Bank Loan: ಬ್ಯಾಂಕ್ ನಲ್ಲಿ ಸಾಲ ಮಾಡಿ ಮರುಪಾವತಿ ಮಾಡಿಲ್ವಾ ಹಾಗಾದ್ರೆ ಮುಂದೆ ಎದುರಾಗಲಿದೆ ದೊಡ್ಡ ಸಮಸ್ಯೆ!

Bank Loan: ಅನಿವಾರ್ಯ ಸಂದರ್ಭದಲ್ಲಿ ಬ್ಯಾಂಕ್ನಿಂದ ಸಾಲ (Bank Loan) ತೆಗೆದುಕೊಳ್ಳುವುದು ಸಾಮಾನ್ಯ ಆದರೆ ಯಾವಾಗ ಸಾಲ ಮರುಪಾವತಿ ಮಾಡಬೇಕು ಆ ಅವಧಿಯಲ್ಲಿ ಮರುಪಾವತಿ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ಹಲವು ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಇತ್ತೀಚೆಗೆ ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಉದ್ಯೋಗ ಮಾಡುವವರು ಕೂಡ ಸಾಕಷ್ಟು ಹಣದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಜನರಿಗೆ ತಮ್ಮ ಆದಾಯದಿಂದ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಕೂಡ ಕಷ್ಟವಾಗುತ್ತಿದೆ ಇಂತಹ ಸಂದರ್ಭದಲ್ಲಿ ಬ್ಯಾಂಕ್ ನಿಂದ ಸಾಲ ತೆಗೆದುಕೊಳ್ಳುವುದು ಸಾಮಾನ್ಯ ಅದರ ಜೊತೆಗೆ ಬ್ಯಾಂಕ್ ಸಾಲವನ್ನು ತೀರಿಸುವಲ್ಲಿಯೂ ಕೂಡ ಪರದಾಡಬೇಕಾಗುತ್ತದೆ. ಇದನ್ನು ಓದಿ: Ration Card Update: 4 ಚಕ್ರದ ವಾಹನ ಇದ್ರೂ ರದ್ದಾಗಲ್ವಾ BPL ಕಾರ್ಡ್; ರಾಜ್ಯದ ಜನತೆಗೆ ಗುಡ್ ನ್ಯೂಸ್ ನೀಡಿದ ಕೆ. ಹೆಚ್ ಮುನಿಯಪ್ಪ!

ಸಾಲ ಮರುಪಾವತಿ ಮಾಡಿ:

ಒಂದು ಬ್ಯಾಂಕ್ ನಲ್ಲಿ ಗೃಹ ಸಾಲ ತೆಗೆದುಕೊಂಡಿದ್ದೀರಿ ಎಂದು ಭಾವಿಸೋಣ. ಆಗ ನೀವು ಪ್ರತಿ ಕಂತುಗಳಿಗೆ ಹಣವನ್ನು ಪಾವತಿ ಮಾಡಬೇಕು. ಆದರೆ ನೀವು ಈ ಹಣವನ್ನು ಪಾವತಿ ಮಾಡದೇ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಸಾಲದ ಮೊದಲ ಎರಡು ಕಂತುಗಳನ್ನು ಪ್ರಾವತಿಸದೆ ಇದ್ದಲ್ಲಿ ಬ್ಯಾಂಕ್ ನಿಮಗೆ ಮೊದಲ ಸಂದೇಶವನ್ನು ಕಳುಹಿಸುತ್ತದೆ ಮೂರನೇ ಕಂತನೂ ಕೂಡ ಪಾವತಿಸಲು ವಿಫಲವಾದರೆ ಬ್ಯಾಂಕ್ ಕಾನೂನಿನ ನೋಟಿಸ್ ಕಳುಹಿಸಬಹುದು. ತದನಂತರ ನೀವು ಹಣ ಪಾವತಿಸಲು ಸಾಧ್ಯವಾಗದೇ ಇದ್ದಲ್ಲಿ ಬ್ಯಾಂಕ್ ನಿಮ್ಮನ್ನು ಡೀಫಾಲ್ಟರ್ ಎಂದು ಘೋಷಿಸುತ್ತದೆ.

