಪ್ರತಿಶತ ಬಡ್ಡಿಯನ್ನು ಕಡಿತಗೊಳಿಸಲಾಗುತ್ತದೆ.

ಸಾಲ ತೆಗೆದುಕೊಳ್ಳಲು ಬೇಕಾಗಿರುವ ದಾಖಲೆಗಳು:

ರೈತರ ಜಮೀನಿನ ಪತ್ರ

ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಡ್ರೈವಿಂಗ್ ಲೈಸೆನ್ಸ್ ಇವುಗಳಲ್ಲಿ ಯಾವುದಾದರೂ ಒಂದು ಗುರುತಿನ ಚೀಟಿ ನೀಡಬೇಕು.

ಸಾಲಕ್ಕೆ ಅರ್ಜಿ ಹಾಕುವುದು ಹೇಗೆ?

ನೀವು ಆನ್ಲೈನ್ ಮೂಲಕ ಹಾಗೂ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಯಾವ ಬ್ಯಾಂಕ್ ನಲ್ಲಿ ಅರ್ಜಿ ಸಲ್ಲಿಸುತ್ತಿರೋ ಆ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಗೆ ಹೋಗಿ KCC ಸಾಲದ ಮೇಲೆ ಕ್ಲಿಕ್ ಮಾಡಿ ಅಲ್ಲಿರುವ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದರೆ ಸಾಲ ಮಂಜೂರಾಗುತ್ತದೆ. ಅದೇ ರೀತಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ನಿಮ್ಮ ಹತ್ತಿರದ ಬ್ಯಾಂಕ್ ಗೆ ಹೋಗಿ ಅಲ್ಲಿಂದಲೇ ಅರ್ಜಿ ನಮೂನೆ ತೆಗೆದುಕೊಂಡು ಅದನ್ನು ಭರ್ತಿ ಮಾಡಿ, ಸಂಬಂಧಪಟ್ಟ ದಾಖಲೆಗಳನ್ನು ನೀಡಿದರೆ ನಿಮಗೆ ತ್ವರಿತವಾಗಿ ಸಾಲ ಮಂಜೂರ್ ಆಗುತ್ತದೆ. ನೀವು ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳಲು ಇಚ್ಚಿಸುತ್ತಿರೋ ಆ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ಕೂಡ ಹೊಂದಿರಬೇಕು.

ಸಾಲದ ಮಿತಿ 5 ವರ್ಷಕ್ಕಿಂತ ಹೆಚ್ಚಾಗಬಹುದು?

ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಸಾಲವನ್ನು ತೆಗೆದುಕೊಂಡು ಮೊದಲೆರಡು ವರ್ಷ ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡಿ ರೈತರ ಕ್ರೆಡಿಟ್ ಸ್ಕೋರ್ ಕೂಡ ಉತ್ತಮವಾಗಿದ್ದರೆ ಮುಂಬರುವ ದಿನಗಳಲ್ಲಿ ಬ್ಯಾಂಕ್ ಅನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐದು ವರ್ಷಕ್ಕಿಂತ ಅವಧಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಈ ರೀತಿಯಾಗಿ ಸುಲಭವಾಗಿ ಸಿಗುವಂತಹ ಸಾಲವನ್ನು ರೈತರು ಪಡೆದುಕೊಂಡು ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Comments are closed.