Ration card: ರೇಷನ್ ಕಾರ್ಡ್ ಹೊಂದಿರುವವರು ಸೆಪ್ಟೆಂಬರ್ 30ರ ಒಳಗೆ ಈ ಕೆಲಸ ಮಾಡದೆ ಇದ್ರೆ ಉಚಿತ ಪಡಿತರ ಕೂಡ ಸಿಗೋದಿಲ್ಲ ಎಚ್ಚರ!

Ration card: ರಾಜ್ಯದಲ್ಲಿ ಒಂದರ ಹಿಂದೆ ಒಂದರಂತೆ ಹೊಸ ಹೊಸ ಯೋಜನೆಗಳು (State Government scheme) ಜಾರಿಯಾಗುತ್ತಾ ಇವೆ. ಆದರೆ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ (BPL Card) ಅಥವಾ ಅಂತ್ಯೋದಯ ಕಾರ್ಡ್ (Antyodaya Card) ಇರುವುದು ಕಡ್ಡಾಯ. ಯಾವುದೇ ಉಚಿತ ಅಥವಾ ಸಬ್ಸಿಡಿ ಯೋಜನೆಯ ಲಾಭ ಪಡೆಯಬೇಕು ಅಂದ್ರೆ ಪಡಿತರ ಚೀಟಿ ಹೊಂದಿರುವುದು ಅನಿವಾರ್ಯ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ (Pradhana mantri Garibh kalyan Yojana) ಯೋಜನೆಯ ಅಡಿಯಲ್ಲಿ ಎಲ್ಲಾ ರಾಜ್ಯಗಳ ಬಡವರಿಗೆ ಉಚಿತ ಪಡಿತರವನ್ನು ರೇಷನ್ ಕಾರ್ಡ್ ಹೊಂದಿರುವವರಿಗೆ ಕೊಡಲಾಗುತ್ತೆ ಆದರೆ ನೀವು ಸಪ್ಟೆಂಬರ್ 30ರ ಒಳಗೆ ಇದೊಂದು ಕೆಲಸ ಮಾಡದೆ ಇದ್ದಲ್ಲಿ ಖಂಡಿತವಾಗಿಯೂ ನಿಮಗೆ ಇನ್ನು ಮುಂದೆ ರೇಷನ್ ಸಿಗುವುದಿಲ್ಲ.

ಸೆಪ್ಟೆಂಬರ್ 30ಒಳಗೆ ಲಿಂಕ್ ಮಾಡಿಕೊಳ್ಳಿ:

ಚೀಟಿ ಹೊಂದಿರುವ ಹಾಗೂ ಉಚಿತ ಪಡಿತರ ಪಡೆದುಕೊಳ್ಳುತ್ತಿರುವ ಪ್ರತಿಯೊಬ್ಬರೂ ಕೂಡ ಈ ಅಂಶವನ್ನು ಗಮನಿಸಲೇಬೇಕು. ರಾಜ್ಯ ಸರ್ಕಾರದಿಂದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲಿಗೆ ದುಡ್ಡು ಸಿಗುತ್ತಿದೆ ಆದರೆ ಹಲವರ ಖಾತೆಗೆ ಈ ಹಣ ಬಂದು ಸೇರಿಲ್ಲ. ಮುಖ್ಯವಾಗಿರುವ ಕಾರಣ ಪಡಿತರ ಚೀಟಿ ಅಥವಾ ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಕಾರ್ಡ್ (Aadhar Card link) ಕೂಡ ಲಿಂಕ್ ಆಗದೆ ಇರುವುದು. ಸರ್ಕಾರ ಹೊಸ ಘೋಷಣೆಯೊಂದನ್ನು ಮಾಡಿದ್ದು ಪಡಿತರ ಚೀಟಿ ಹೊಂದಿರುವವರು ಸೆಪ್ಟೆಂಬರ್ 30ರ ಒಳಗೆ ನಿಮ್ಮ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲೇಬೇಕು. ಪಡಿತರ ಕಾರ್ಡ್ ಆಗದೆ ಇದ್ದಲ್ಲಿ ಅಂತಹ ಪಡಿತರ ಚೀಟಿಯನ್ನು ತಕ್ಷಣ ನಿಷ್ಕ್ರಿಯಗೊಳಿಸಲಾಗುವುದು.

ಕೈ ತಪ್ಪಿ ಹೋಗುತ್ತಾ ಉಚಿತ ಪಡಿತರ:

ಸದ್ಯಕ್ಕೆ ಬಿಹಾರ್ ರಾಜ್ಯ ತನ್ನ ಎಲ್ಲಾ ಜಿಲ್ಲಾ ಪೂರೈಕೆ ಕಚೇರಿಗಳಿಗೆ ಆದೇಶ ಹೊರಡಿಸಿದ್ದು ಪಡಿತರ ಚೀಟಿದಾರರು ಆಧಾರ್ ಸೀಡಿಂಗ್ ಮಾಡಿಸಿಕೊಳ್ಳುವುದು ಖಡ್ಡಾಯ ಎಂದು ಹೇಳಿದೆ ಒಂದು ವೇಳೆ ಸೆಪ್ಟೆಂಬರ್ 30ರ ಒಳಗೆ ಆಧಾರ್ ಕಾರ್ಡ್ ಜೊತೆಗೆ ಪಡಿತರ ಚೀಟಿ ಲಿಂಕ್ ಆಗದೆ ಇದ್ದಲ್ಲಿ, ಅಂತ ರೇಷನ್ ಕಾರ್ಡ್ ಅನ್ನು ನಕಲಿ ಎಂದು ಪರಿಗಣಿಸಿ ನಿಷ್ಕ್ರಿಯಗೊಳಿಸಲಾಗುತ್ತದೆ. ಜೊತೆಗೆ ಅಂತಹ ಪಡಿತರ ಚೀಟಿಯನ್ನು ಬ್ಲಾಕ್ ಲಿಸ್ಟ್ ಗೆ ಹಾಕುವುದರಿಂದ ಮತ್ತೆ ಅರ್ಜಿ ಹಾಕಿ ಪಡಿತರ ಪಡೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ನಮ್ಮ ರಾಜ್ಯದಲ್ಲಿಯೂ ಕೂಡ ಪಡಿತರ ಚೀಟಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಹೊಸ ಹೊಸ ರೂಲ್ಸ್ಗಳು ಕೂಡ ಬರುತ್ತಿದ್ದು ಸದ್ಯದಲ್ಲಿಯೇ ಬಿಹಾರದಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮಗಳು ರಾಜ್ಯ ಸರ್ಕಾರ ಕೂಡ ಅನ್ವಯ ಮಾಡುವ ಸಾಧ್ಯತೆ ಇದೆ.

Comments are closed.