Health tips: ನಿಂಬೆ ಸಿಪ್ಪೆ ಅಂತ ಬಿಸಾಡಬೇಡಿ ಹುಷಾರಾಗಿ ಎತ್ತಿಡಿ; ಕೆಟ್ಟ ಕೊಲೆಸ್ಟ್ರಾಲ್, ಹೃದ್ರೋಗ ತಡೆಯೋಕ್ಕೆ ಇದುವೇ ರಾಮಬಾಣ!

Health tips: ನಿಂಬೆಹಣ್ಣಿನಲ್ಲಿ (Lemon) ಸಾಕಷ್ಟು ಆರೋಗ್ಯಕರ ಗುಣಲಕ್ಷಣಗಳು ಇವೆ. ನಿಂಬೆಹಣ್ಣಿನಲ್ಲಿ ಇರುವ ಕ್ಯಾಲ್ಸಿಯಂ ಅಂಶ ದೇಹಕ್ಕೆ ಅತ್ಯವಶ್ಯಕ. ಇದು ರೋಗನಿರೋಧಕ ಶಕ್ತಿ (Immunity Power)ಯನ್ನು ಕೂಡ ಹೆಚ್ಚಿಸುತ್ತೆ. ಸಾಮಾನ್ಯವಾಗಿ ನಾನ್ ವೆಜ್ ಆಹಾರ ಸೇವಿಸುವವರು ನಿಂಬೆಹಣ್ಣು ಹೆಚ್ಚಾಗಿ ಬಳಸುತ್ತಾರೆ. ಯಾಕೆಂದರೆ ಇದು ಜೀರ್ಣಕ್ರಿಯೆಗೂ ಕೂಡ ಸಹಾಯ ಮಾಡುತ್ತದೆ. ನಿಂಬೆ ರಸ ಮಾತ್ರವಲ್ಲ ನಿಂಬೆರಸ ಹಿಂಡಿದ ನಂತರ ಸಿಗುವ ಸಿಪ್ಪೆ ಕೂಡ ಹಲವು ರೋಗಗಳಿಗೆ ರಾಮಬಾಣ. ಇದನ್ನೂ ಓದಿ: Easy money making idea: ನಿಮ್ಮ ಜೇಬಿಂದ ಒಂದೇ ಒಂದು ರೂಪಾಯಿ ಕೂಡ ಖರ್ಚು ಮಾಡದೇ ಒಂದೇ ದಿನದಲ್ಲಿ ಗಳಿಸಿ ಕೈತುಂಬಾ ಹಣ!

ನಿಂಬೆ ಸಿಪ್ಪೆ ಪ್ರಯೋಜನಗಳು:
ಹೌದು, ಇನ್ನು ಮುಂದೆ ನಿಂಬೆರಸ ಹಿಂಡಿ ನಿಂಬೆ ಸಿಪ್ಪೆ ಬಿಸಾಡುವ ಬದಲು ಅದನ್ನು ಹುಷಾರಾಗಿ ಎತ್ತಿಡಿ. ನಿಂಬೆ ಸಿಪ್ಪೆ ಬಿಸಿಲಿನಲ್ಲಿ ಒಣಗಿಸಿ ಅದರ ಪುಡಿ ತಯಾರಿಸಿ ಇಟ್ಟುಕೊಂಡು ಸ್ಟೋರ್ ಮಾಡಿ ಇಡಬಹುದು. ಇದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?