ಕ್ರೆಡಿಟ್ ಸ್ಕೋರ್:

ನೀವು ಕಾಲಕಾಲಕ್ಕೆ ಸಾಲ ಮರುಪಾವತಿ ಮಾಡದೆ ಇದ್ದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ (Credit score)  ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಭವಿಷ್ಯದಲ್ಲಿ ಯಾವ ಬ್ಯಾಂಕ್ ನಲ್ಲಿಯೂ ಕೂಡ ಸಾಲ ತೆಗೆದುಕೊಳ್ಳುವುದು ಸುಲಭವಲ್ಲ. ಇದನ್ನು ಓದಿ: Arecanut Rate: ಹಳದಿ ಎಲೆ ರೋಗ ದಿಂದ ತತ್ತರಿಸುತ್ತಿರುವ ಮಲೆನಾಡ ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್: ಹೆಚ್ಚುತ್ತಿದೆ ಅಡಿಕೆ ದರ! ಇಂದಿನ ಧಾರಣೆ ತಿಳಿಯಿರಿ

ಅಡವಿಟ್ಟ ಆಸ್ತಿ:

ಗೃಹ ಸಾಲ ತೆಗೆದುಕೊಳ್ಳುವಾಗ ಭದ್ರತೆಯ ಸಲುವಾಗಿ ಬ್ಯಾಂಕಿನಲ್ಲಿ ಯಾವುದಾದರೂ ಆಸ್ತಿಯನ್ನು ಅಡವಿಟ್ಟಿರಬಹುದು ಅಂತಹ ಆಸ್ತಿ ದಾಖಲೆಯನ್ನು ನೀವು ಸಾಲ ಮರುಪಾವತಿ ಮಾಡದೇ ಇದ್ದರೆ ಹಿಂಪಡೆಯಲು ಸಾಧ್ಯವಿಲ್ಲ.

ಹರಾಜು:

ಸಾಲವನ್ನು ಎರಡು ಅಥವಾ ಮೂರು ಕಂತುಗಳ ನಂತರವೂ ಮರುಪಾವತಿ ಮಾಡದೇ ಇದ್ದಲ್ಲಿ ಬ್ಯಾಂಕ್ ಕಾನೂನಾತ್ಮಕ ಕ್ರಮವನ್ನು ಕೈಗೊಳ್ಳಬಹುದು ಸಾಲಗಾರ ಬ್ಯಾಂಕ್ ನೋಟಿಸ್ ಗಳುಹಿಸಿದ ನಂತರವೂ ಉತ್ತರ ನೀಡದೆ ಇದ್ದಲ್ಲಿ ಆತನಿಂದ ಯಾವುದೇ ರೀತಿಯಾದ ಪ್ರತಿಕ್ರಿಯೆ ಸಿಗದೇ ಇದ್ದಲ್ಲಿ ಬ್ಯಾಂಕ್ ಆತನಿಂದ ಸ್ವಾಧೀನ ಪಡಿಸಿಕೊಂಡ ಆಸ್ತಿ ಮನೆ ಮೊದಲಾದ ವಸ್ತುಗಳನ್ನು ಹರಾಜು ಹಾಕುವ ಹಕ್ಕನ್ನು ಹೊಂದಿರುತ್ತದೆ. ಒಮ್ಮೆ ಹರಾಜು ಹಾಕಿದ ಆಸ್ತಿ ಅಥವಾ ವಸ್ತು ಮತ್ತೆ ಹಿಂಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬ್ಯಾಂಕ್ಗಳಲ್ಲಿ ಸಾಲ ಮಾಡುವುದಕ್ಕಿಂತ ಮೊದಲು ಯೋಚನೆ ಮಾಡಿ ಸಾಲ ಮಾಡಿದ ನಂತರ ಅದನ್ನು ಸರಿಯಾಗಿ ಕಾಲಕಾಲಕ್ಕೆ ತೀರಿಸಿಕೊಂಡು ಹೋಗದೆ ಇದ್ದಲ್ಲಿ ಸಮಸ್ಯೆ ಆಗುವುದು ಗ್ಯಾರಂಟಿ.

Comments are closed.