Vastu tips: ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ರೆ ಈಗಲೇ ಕಿತ್ತು ಬಿಸಾಡಿ, ಇಲ್ಲಾಂದ್ರೆ ಹಣ ಉಳಿಸುವುದು ಹಾಗಿರಲಿ ಸಾಲದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ!

Vastu tips: ನಾವು ಮನೆಯಲ್ಲಿ ಯಾವ ವಸ್ತುವನ್ನು ಇಡುತ್ತೇವೆ ಯಾವ ವಸ್ತುವನ್ನು ಹೇಗೆ ಇಡುತ್ತೀವಿ ಎನ್ನುವುದರ ಆಧಾರದ ಮೇಲೆ ನಮ್ಮ ಹಣಕಾಸಿನ ಪರಿಸ್ಥಿತಿ ಅಥವಾ ಮನೆಯ ಪರಿಸ್ಥಿತಿ ನಿರ್ಧಾರಿತವಾಗಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನೀವು ವಾಸ್ತುಶಾಸ್ತ್ರವನ್ನು ನಂಬುವುದಾದರೆ ಮನೆಯಲ್ಲಿ ಇಂತಹ ಕೆಲವು ವಸ್ತುಗಳನ್ನು ಇಡಬಾರದು ಹಾಗೂ ಅಂತಹ ವಸ್ತುಗಳು ಇದ್ದರೆ ಕೂಡಲೇ ಅದನ್ನು ಸರಿಯಾದ ವ್ಯವಸ್ತೆ ಮಾಡಬೇಕು ಇಲ್ಲವಾದರೆ ಮನೆಯಲ್ಲಿ ಹಣದ ಹರಿವಿಗೆ ಅಡ್ಡಿಯಾಗುತ್ತದೆ ಅಥವಾ ನಿಮ್ಮ ಆರ್ಥಿಕ ಪರಿಸ್ಥಿತಿಯ ಅಧಂಪತನ ಆಗಬಹುದು. ಹಾಗಾದ್ರೆ ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳು ನಿಮ್ಮ ಹಣಕಾಸಿನ ಮೇಲೆ ಪರಿಣಾಮ ಬೀರುವಂಥದ್ದು ಯಾವುದು ಇದೆಯೋ ಅವುಗಳನ್ನು ಮೊದಲು ಮನೆಯಿಂದ ತೆಗೆದು ಹಾಕಿ. ಇದನ್ನೂ ಓದಿ: Political News: ವಿರೋಧ ಪಕ್ಷದ ‘ಇಂಡಿಯಾ’ ಭಣದ ರಾಜಕೀಯ ತಂತ್ರದಲ್ಲಿ ಗೆಲುವು ಸಾಧಿಸುತ್ತಾ ಮೋದಿ ಪಡೆ: ಸಮೀಕ್ಷೆ ಹೇಳಿದ್ದೇನು?

ಸೋರುವ ಟ್ಯಾಪ್ :

ನೀರನ್ನು ಸಂಪತ್ತಿನ ಸಂಕೇತ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ನೀರು ಸೋರಿಕೆ ಆಗುತ್ತಿದ್ದರೆ ಹಣವು ಕೂಡ ಸೋರಿಕೆಯಾಗುತ್ತದೆ ಎಂದು ಹೇಳಲಾಗುತ್ತೆ. ಮನೆಯಲ್ಲಿ ಯಾವುದಾದರು ಟ್ಯಾಪ್, ಡ್ರೈನ್, ಟ್ಯಾಂಕ್ ನಿಂದ ನೀರು ಸದಾ ತೊಟ್ಟಿಕ್ಕುತ್ತಿದ್ದರೆ ಅದು ಮನೆಯಲ್ಲಿ ಹಣಕಾಸಿನ ಹರಿವನ್ನು ಸ್ಥಿರವಾಗಿ ಇಡುವುದಿಲ್ಲ. ಹಾಗಾಗಿ ಇಂತಹ ವಸ್ತುಗಳನ್ನು ಕೂಡಲೇ ಸರಿ ಮಾಡಿಸಿ.

