Mera Bill Meta Adhikar: ಇನ್ನು ಮುಂದೆ ಶಾಪಿಂಗ್ ಬಿಲ್ ಬಿಸಾಡಬೇಡಿ; ಈ ಒಂದು ಕೆಲಸ ಮಾಡಿದ್ರೆ ಗಳಿಸಬಹುದು ಒಂದು ಕೋಟಿವರೆಗೆ ಹಣ!

Mera Bill Meta Adhikar: ಇನ್ನು ಮುಂದೆ ನೀವು ಯಾವುದೇ ಸ್ಟೋರ್ (Store) ಗೆ ಹೋಗಿ ವಸ್ತುವನ್ನು ಖರೀದಿ ಮಾಡಿದರು ಅದಕ್ಕೆ ಬಿಲ್ ಪಡೆದುಕೊಳ್ಳಲೇಬೇಕು ಇದಕ್ಕಾಗಿ ಕೇಂದ್ರ ಸರ್ಕಾರ (Central Government)  ಹೊಸ ಯೋಜನೆ ಒಂದನ್ನು ಸೆಪ್ಟೆಂಬರ್ ಒಂದರಿಂದ ಆರಂಭಿಸಿದೆ. ಜಿ ಎಸ್ ಟಿ (GST) ಪಾವತಿಯನ್ನು ಉತ್ತೇಜಿಸುವ ಸಲುವಾಗಿ ಮೇರಾ ಬಿಲ್ ಮೇರಾ ಅಧಿಕಾರ್ (Mera Bill Mera adhikar) ಎನ್ನುವ ಯೋಜನೆ ಆರಂಭವಾಗಿದೆ.

ಹೌದು, ಸದ್ಯ ಪ್ರಾಯೋಗಿಕವಾಗಿ ಅಸ್ಸಾಂ, ಗುಜರಾತ್, ಹರಿಯಾಣ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಮನ್ ಹಾಗೂ ದಿಯು ದಾದ್ರಾ ನಗರ ಹಾವೇಲಿ ಮೊದಲ ತಡೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಮೇರಾ ಬಿಲ್ ಮೀರಾ ಅಧಿಕಾರಿ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು ಈಗಾಗಲೇ ಈ ಅಪ್ಲಿಕೇಶನ್ ಅನ್ನು 1.51 ಲಕ್ಷಕ್ಕೂ ಹೆಚ್ಚಿನ ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೇರಾ ಬಿಲ್ ಮೇರಾ ಅಧಿಕಾರ್ ಪ್ರಯೋಜನಗಳೇನು?

ನೀವು ಈ ಆಪ್ ನಲ್ಲಿ ನಿಮ್ಮ ಬಿಲ್ ಪ್ರತಿಯನ್ನು ಅಪ್ಲೋಡ್ ಮಾಡಬೇಕು ಹೀಗೆ ಮಾಡಿದ್ರೆ ಈ ಯೋಜನೆಯ ಅಡಿಯಲ್ಲಿ ಒಂದು ಕೋಟಿ ರೂಪಾಯಿಗಳವರೆಗೆ ಬಹುಮಾನ ಗೆಲ್ಲುವ ಅವಕಾಶವಿದೆ.

ಯೋಜನೆಗೆ ಅಪ್ಲೈ ಮಾಡುವುದು ಹೇಗೆ?

  • ಮೊದಲಿಗೆ ನೀವು ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಥವಾ ಫೋನ್ ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳ ಬಹುದು.
  • ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ. ನಿಮ್ಮ ಹಾಗೂ ನಿಮ್ಮ ರಾಜ್ಯದ ಮೂಲ ಮಾಹಿತಿಯನ್ನು ನೀಡಬೇಕು.
  • ಜಿ ಎಸ್ ಟಿ ಬಿಲ್ ಅಪ್ಲೋಡ್ ಮಾಡಬೇಕು. ಆಪಲ್ ನಲ್ಲಿ ಇನ್ ವಾಯ್ಸ್ ನಂಬರ್ ಜಿ ಎಸ್ ಟಿ ಪಾವತಿಸಿದ ಮೊತ್ತ ತೆರಿಗೆ ಮೊತ್ತ ಎಲ್ಲವೂ ಸ್ಪಷ್ಟವಾಗಿ ಕಾಣುವಂತೆ ಇರಬೇಕು.
  • ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

ಲಕ್ಕಿ ಡ್ರಾ ವಿನ್ ಆಗಿ

ಇದರಲ್ಲಿ ಲಕ್ಕಿ ಡ್ರಾ ಆಯ್ಕೆ ಕೂಡ ಇರುತ್ತದೆ. ಪ್ರತಿ ತಿಂಗಳು ಸರ್ಕಾರ 800 ಜನರನ್ನು ಆಯ್ಕೆ ಮಾಡುತ್ತದೆ ಅವರಿಗೆ ಹತ್ತು ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ ಸಿಗುತ್ತದೆ. ಅದೇ ರೀತಿಯಾಗಿ ಇಬ್ಬರನ್ನು ಬಂಪರ್ ಡ್ರಾ ಮಾಡಿ ಆಯ್ಕೆ ಮಾಡಿ ಒಂದು ಕೋಟಿ ರೂಪಾಯಿಗಳನ್ನು ಅವರಿಗೆ ಕೊಡಲಾಗುವುದು ಒಂದು ವರ್ಷದವರೆಗೆ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿರುತ್ತದೆ ಇದು ಯಶಸ್ವಿಯಾದರೆ ಪ್ರತಿ ರಾಜ್ಯದಲ್ಲಿಯೂ ಕೂಡ ಜಾರಿಯಾಗುವ ನಿರೀಕ್ಷೆ ಇದೆ. ಒಬ್ಬ ವ್ಯಕ್ತಿ ಒಂದು ತಿಂಗಳಿಗೆ 25 ಇನ್ ವಾಯ್ಸ್ ಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ಈ ರೀತಿ ಮಾಡಿದರೆ ನಿಮ್ಮ ಬಿಲ್ ಮೇರಾ ಬಿಲ್ ಮೇರಾಧಿಕಾರ ಉಪಕ್ರಮಕ್ಕೆ ಸೇರುತ್ತದೆ. ಹಾಗೂ ಬಹುಮಾನ ಗೆಲ್ಲುವ ಅವಕಾಶವನ್ನು ನೀಡಲಾಗುತ್ತದೆ.

Comments are closed.