Eye flu: ಈ 5 ರಾಶಿಯವರಿಗೆ ಕಣ್ಣಿನ ಸೋಂಕು (ಐ ಫ್ಲೂ) ಬರಬಹುದು ಎಚ್ಚರ: ಇಲ್ಲಿದೆ ಜ್ಯೋತಿಷ್ಯ ಪರಿಹಾರ!

Eye flu: ನಮ್ಮ ಜೀವನದಲ್ಲಿ ಏನೇ ನಡೆದರೂ ಅದಕ್ಕೂ ಗ್ರಹ ನಕ್ಷತ್ರಗಳಿಗೂ ಸಂಬಂಧವಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಪ್ರತಿಬಾರಿ ಗ್ರಹಗಳು ತಮ್ಮ ಮತವನ್ನು ಬದಲಾಯಿಸಿದಾಗ 12 ರಾಶಿಗಳ ಮೇಲೆ ಒಂದಲ್ಲ ಒಂದು ಪರಿಣಾಮವನ್ನು ಬೀರುತ್ತವೆ ಈಗ ಎಲ್ಲೆಡೆ ಕಣ್ಣಿನ ಸೋಂಕು ಕಾಣಿಸಿಕೊಳ್ಳುತ್ತಿದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಣ್ಣಿನ ಸೋಂಕು ಅಥವಾ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುವ ರೋಗ ಕೆಲವು ಗ್ರಹಕ್ಕೆ ಸಂಬಂಧಿಸಿದೆ ಆಗಿರುತ್ತದೆ. ಗ್ರಹಗಳ ಪ್ರತಿಕೂಲ ಪರಿಣಾಮದಿಂದಾಗಿ ಇಂತಹ ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ.

ಕಣ್ಣಿನ ಸೋಂಕಿಗೆ ಗ್ರಹಗಳೇ ಕಾರಣ:

ಸಾಮಾನ್ಯವಾಗಿ ಸೂರ್ಯ ಮತ್ತು ಚಂದ್ರರನ್ನು ಕಣ್ಣುಗಳ ಅಂಶವಿರುವ ಗ್ರಹ ಎಂದು ಹೇಳಲಾಗುತ್ತದೆ. ಈ ಎರಡು ಗ್ರಹಗಳು ಕರ್ಕಾಟಕ ರಾಶಿಯಲ್ಲಿ ಇವೆ. ಅದೇ ರೀತಿ ಶುಕ್ರ ಗ್ರಹ ಕೂಡ ಕಣ್ಣಿನ ಮೇಲೆ ಪರಿಣಾಮ ಬೀರುತ್ತಾನೆ. ಮಂಗಳ ನಲ್ಲಿ ನೆಲೆಗೊಂಡಿರುವ ಶುಕ್ರ ಕಣ್ಣಿನ ಜ್ವರಕ್ಕೂ ಕಾರಣವಾಗಬಹುದು. ಈಗಗಳ ಪ್ರತಿಕೂಲ ಪರಿಸ್ಥಿತಿಯಿಂದಾಗಿ ದೇಶಾದ್ಯಂತ ಕಣ್ಣಿನ ಸೋಂಕು ಈಗ ಕಾಣಿಸಿಕೊಳ್ಳುತ್ತಿದೆ.

ರಾಶಿಯವರು ಜಾಗರೂಕರಾಗಿರಬೇಕು

ಚಂದ್ರ ಸೂರ್ಯ ಶುಕ್ರ ಹಾಗೂ ಗುರು ಈ ನಾಲ್ಕು ಗ್ರಹಗಳು  ಬೇರೆ ಬೇರೆ ರಾಶಿಯವರಿಗೆ ಕಣ್ಣಿನ ಸೋಂಕು ಬರಲು ಕಾರಣವಾಗಬಹುದು ಹಾಗಾಗಿ ಸಂಕ್ರಮಣದ ಸಮಯದಲ್ಲಿ ಜಾಗರೂಕರ ಆಗಿರಬೇಕು. ಮುಖ್ಯವಾಗಿ ವೃಷಭ ರಾಶಿ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ ಹಾಗೂ ಮೀನ ರಾಶಿಯವರ ಮೇಲೆ ಕಣ್ಣಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಹಾಗಾಗಿ ಬಹಳ ಮುನ್ನೆಚ್ಚರಿಕೆಯಿಂದ ಇರುವುದು ಒಳ್ಳೆಯದು.

ಕಣ್ಣಿನ ಸೋಂಕು ತಪ್ಪಿಸಿಕೊಳ್ಳಲು ಜ್ಯೋತಿಷ್ಯ ಪರಿಹಾರ

ಸೂರ್ಯನ ಶಕ್ತಿ ನಿಮ್ಮ ಮೇಲೆ ಬೀರುವಂತೆ ಮಾಡಿದರೆ ಈ ಸೋಂಕು ನಿಮಗೆ ತಗುಲದೆ ಇರಬಹುದು. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ ಸೂರ್ಯನಿಗೆ ಪೂಜೆ ಮಾಡಿ ಆದಿತ್ಯ ಹೃದಯದ ಸ್ತೋತ್ರವನ್ನು ಪಡಿಸಬೇಕು.

ಇನ್ನು ಎರಡನೆಯದಾಗಿ ನಿಮ್ಮ ಜಾತಕದ ಎರಡನೆಯ ಹಾಗೂ 12ನೆಯ ಮನೆಯ ಅಧಿಪತಿ ಬಲಗೊಳ್ಳಬೇಕು.

ಶಿವನನು ಆರಾಧಿಸುವುದು ಒಳ್ಳೆಯದು.

ಬೆಳ್ಳಿಯ ಆಭರಣ ಧರಿಸಿದರೆ ಕಣ್ಣಿನ ಸೋಂಕು ಬರುವುದಿಲ್ಲ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಹೋಗಲಾಡಿಸಲು ಪ್ರತಿದಿನ ಚಕ್ಷುಕಿ ವಿದ್ಯಾ ಮಂತ್ರ ಪಠಿಸುವುದು ಒಳ್ಳೆಯದು.

Comments are closed.