ಅವ್ಯವಸ್ಥೆ

ಲಕ್ಷ್ಮಿ ದೇವಿಗೆ ಸ್ವಚ್ಛವಾಗಿ ಇಲ್ಲದೆ ಇದ್ದರೆ ಇಷ್ಟವಾಗುವುದಿಲ್ಲ. ಹಾಗಾಗಿ ಮನೆಯನ್ನು ಅಸ್ತವ್ಯಸ್ತವಾಗಿ ಇಟ್ಟುಕೊಂಡರೆ ಲಕ್ಷ್ಮಿದೇವಿ ಮನೆಯ ಹತ್ತಿರವು ಸುಳಿಯುವುದಿಲ್ಲ. ಆರ್ಥಿಕ ಸಮೃದ್ಧಿ ಉಂಟಾಗಬೇಕು ಅಂದರೆ ಮನೆ ಸ್ವಚ್ಛವಾಗಿ ಶುದ್ಧವಾಗಿ ಇರುವುದು ಬಹಳ ಮುಖ್ಯ. ಇದನ್ನೂ ಓದಿ: Ration card Correction: ಇದೊಂದು ಕೆಲಸ ಮಾಡದೆ ಇದ್ರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರೋದಿಲ್ಲ: ಆದರೂ ಸರ್ಕಾರ ಕೊಟ್ಟ ಈ ಗುಡ್ ನ್ಯೂಸ್ ಪ್ರಯೋಜನ ಪಡ್ಕೊಳ್ಳಿ!

ಒಡೆದ ಅಥವಾ ನಿಂತು ಹೋದ ಗಡಿಯಾರ

ಗಡಿಯಾರ ಸದಾ ಚಲಿಸುತ್ತಿರಬೇಕು. ಗಂಟೆ ಹೇಗೆ ಚಲಿಸುತ್ತಿದೆಯೋ ಅದೇ ರೀತಿ ನಮ್ಮ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಣೆ ಆಗುತ್ತಾ ಬರಬೇಕು ಆದರೆ ಗಡಿಯಾರವೇ ನಿಂತು ಹೋದರೆ ಹಣದ ಹರಿವು ಕೂಡ ನಿಂತು ಹೋಗಬಹುದು. ಇದನ್ನು ತಡೆಗಟ್ಟಬೇಕು ಅಂದರೆ ಮನೆಯಲ್ಲಿ ಮುರಿದಿರುವ ಅಥವಾ ನಿಂತು ಹೋಗಿರುವ ಗಡಿಯಾರಗಳನ್ನು ಮೊದಲು ಬದಲಾಯಿಸಿ.

ಕನ್ನಡಿಯಲ್ಲಿ ಧೂಳು

ಸಾಮಾನ್ಯವಾಗಿ ಕನ್ನಡಿಯನ್ನು ಸ್ವಚ್ಛಗೊಳಿಸುವ ಅಭ್ಯಾಸ ಯಾರಿಗೂ ಇರುವುದಿಲ್ಲ. ಅದರ ಮೇಲೆ ಸಣ್ಣ ಧೂಳಿನ ಕಣಗಳು ಸದಾ ಕುಳಿತಿರುತ್ತವೆ ಇದು ಹಣಕಾಸಿನ ನಿಶ್ಚಲತೆಯನ್ನು ಪ್ರತಿಬಿಂಬಿಸುತ್ತದೆ. ಕನ್ನಡಿಯಿಂದ ಮುಖ ನೋಡಿಕೊಂಡರೆ ನಿಮ್ಮ ಪ್ರತಿಬಿಂಬ ಹೇಗೆ ಅಚ್ಚಾಗಿ ಕಾಣಿಸುತ್ತದೆಯೋ ಅದೇ ರೀತಿ ಹಣವು ಕೂಡ ನಿಮ್ಮ ಬಳಿ ಹೆಚ್ಚು ಸಂಗ್ರಹವಾಗಬೇಕು ಅಂದರೆ ಮನೆಯಲ್ಲಿ ಇರುವ ಕನ್ನಡಿ ಸ್ವಚ್ಛವಾಗಿರಬೇಕು ಹಾಗೂ ಒಡೆದ ಕನ್ನಡಿಗನು ಇಟ್ಟುಕೊಳ್ಳಬಾರದು.