ನಿಂಬೆ ಸಿಪ್ಪೆಯನ್ನು ಕೂದಲ ಆರೋಗ್ಯಕ್ಕೆ ಹಾಗೂ ಚರ್ಮದ ಆರೋಗ್ಯಕ್ಕೂ ಕೂಡ ಬಳಸಬಹುದು. ನಿಂಬೆ ಸಿಪ್ಪೆಯಲ್ಲಿ ಇರುವ ಪಾಲಿಫಿನಲ್ ಫ್ಲೇವನಾಯ್ಡ್ ಅಂಶ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ. ನಿಂಬೆ ಸಿಪ್ಪೆಯನ್ನು ತ್ವಚೆಯ ಮೇಲೆ ಉಜ್ಜಿದರೆ ಚರ್ಮದ ಮೇಲಿರುವ ಧೂಳು ಹಾಗೂ ಇತರ ಕೊಳಕು ಹೋಗುತ್ತದೆ. ದೇಹದ ಕಪ್ಪಾಗಿರುವ ಭಾಗದ ಮೇಲೆ ನಿಯಮಿತವಾಗಿ ನಿಂಬೆ ಸಿಪ್ಪೆ ಉಜ್ಜುತ್ತಾ ಬಂದರೆ ಕಪ್ಪಾಗಿರುವ ಭಾಗ ಸಹಜ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾರಣಕ್ಕೆ ನಿಂಬೆ ಯನ್ನು ಸಾಕಷ್ಟು ಸೌಂದರ್ಯವರ್ಧಕಗಳಲ್ಲಿಯೂ ಕೂಡ ಬಳಸಲಾಗುತ್ತದೆ. ಇದನ್ನೂ ಓದಿ: Lucky Girl: ಈ ಹೆಸರಿನ ಹೆಣ್ಣುಮಕ್ಕಳು ತಂದೆಗೆ ಎಂಥ ಅದೃಷ್ಟ ತಂದುಕೊಡುತ್ತಾರೆ ಗೊತ್ತೇ? ಯವವು ಗೊತ್ತಾ ಆ ಅಕ್ಷರಗಳು!

ನಿಂಬೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಂಡು ಅದನ್ನು ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುತ್ತಾ ಬಂದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಕೂಡ ಇದು ಸಹಾಯಕಾರಿ. ನಿಂಬೆ ಸಿಪ್ಪೆ ಪುಡಿ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ, ಮಲಬದ್ಧತೆ ಕೆಟ್ಟ ಕೊಲೆಸ್ಟ್ರಾಲ್ (Bad cholesterol) ನಂತಹ ಅನಾರೋಗ್ಯ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ.

ನಿಂಬೆ ಸಿಪ್ಪೆಯನ್ನು ಮೊಡವೆಯ ಮೇಲೆ ಹಚ್ಚಿಕೊಂಡರೆ ಮೊಡವೆಗಳು ಕಡಿಮೆಯಾಗುತ್ತದೆ. ಇನ್ನು ಮನಸ್ಸು ಸೀಮಿತದಲ್ಲಿ ಇಲ್ಲದೆ ಇರುವಾಗ ಅಥವಾ ಡಿಪ್ರೆಶನ್ ಗೆ ಹೋದಾಗ ನಿಂಬೆ ವಾಸನೆ ಮನಸ್ಸಿಗೆ ಆಹ್ಲಾದವನ್ನು ಉಂಟುಮಾಡುತ್ತದೆ. ಪ್ರಯಾಣ ಮಾಡುವಾಗ ವಾಂತಿ ಆಗುವವರು ನಿಂಬೆ ವಾಸನೆಯನ್ನು ತೆಗೆದುಕೊಂಡರೆ ವಾಕರಿಕೆ ಫೀಲಿಂಗ್ ಕಡಿಮೆಯಾಗುತ್ತದೆ. ಈ ರೀತಿ ನಿಂಬೆರಸ ಮಾತ್ರವಲ್ಲದೆ ನಿಂಬೆ ಸಿಪೆ, ಸಿಪ್ಪೆಯಿಂದ ತಯಾರಿಸಿದ ಪುಡಿ ಎಲ್ಲವೂ ಕೂಡ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಾಗಾಗಿ ನಿಂಬೆ ಸಿಪ್ಪೆಯನ್ನು ಬಿಸಾಡುವ ಬದಲು ಅದನ್ನು ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ.

Comments are closed.