Ration Card Correction: ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ; ಹೊಸ ರೇಷನ್ ಕಾರ್ಡ್ ಕೂಡ ಮಾಡಿಸಿಕೊಳ್ಳಬಹುದೇ? ರಾಜ್ಯ ಸರ್ಕಾರದ ಮಹತ್ವದ ಸೂಚನೆ!

Ration Card Correction: ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರ ಅವಕಾಶ ನೀಡಿದೆ, ರಾಜ್ಯ ಸರ್ಕಾರ (State Govrnament)  ಹೊರಡಿಸಿರುವ ಎಲ್ಲಾ ಯೋಜನೆಗಳ ಫಲ ಪಡೆದುಕೊಳ್ಳಲು ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಯೋಜನೆಗಳು ರಾಜ್ಯದ ಬಿಪಿಎಲ್ (BPL) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸಿಗುತ್ತದೆ. ಇನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಏನಾದರೂ ವ್ಯತ್ಯಾಸ ಆಗಬೇಕು ಎಂದಿದ್ದರೆ ಅಂದರೆ ಹೆಸರು ಅಥವಾ ಇತರ ತಿದ್ದುಪಡಿ ಆಗಬೇಕು ಎಂದಿದ್ದರೆ ತಕ್ಷಣವೇ ಮಾಡಿಸಿಕೊಳ್ಳಬಹುದು.

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ತಿದ್ದುಪಡಿ ಮಾಡಲು ಅವಕಾಶ ಇದೆ?

ಹೊಸ ಸದಸ್ಯೆ ಹೆಸರು ಸೇರ್ಪಡೆ

ಹಳೆ ಸದಸ್ಯರ ಹೆಸರನ್ನು ತೆಗೆದುಹಾಕುವುದು

ಹೆಸರು ತಿದ್ದುಪಡಿ

ಕುಟುಂಬದ ಮುಖ್ಯಸ್ಥರ ಬದಲಾವಣೆ

ಫೋನ್ ನಂಬರ್ ತಿದ್ದುಪಡಿ

ವಿಳಾಸ ತಿದ್ದುಪಡಿ

ಫೋಟೋ ಬದಲಾವಣೆ

ಮಾಡಿಕೊಳ್ಳಬಹುದು. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ನೀವು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇನ್ನು ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಕೇವಲ ನಾಲ್ಕು ದಿನಗಳ ಅವಕಾಶ ಮಾತ್ರ ಇದೆ. ಅಂದ್ರೆ ಇಂದಿನಿಂದ ಅಗಸ್ಟ್ 16.2023 ರಿಂದ ಆಗಸ್ಟ್ 19 20183ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.

ಆನ್ಲೈನ್ ನಲ್ಲಿ ತಿದ್ದುಪಡಿ ಮಾಡಬಹುದೇ?

ಸರ್ಕಾರದಿಂದ ಬಂದಿರುವ ಈಗಿನ ಆದೇಶದ ಪ್ರಕಾರ ನೀವು ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಯಾವುದಾದರೂ ಗ್ರಾಮವನ್ನು ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೆಂಟರ್ ಗಳಿಗೆ ಅಥವಾ ಸೇವಾ ಸಿಂಧು ಕೇಂದ್ರಕ್ಕೆ ಹೋಗಿ ನಿಮ್ಮ ಹೆಸರಿನ ತಿದ್ದುಪಡಿ ಮಾಡಿಸಿಕೊಳ್ಳಬೇಕಾಗುತ್ತದೆ. ಈ ದಿನಾಂಕವನ್ನು ಹೊರತುಪಡಿಸಿದರೆ ಮತ್ತೆ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಹಾಗಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳ ಬೇಕಿದ್ರೆ ತಕ್ಷಣವೇ ಮಾಡಿಕೊಳ್ಳಿ.

ಹೊಸದಾಗಿ ಪಡಿತರ ಚೀಟಿ ಮಾಡಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿಲ್ಲ. ಈಗಾಗಲೇ ಇರುವವರ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಿಕೊಂಡ ನಂತರ ಹೊಸ ಪಡಿತರ ಚೀಟಿ ಮಾಡಿಸಿಕೊಳ್ಳಲು ಅವಕಾಶ ನೀಡಬಹುದು.

Comments are closed.