ಸದಾ ಮುಚ್ಚಿರುವ ಕಿಟಕಿ ಅಥವಾ ಬಾಗಿಲು

ಲಕ್ಷ್ಮಿ ಯಾವ ಮಾರ್ಗದಲ್ಲಿ ಯಾವ ರೀತಿಯಲ್ಲಿ ಬರುತ್ತಾಳೆ ಎಂದು ಹೇಳಲು ಸಾಧ್ಯವಿಲ್ಲ ಕೆಲವರು ಮನೆಯ ಬಾಗಿಲು ಹಾಗೂ ಕಿಟಕಿನ್ನು ಸದಾ ಮುಚ್ಚಿರುತ್ತಾರೆ. ಇದರಿಂದ ಯಾವುದೇ ಹಣದ ಅರಿವು ಮನೆಯೊಳಗೆ ಉಂಟಾಗಲು ಸಾಧ್ಯವಿಲ್ಲ ಆರ್ಥಿಕ ಶಕ್ತಿಯ ಜೊತೆಗೆ ಸಕಾರಾತ್ಮಕ ಶಕ್ತಿಯನ್ನು ಕೂಡ ಇದು ಕುಂಠಿತಗೊಳಿಸುತ್ತದೆ. ಹಾಗಾಗಿ ನಿಮ್ಮ ಮನೆಯಲ್ಲಿ ಮುಚ್ಚಿರುವ ಬಾಗಿಲು ಅಥವಾ ಕೆಟ್ಟಕೆಗಳಿದ್ದರೆ ದಿನಕ್ಕೆ ಒಮ್ಮೆಯಾದರೂ ತೆಗೆಯುವ ಅಭ್ಯಾಸ ಮಾಡಿಕೊಳ್ಳಿ.

ಬಳಸುವ ವಸ್ತುಗಳು ಹಾಗೂ ಮನೆಯ ಯಾವ ಭಾಗದಲ್ಲಿ ಯಾವ ವಸ್ತುವನ್ನು ಇಡುತ್ತೇವೆ ಎಂಬುದು ಕೂಡ ನಮ್ಮ ಹಣಕಾಸಿನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತ ವಾಸ್ತು ಶಾಸ್ತ್ರ. ಹಾಗಾಗಿ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಇರುವ ವಸ್ತುಗಳನ್ನು ಸರಿಯಾಗಿ ಜೋಡಿಸುವುದು ಇವೆಲ್ಲವೂ ಲಕ್ಷ್ಮಿಯನ್ನು ಆಹ್ವಾನ ಮಾಡಲು ಇರುವ ದಾರಿಗಳು. ಹಾಗಾಗಿ ಮನೆಯಲ್ಲಿ ಮಾಡುವಂತಹ ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡರೆ ನಿಮ್ಮ ಆರ್ಥಿಕ ಪರಿಸ್ಥಿತಿ ಸದಾ ಕಾಲಕ್ಕೆ ಸುಧಾರಿಸುತ್ತದೆ. ಇದನ್ನೂ ಓದಿ: SBI FD rate: SBI ಹೆಚ್ಚಿಸಿದೆ ಎಫ್ ಡಿ ಮೇಲಿನ ಬಡ್ಡಿ; ಪಡೆಯಿರಿ 10.10% ವರೆಗಿನ ಬಡ್ಡಿ, ಗಳಿಸಿ ಹೆಚ್ಚು ಲಾಭ!

Comments are closed.