Cylinder Price: ನಂಬಿದ್ರೆ ನಂಬಿ ಬಿಟ್ರೆ ಬಿಡಿ; ಇಲ್ಲಿ ಇನ್ನು ಮುಂದೆ ಸಿಗುತ್ತೆ ಕೇವಲ 428ರೂ. ಗಳಿಗೆ ಎಲ್ ಪಿ ಜಿ ಸಿಲೆಂಡರ್!

Cylinder Price: ಹಣದುಬ್ಬರದಿಂದ ದೇಶಾದ್ಯಂತ ಜನರು ಹಣದುಬ್ಬರದಿಂದ ತತ್ತರಿಸಿದ್ದಾರೆ. ಪ್ರೆಟ್ರೋಲ್, ಡೀಸೆಲ್, ದಿನಸಿ ವಸ್ತುಗಳು ಹೀಗೆ ಎಲ್ಲದರ ದರ ದುಬಾರಿಯಾಗಿದೆ. ಹಾಗಾಗಿ ಜನರಿಗೆ ಯಾವ ವಸ್ತುವನ್ನು ಖರೀದಿ ಮಾಡುವುದು ಕೂಡ ಅಷ್ಟು ಸುಲಭವಲ್ಲ. ದುಡಿದ ಹಣಕ್ಕಿಂತ ಖರ್ಚು ದುಪ್ಪಟ್ಟಾಗಿದೆ. ಈ ನಡುವೆ ಸರ್ಕಾರ ಹೊಸದೊಂದು ಘೋಷಣೆ ಮಾಡುದ್ದು, ಗೃಹಬಳಕೆಯ ಎಲ್ ಪಿ ಜಿ ಗ್ಯಾಸ್ (LPG Gas) ಅನ್ನು ಕೆವಲ 428ರೂ. ಗಳಿಗೆ ಕೊಡಲು ನಿರ್ಧರಿಸಿದೆ.

ಗೋವಾ ರಾಜ್ಯದಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಗೆ ಸಿಲೆಂಡರ್!

ಗೋವಾ ಸರ್ಕಾರ (Goa Government), ಸಾಮಾನ್ಯ ಜನರಿಗೆ ಗೋವಾ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಅಂತ್ಯೋದಯ ಪಡಿತರ ಚೀಟಿ ಇರುವವರಿಗೆ 275 ರೂ. ಹೆಚ್ಚುವರಿ ಸಹಾಯಧನ ನೀದಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಕೇವಲ 428ರೂ. ಗಳಿಗೆ ಗ್ಯಾಸ್ ಸಿಲೆಂಡರ್ (Cylinder)  ಲಭ್ಯವಾಗಲಿದೆ. ಕೇಂದ್ರ ಸರ್ಕಾರ (Central Government) ಹಾಗೂ ರಾಜ್ಯ ಸರ್ಕಾರ ಸೇರಿ ಒಂಡೂ ಗ್ಯಾಸ್ ಸಿಲೆಂಡರ್ ಮೇಲೆ 475 ರೂ. ಗಳ ಸಬ್ಸಿಡಿ (Subsidy) ಕೊಡಲಿವೆ.

ಎಲ್ಲಾ ರಾಜ್ಯಗಳಲ್ಲಿಯೂ ಸಿಲೆಂಡರ್ ಬೆಲೆ ಇಳಿಕೆ;

ಹೌದು, ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಗೃಹ ಬಳಕೆಯ ಸಿಲೆಂಡರ್ ದರವನ್ನು 200ರೂ. ಕಡಿತಗೊಳಿಸಿರುವುದಾಗಿ ಘೋಷಿಸಿದೆ. ಸಾವಿರದ ಗಡಿ ದಾಟಿದ್ದ ಸಿಲೆಂಡರ್ ದರ ಈಗ 700ರೂ. ಗಳಿಗೆ ಲಭ್ಯವಿದೆ.  ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ‘ಕೇಂದ್ರ ಸರ್ಕಾರ ಎಲ್‌ಪಿಜಿಗೆ 200 ರೂ. ಸಹಾಯಧನ ಘೋಷಿಸಿದೆ ಜೊತೆಗೆ ನಾವು ಹೆಚ್ಚುವರಿಯಾಗಿ 275 ರೂ. ಸಬ್ಸಿಡಿ ನೀಡಲಿದ್ದೇವೆ ಎಂದು ತನ್ನ ರಾಜ್ಯದ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

 ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆಯಾಗಿದ್ದು, 14.2 ಕೆಜಿ ಸಿಲಿಂಡರ್ ಗೆ ಪಣಜಿಯಲ್ಲಿ 903 ರೂ. ಆಗಿದೆ. ಇನ್ನು ಅಂತ್ಯೋದಯ ಕಾರ್ಡ್ ಇರುವವರಂತೂ 500 ರೂ. ಒಳಗೆ ಸಿಲೆಂಡರ್ ಖರೀದಿ ಮಾಡಬಹುದಾಗಿದೆ. ಇದರಿಂದಾಗಿ ಗೋವಾ ರಾಜ್ಯದ ಜನತೆಗೆ ತುಸು ರಿಲ್ಯಾಕ್ಸ್ ಆಗಿದೆ!

Comments are closed.